ಯಲ್ಲಾಪುರದ ತೇಜಸ್ವಿನಿ ಭಟ್ ಅವರು ದಾವಣಗೆರೆ ವಿಶ್ವವಿದ್ಯಾಲಯದ ಎಂಎಸ್ಸಿ ಪದವಿಯಲ್ಲಿ ಬಂಗಾರದ ಪದಕವನ್ನು ಪಡೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಎಂಎಸ್ಸಿ ಪದವಿ ಪರೀಕ್ಷೆಯ ಸಸ್ಯ ಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಅವರು ಈ ಸಾಧನೆಯನ್ನು ಮಾಡಿದ್ದಾರೆ.
ಇದನ್ನು ಓದಿ: ನನ್ನಿಂದ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ
ಇವರು ಉಮಾಮಹೇಶ್ವರ ಭಟ್ ಹಾಗೂ ಶೈಲಶ್ರೀ ಭಟ್ ದಂಪತಿಗಳ ಮಗಳಾಗಿದ್ದಾರೆ. ಈ ಹಿಂದೆ ಇವರು ಕಾರವಾರದ b.ed ಕಾಲೇಜಿನಲ್ಲಿ ಕೂಡ ಪ್ರಥಮ ಸ್ಥಾನ ಬಂದಿದ್ದರು. ಇವರ ಈ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಎಂಎಲ್ಸಿ ಶಾಂತಾರಾಮ್ ಸಿದ್ದಿ ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿಎಸ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.