ಹೊನ್ನಾವರ: ವಿದೇಶದಲ್ಲಿ ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿ ಹೊನ್ನಾವರದ ಯುವತಿಯೊಬ್ಬಳಿಗೆ ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಾರವಾರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಮೂವರು ತಿಪುರ ಮತ್ತು ಅಸ್ಸಾಂ ರಾಜ್ಯಕ್ಕೆ ಸೇರಿದವರು ಹಾಗೂ ಒಬ್ಬ ಬೆಂಗಳೂರಿಗೆ ಸೇರಿದವರು ಎಂದು ಹೇಳಲಾಗಿದೆ. ಆರೋಪಿಗಳು ಇಮೇಲ್ ಮೂಲಕ ಹೊನ್ನಾವರದ ನೇತ್ರಾವತಿಗೌಡ ಎಂಬುವವರನ್ನು ಸಂಪರ್ಕಿಸಿ ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆಯನ್ನು ನೀಡಿ ಬ್ಯಾಂಕಿನ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.
ಎಷ್ಟೇ ದಿನಗಳು ಕಳೆದರೂ ಕೆಲಸದ ಸುಳಿವು ಇಲ್ಲದೆ ಇದ್ದಾಗ ಯುವತಿಯು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ. ದೂರನ್ನು ಆಧರಿಸಿ ಪೊಲೀಸರು ವಂಚನೆ ಪಡಿಸಿದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.