ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ

ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ


ನೇಪೆಲ್ಸ್ (ಇಟಲಿ) ಮಾರ್ಚ್ 24: ಬೇರೆಬೇರೆ ದೇಶಗಳಿಂದ ಭಾರತಕ್ಕೆ ಬರುತ್ತಿರುವವರಿಂದ ಕೊರೊನಾ ವೈರಸ್ ಹಿಗ್ಗಾಮುಗ್ಗಾ ಹರಡುತ್ತಿದೆ. ಈ ತರಹದ ಪರಿಸ್ಥಿತಿಗಳು ಇದ್ದರು ಕೂಡ ವಿಧಿ ಇಲ್ಲದೆ ವಿದೇಶದಲ್ಲಿ ಇರುವ ಅನೇಕರು ಭಾರತಕ್ಕೆ ಮರಳಿ ಬರುತ್ತಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯುವತಿಯೊಬ್ಬರು ತನ್ನಿಂದ ಕೊರೊನಾ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿದುಕೊಂಡಿದ್ದಾರೆ.



ಪ್ರತಿಭಾ ಹೆಗ್ಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರು. ಕಲ್ಬುರ್ಗಿ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಪ್ರತಿಭಾ ಸದ್ಯ ಇಟಲಿಯಲ್ಲಿ ವಾಸವಾಗಿದ್ದಾರೆ. ಇಟಲಿಯ ನೇಪೆಲ್ಸ್ ನಗರದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಸದ್ಯ ಕೊರೊನಾ ವೈರಸ್ ನಿಂದ ಇಟಲಿ ಭಯಾನಕವಾಗಿದೆ. ಆದರೂ, ಪ್ರತಿಭಾ ಅವರು ಅಲ್ಲಿಯೇ ಉಳಿಯುವ ನಿರ್ಧಾರವನ್ನು ಮಾಡಿದ್ದಾರೆ.



ತಮ್ಮ ಮನೆಯವರು ಭಾರತಕ್ಕೆವಾಪಸ್ ಬಾ ಎಂದು ಎಷ್ಟೇ ಹೇಳಿದರು ಕೂಡ ತನ್ನಿಂದ ಭಾರತದ ಜನಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಇಟಲಿಯಲ್ಲಿಯೇ ಈ ಕನ್ನಡತಿ ಉಳಿದಿದ್ದಾರೆ.

ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ




ಇಟಲಿಯಲ್ಲೇ ಇರುತ್ತೇನೆ
ಏನಾದರೂ ವಾಪಸ್ಸು ಬಂದರೆ ದಾರಿ ಮಧ್ಯದಲ್ಲಿ ಕೊರೊನಾ ಸೊಂಕು ತಗುಲಿದರೆ ಎಂಬ ಕಾರಣದಿಂದ ಅವರು ಅಲ್ಲಿಯೇ ಇರಲು ನಿರ್ಧರಿಸಿದ್ದಾರೆ.


ಇಟಲಿಯಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಕೊರೊನಾ ವೈರಸ್ ಹರಡಿದೆ. ಅದೃಷ್ಟವಶಾತ್ ಪ್ರತಿಭಾ ಅವರಿಗೆ ಇದುವರೆಗೆ ಕೊರೊನಾ ವೈರಸ್ ತಗುಲಿಲ್ಲ. ಆದರೆ, ಇಟಲಿಯಿಂದ ಭಾರತಕ್ಕೆ ಬರುವ ದಾರಿಯಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಆಕಸ್ಮತ್ ತಾನು ಬರುವ ದಾರಿಯಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡು ಅದನ್ನು ಭಾರತಕ್ಕೆ ತಂದರೆ ತೊಂದರೆ ಹೆಚ್ಚು ಎಂದು ಆಕೆ ಇಟಲಿಯೇ ಇರಲು ನಿರ್ಧಾರ ಮಾಡಿದ್ದಾರೆ.






ಕುಮಟಾ,ಜೂನ್ 11: ಕುಮಟಾ ತಾಲೂಕಿನ ವಕ್ಕನಳ್ಳಿ ಎಂಬಲ್ಲಿ ಮಳೆಯ ನೀರು ಹರಿದು ಹೋಗುವ ಸ್ಥಳದಲ್ಲಿ ರುಂಡವಿಲ್ಲದ ಮಹಿಳೆಯೊಬ್ಬಳ ಶವವು ತೇಲಿಬಂದಿದ್ದು ಅಲ್ಲಿನ ಜನರಲ್ಲಿ ಕೆಲಕಾಲ  ಭಯವನ್ನು ಮೂಡಿಸಿತ್ತು.


ಬೆಳಿಗ್ಗೆ ಅದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗ್ರಾಮಸ್ಥರೊಬ್ಬರು ಶವವನ್ನು ನೋಡಿ ಕುಮಟದ ಪೊಲೀಸ್ ಠಾಣೆಗೆ ವಿಷಯವನ್ನು ಮುಟ್ಟಿಸಿದ್ದಾರೆ.



ಕಳೆದ ಇಪ್ಪತ್ತೇಳು ದಿನಗಳ ಹಿಂದೆಯಷ್ಟೇ ಕುಮಟಾದ ಹಳ ಕಾರ ಗ್ರಾಮದ ನಿವಾಸಿ ಕೈರುನಾ ನಿಸಾ(87) ಎಂಬುವವರು ಮನೆಯಿಂದ  ನಾಪತ್ತೆಯಾಗಿದ್ದರು. ಶಂಕೆಗೊಂಡ ಪೊಲೀಸರು ಮನೆಯವರನ್ನು ಕರೆಯಿಸಿ ಶವವನ್ನು ಪರೀಕ್ಷಿಸಿದಾಗ ಅದು ನಾಪತ್ತೆಯಾದ ಕೈರುನಾ ನಿಸಾ ಎನ್ನುವವರ ಶವ ಎಂದು ತಿಳಿದುಬಂದಿದೆ. 


ಘಟನೆ ನಡೆದ ಸ್ಥಳದಲ್ಲಿ ಕುಮಟಾ ಠಾಣೆಯ ಸಿಪಿಐ ಪರಮೇಶ್ವರ ಗುನಗಾ, ಪಿಎಸ್ಐ ಆನಂದಮೂರ್ತಿ ಕೈಂ ಪಿಎಸ್ಐ ಸುದಾ ಹರಿಕಂತ್ರ ಮುಂತಾದವರು ಹಾಜರಿದ್ದರು. ತದನಂತರ ಶವವನ್ನು ಕುಮಟಾದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.


#Kumta
#Uttara Kannada




ಕುಮಟಾ: ಕರಾವಳಿ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅಂದರೆ 35 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಕೊರೋನಾ ಸೋಂಕಿನ ಹೊಡೆತದಿಂದ ತತ್ತರಿಸಿಹೋಗಿದ್ದಾರೆ. ಇದರಿಂದಾಗಿ ಮೀನುಗಾರರಿಗೋಸ್ಕರ ಸರ್ಕಾರವು ವಿಶೇಷ ಪ್ಯಾಕೇಜನ್ನು ಘೋಷಿಸಬೇಕು ಎಂದು MLA ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರದಿಂದ 5000 ಸಹಾಯಧನವನ್ನು ಹೇಗೆ ಪಡೆಯುವುದು? ಅಪ್ಲೈ ಮಾಡುವುದು ಹೇಗೆ?


ಕಳೆದ ವರ್ಷವೂ ಕೂಡ ಅತಿ ಮಳೆ ಮತ್ತು ನೆರೆಹಾವಳಿಯ ಪರಿಣಾಮದಿಂದಾಗಿ ಮೀನುಗಾರರು ತುಂಬಾ ಕಷ್ಟವನ್ನು ಅನುಭವಿಸಿದ್ದರು. ಈ ವರ್ಷವೂ ಕೂಡ ಕೊರೋನಾ ಮಹಾಮಾರಿಗೆ ಸಿಕ್ಕಿ ಮೀನುಗಾರರ ಜೀವನ ಸಂಕಷ್ಟದಲ್ಲಿ ಸಿಲುಕಿ ಸಿಲುಕಿಕೊಂಡಿದೆ. ಇದರಿಂದಾಗಿ ಅವರಿಗೆ ವಿಶೇಷ ಪ್ಯಾಕೇಜ ಅಗತ್ಯ ಇದೆ ಎಂದು ಎಂಎಲ್ಎ ಅವರು ಮುಖ್ಯಮಂತ್ರಿಯವರಲ್ಲಿ ಮನವಿಯನ್ನು ಮಾಡಿದ್ದಾರೆ.



INS ವಿಕ್ರಮಾದಿತ್ಯದಿಂದ "ಕೊರೊನಾ ವಾರಿಯರ್ಸ್'ಗೆ ಗೌರವ


ಕಾರವಾರ, ಮೇ 03: ಕಾರವಾರದಲ್ಲಿ ಐಎನ್ಎಸ್ ಯುದ್ಧನೌಕೆ ವಿಕ್ರಮಾದಿತ್ಯ ದಲ್ಲಿ ಶನಿವಾರ ಸಂಜೆ  ಸಿಡಿಮದ್ದುಗಳನ್ನು ಸಿಡಿಸಿ ವುದರ ಮೂಲಕ ಕೊರೊನಾ ವಾರಿಯರ್ಸ್ಗಳಿಗೆ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ  ಗೌರವವನ್ನು ಸಲ್ಲಿಸಲಾಯಿತು.


ಕೊರೊನಾ ವೈರಸ್ ಸೋಂಕಿನ  ವಿರುದ್ಧ ಹೋರಾಟಡುತ್ತಿರುವ ಕೊರೊನಾ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಮತ್ತು  ನೈರ್ಮಲ್ಯ ಉದ್ಯೋಗಿಗಳಿಗೆ ಗೌರವವನ್ನು ಸಲ್ಲಿಸುವಂತೆ ಸೂಚನೆ ಬಂದಿದ್ದ ಕಾರಣ ಕಾರವಾರದ ಸೀಬರ್ಡ್ ನೌಕಾನೆಲೆ ವಿಕ್ರಮಾದಿತ್ಯ ದಲ್ಲಿ ವಿಶೇಷವಾಗಿ ಗೌರವವನ್ನು ಸಲ್ಲಿಸಲಾಯಿತು.


ರಾಷ್ಟ್ರದ ಅತಿದೊಡ್ಡ ಯುದ್ಧ ವಿಮಾನವಾಹಕ ನೌಕೆ ಎಂದೇ ಹೆಸರಾದ ಐಎನ್ಎಸ್ ವಿಕ್ರಮಾದಿತ್ಯ ವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಂಜೆವೇಳೆಗೆ ಸಿಡಿಮದ್ದುಗಳನ್ನು ಸಿಡಿಸಲಾಯಿತು.



ಶಿರಸಿ: ಝೂಮ್ ಆಪ್ ಮೂಲಕ ಆನ್ಲೈನ್ ತರಗತಿಯನ್ನು ಪ್ರಾರಂಭಿಸಿದ ತೋಟಗಾರಿಕಾ ಕಾಲೇಜು


ಶಿರಸಿ: ಬಾಗಲಕೋಟೆ ಮೂಲದ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಲ್ಲಾ ಒಂಬತ್ತು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.

ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಜೂಮ್ ಆ್ಯಪ್ ಬಳಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ವಿಶ್ವವಿದ್ಯಾಲಯವು ಸಿರ್ಸಿ, ಅರಭವಿ, ಬೀದರ್, ಬಾಗಲ್ಕೋಟ್, ಬೆಂಗಳೂರು, ಮೈಸೂರು, ಕೋಲಾರ, ಮುನಿರಾಬಾದ್ ಮತ್ತು ದೇವಿಹೋಸೂರ್ನಲ್ಲಿ ಅಂಗಸಂಸ್ಥೆ ಕಾಲೇಜುಗಳನ್ನು ಹೊಂದಿದೆ.

"ಲಾಕ್ಡೌನ್ ಘೋಷಿಸುವ ಮೊದಲು ಸೆಮಿಸ್ಟರ್ ತರಗತಿಗಳು ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿದ್ದವು. ಆಂತರಿಕ ಪರೀಕ್ಷೆಗಳನ್ನು ಸಹ ಅವರಿಗೆ ನಡೆಸಲಾಗಲಿಲ್ಲ. ಆದ್ದರಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಪ್ರತಿ ವರ್ಗದ ವಿದ್ಯಾರ್ಥಿಗಳು, ಅವರ ಅಧ್ಯಾಪಕರು ಮತ್ತು ಡೀನ್ ಸೇರಿದಂತೆ ವಾಟ್ಸಾಪ್ ಗುಂಪನ್ನು ರಚಿಸಲಾಗಿದೆ. ಈ ಗುಂಪಿನಲ್ಲಿ ಟಿಪ್ಪಣಿಗಳನ್ನು ಹಂಚಿಕೊಳ್ಳಲಾಗಿದೆ ”ಎಂದು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಇಂದಿರೇಶ್ ಕೆ ಎಂ ಹೇಳಿದರು.

ಜೂಮ್ ಆ್ಯಪ್‌ನಲ್ಲಿ 100 ಸದಸ್ಯರಿಗೆ ಅವಕಾಶ ಕಲ್ಪಿಸಬಹುದಾಗಿದ್ದು, ಪ್ರತಿ ತರಗತಿಯಲ್ಲಿ ಸುಮಾರು 70 ವಿದ್ಯಾರ್ಥಿಗಳು ಇದ್ದಾರೆ ಎಂದು ಅವರು ಹೇಳಿದರು. ಪ್ರತಿಯೊಂದು ಕಾಲೇಜು ತನ್ನದೇ ಆದ ಗುಂಪನ್ನು ರಚಿಸಿದೆ. ಮೂರನೇ ವರ್ಷದ ವಿದ್ಯಾರ್ಥಿಗಳಿಗೆ 90% ಪಠ್ಯಕ್ರಮವನ್ನು ನೀಡಲಾಗಿದೆ ಮತ್ತು ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಪ್ರಬಂಧವನ್ನು ಸಲ್ಲಿಸಬೇಕು ಮತ್ತು ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ವಿಸಿ ಸೇರಿಸಲಾಗಿದೆ.

ಸಿರ್ಸಿಯ ಕಾಲೇಜ್ ಆಫ್ ಫಾರೆಸ್ಟ್ರಿ ಡೀನ್ ಡಾ ಎನ್ ಕೆ ಹೆಗ್ಡೆ ಮಾತನಾಡಿ, ಸಾಮಾನ್ಯ ಒಂದು ಗಂಟೆ ಅವಧಿಯ ಬದಲು, ಆನ್‌ಲೈನ್ ತರಗತಿಗಳಲ್ಲಿ ನಿರ್ದಿಷ್ಟ ಕೋರ್ಸ್‌ಗೆ ಅರ್ಧ ದಿನವನ್ನು ಕಾಯ್ದಿರಿಸಲಾಗಿದೆ. “ಮೊಬೈಲ್ ನೆಟ್‌ವರ್ಕ್‌ನ ಸಮಸ್ಯೆಗಳಿಂದಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ತರಗತಿಗಳನ್ನು ಬೆಳಿಗ್ಗೆ 9 ರಿಂದ 1 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ ನಡೆಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿನ ಧ್ವನಿಯು ಸದಸ್ಯರ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ ಸ್ಪಷ್ಟತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ, ತರಗತಿಗಳ ಆಡಿಯೊ ರೆಕಾರ್ಡಿಂಗ್ ಅನ್ನು ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಲಾಗಿದೆ, ”ಎಂದು ಡಾ. ಹೆಗ್ಡೆ ಹೇಳಿದರು.

ದೂರದ ಹಳ್ಳಿಗಳಲ್ಲಿರುವವರು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ನೆಟ್‌ವರ್ಕ್ ಪಡೆಯುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು. "ಲಾಕ್ ಡೌನ್ ಕಾರಣದಿಂದಾಗಿ ಅವರ ಚಲನೆಯನ್ನು ನಿರ್ಬಂಧಿಸಲಾಗಿರುವುದರಿಂದ ಅವರು ಉತ್ತಮ ನೆಟ್‌ವರ್ಕ್ ಹುಡುಕಲು ಬೇರೆ ಯಾವುದೇ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ" ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement