ಕುಮಟದ ನಾಡುಮಸ್ಕೆರಿಯಲ್ಲಿ ಯುವಕನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿನಾಯಕ ಗೌಡ ಎಂಬಾತ ಯಾವುದೋ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥನಾಗಿದ್ದ ಈತನನ್ನು ಗೋಕರ್ಣದ ಅಂಬುಲೆನ್ಸ್ ಚಾಲಕ ನಾಗರಾಜ ಗೌಡ ಹಾಗೂ ಸಿಬ್ಬಂದಿ ಕಲ್ಪನಾ ಹೊಸ್ಕಟ್ಟಾ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅಲ್ಲಿಂದ ಕೇವಲ 23 ನಿಮಿಷಗಳಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮೂಲಕ ಅಸ್ವಸ್ಥಗೊಂಡ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.