Ticker

6/recent/ticker-posts
Responsive Advertisement

Film: ಶ್ರದ್ಧಾ ಕಪೂರ್ ಹೊಸ ಜೀವನಕ್ಕೆ ಸಿದ್ಧತೆ

Shradda Kapoor
ಮದುವೆ ವಿಚಾರವಾಗಿ ನಿರಂತರವಾಗಿ ಕೇಳಿಬರುವ ಪ್ರಶ್ನೆಗಳಿಗೆ ಶ್ರದ್ಧಾ ಕಪೂರ್ ಈಗ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡ ಕೇವಲ ನಾಲ್ಕು ಪದಗಳ ಪೋಸ್ಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೇರವಾಗಿ ಹೇಳದೇ ಇದ್ದರೂ, ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಸಿದ್ಧರಾಗಿರುವ ಸುಳಿವು ಅದರಲ್ಲಿ ಕಾಣಿಸುತ್ತಿದೆ.

ಈ ನಡುವೆ ಶ್ರದ್ಧಾ ಅವರಿಗಿಂತ ಮೂರು ವರ್ಷ ಚಿಕ್ಕವನ ಜೊತೆ ಮದುವೆ ಆಗಬಹುದು ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ವಯಸ್ಸಿಗಿಂತ ಪರಸ್ಪರ ಒಪ್ಪಿಗೆ ಮತ್ತು ಮನಸ್ಸಿನ ಹೊಂದಾಣಿಕೇ ಮುಖ್ಯ ಎಂಬ ಸಂದೇಶವನ್ನು ಅವರು ನೀಡಿದಂತಾಗಿದೆ. ಇದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.

ಆದರೆ ಈ ಬಗ್ಗೆ ಶ್ರದ್ಧಾ ಕಪೂರ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ದಿನಾಂಕ, ವರ ಅಥವಾ ಮದುವೆ ಕಾರ್ಯಕ್ರಮದ ವಿವರಗಳು ಹೊರಬರಬೇಕಿದೆ. ಆದರೂ ಅವರ ಒಂದು ಪೋಸ್ಟ್ ಸಾಕು – ಮದುವೆ ವಿಚಾರ ಮತ್ತೆ ಹಾಟ್ ಟಾಪಿಕ್ ಆಗಲು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು