ಕೆಲವು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ನೌಕೆಯಲ್ಲಿನ ಕ್ಷಿಪಣಿ ವ್ಯವಸ್ಥೆ, ರಡಾರ್ ಉಪಕರಣಗಳು ಮತ್ತು ನಿಯಂತ್ರಣ ಕೊಠಡಿ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನೌಕೆಯೊಳಗಿನ ಪ್ರದರ್ಶನಗಳು ಸಮುದ್ರ ಯುದ್ಧ ತಂತ್ರಜ್ಞಾನವನ್ನು ಸರಳವಾಗಿ ಪರಿಚಯಿಸುತ್ತವೆ.
ಸ್ಥಳೀಯ ಆಡಳಿತ ಮತ್ತು ನೌಕಾಪಡೆಯ ಸಹಕಾರದಿಂದ ಮ್ಯೂಸಿಯಂಗೆ ಹೊಸ ರೂಪ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ಒಮ್ಮೆ ದೇಶರಕ್ಷಣೆಗೆ ಬಳಸಿದ ‘ಕ್ಷಿಪಣಿ’, ಇಂದು ಇತಿಹಾಸ ಮತ್ತು ದೇಶಭಕ್ತಿಯ ಸಂಕೇತವಾಗಿ ಕಾರವಾರದಲ್ಲಿ ಮಿಂಚುತ್ತಿದೆ.
ಒಮ್ಮೆ ಸೇವೆಯಲ್ಲಿ ಶತ್ರುಗಳಿಗೆ ಭೀತಿಯ ಸಂಕೇತವಾಗಿದ್ದ ಈ ಕ್ಷಿಪಣಿ ನೌಕೆ, ಇಂದು ಇತಿಹಾಸದ ಸಾಕ್ಷಿಯಾಗಿ ನಿಂತು ದೇಶಭಕ್ತಿಯ ಸಂದೇಶ ನೀಡುತ್ತಿದೆ. ಮೂಲೆಗುಂಪಾಗಿದ್ದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ ಬಂದು, ಕಾರವಾರದ ಪ್ರವಾಸೋದ್ಯಮಕ್ಕೂ ಹೊಸ ಚೈತನ್ಯ ನೀಡುತ್ತಿರುವುದು ವಿಶೇಷ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.