ರೈಲು ಹಳಿಯನ್ನು ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ರೈಲು ಬಡಿದು ಸಾವನಪ್ಪಿದ ಘಟನೆ ಮುರುಡೇಶ್ವರದ ಬಸ್ತಿಮಕ್ಕಿ ರೈಲ್ವೆ ಸೇತುವೆ ಬಳಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ವ್ಯಕ್ತಿ ರಾಜು ಮೊಗೇರ್ ಎಂದು ಗುರುತಿಸಲಾಗಿದೆ. ಈತ ಬೆಂಗ್ರೆ ನಿವಾಸಿ ಎಂದು ತಿಳಿದು ಬಂದಿದೆ.
ಈ ಘಟನೆ ಶನಿವಾರ ರಾತ್ರಿ10:45 ರಿಂದ ಭಾನುವಾರ ಬೆಳಗಿನ ಜಾವ ಆರು ಗಂಟೆಯ ಒಳಗಡೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಸುದ್ದಿಯನ್ನು ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮೃತ ಹೊಂದಿದ ವ್ಯಕ್ತಿಯ ಮೊಬೈಲ್ ಸಹಾಯದಿಂದ ಸಂಬಂಧಿಕರನ್ನು ಪತ್ತೆಹಚ್ಚಲಾಗಿದೆ. ಈ ಘಟನೆ ಬಗ್ಗೆ ಶೇಖರ ಮಾಸ್ತಿ ಮೊಗೇರ್ ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.