Ticker

6/recent/ticker-posts
Responsive Advertisement

Udupi: ವಿಶ್ವಗೀತಾ ಪರ್ಯಾಯಕ್ಕೆ ವಿಶೇಷ ಮೆರುಗು: ಉಡುಪಿ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಸಮರ್ಪಣೆ

Udupi Shri Krishna Temple
ಉಡುಪಿ, ಜನವರಿ 06
: ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿ ಉಡುಪಿ ಶ್ರೀ ಕೃಷ್ಣ ಸನ್ನಿಧಿಯಲ್ಲಿ ವಿಶೇಷ ಕಾಣಿಕೆ ಅರ್ಪಣೆಗೆ ಸಿದ್ಧತೆ ನಡೆದಿದೆ. ದೆಹಲಿಯ ಭಕ್ತರೊಬ್ಬರು ಉಡುಪಿ ಶ್ರೀ ಕೃಷ್ಣಾ ದೇವಸ್ಥಾದಲ್ಲಿ ಪ್ರತಿಷ್ಠಿತ ದೇವರಿಗೆ ಬಂಗಾರದ ಭಗವದ್ಗೀತೆಯನ್ನು ಸಮರ್ಪಿಸುವ ಸಂಕಲ್ಪ ಕೈಗೊಂಡಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪದ ವಿಶೇಷ ಕಾರ್ಯಕ್ರಮದಂದು ಈ ಅಪರೂಪದ ಹೊನ್ನಿನ ಗ್ರಂಥವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುತ್ತದೆ.

ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಬಂಗಾರದ ಭಗವದ್ಗೀತೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಶುದ್ಧ ಚಿನ್ನದ ಹಾಳೆಗಳಲ್ಲಿ ಸೂಕ್ಷ್ಮವಾಗಿ ಮುದ್ರಿಸಲಾಗಿದೆ. ಧಾರ್ಮಿಕ ಮತ್ತು ಕಲಾತ್ಮಕ ಮೌಲ್ಯಗಳನ್ನು ಒಟ್ಟಿಗೆ ಹೊತ್ತು ತಂದಿರುವ ಈ ಗ್ರಂಥವು ಭಕ್ತರಲ್ಲಿ ವಿಶೇಷ ಆಕರ್ಷಣೆಗೆ ಕಾರಣವಾಗಿದೆ.

ಕಾರ್ಯಕ್ರಮದ ದಿನ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಭವ್ಯ ಮೆರವಣಿಗೆಯ ಮೂಲಕ ಕೃಷ್ಣ ಸನ್ನಿಧಿಗೆ ಅರ್ಪಿಸಲಾಗುತ್ತದೆ. ಈ ಧಾರ್ಮಿಕ ಉತ್ಸವಕ್ಕೆ ಅಯೋಧ್ಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ  ಪ್ರಧಾನ ಕಾರ್ಯದರ್ಶಿ ಚಂಪತ್ ರೈ  ಸೇರಿದಂತೆ ಅನೇಕ ಗಣ್ಯರು, ಸಾಧುಸಂತರು ಮತ್ತು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ಅಪೂರ್ವ ಕಾಣಿಕೆ ಉಡುಪಿ ಕೃಷ್ಣ ಮಠದ ಧಾರ್ಮಿಕ ಪರಂಪರೆಗೆ ಮತ್ತೊಂದು ಮಹತ್ವದ ಅಧ್ಯಾಯವನ್ನು ಸೇರಿಸುವುದಾಗಿ ಭಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು