ಭಟ್ಕಳ: ಶಿರಾಲಿಯ ಚಿತ್ರಾಪುರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯಿದೆಯಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ರವಿ ಪಟಗಾರ್ ( 35ವರ್ಷ) ಮತ್ತು ಶಿವರಾಜ್ ನಾಯಕ್ ಬಂಧನಕೊಳಗಾದ ಆರೋಪಿಗಳಾಗಿದ್ದಾರೆ. ರವಿ ಪಟಗಾರ್ ಎನ್ನುವಾತ ಶಿರಸಿ ಮೂಲದವನು ಹಾಗೂ ಶಿವರಾಜ್ ನಾಯಕ್ ( 22 ವರ್ಷ) ಈತ ಶಿರಾಲಿಯ ಗುಡಿ ಹಿತ್ತಲ ನಿವಾಸಿ ಎಂದು ತಿಳಿದು ಬಂದಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು ಇದೀಗ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.