ಕಣ್ಣಲಿ ಹುಟ್ಟಿದ ಚಿಕ್ಕಕನಸು ತುಂಬಾ ದೂರದ ಬೆಳಕಾಯಿತು
ಕನಸಾದ ಈ ಕನಸು ಪ್ರತಿ ಮನಸ್ಸಿನ ಪ್ರಶ್ನೆಯಾಗಿ ಜೀವನವೇ ಬದಲಾಯ್ತು
ಅದರ ಬಿಂಬದ ಹಿಂದೆ ನಾವು ಓಡುತ್ತಲೇ ಇದ್ದೇವೆ
ಸಾವಿರ ಬಾರಿ ನಿಂತರೂ ನಿಲ್ಲದ ಹೆಜ್ಜೆಗಳು ನಾವು
ಕನಸಾದ ಈ ಕನಸು ಅಭ್ಯಾಸವಾಗಿ ಬದಲಾಗಿ ನಮ್ಮ ಜೀವನವಾಯಿತು
ಸಣ್ಣ ಕನಸುಗಳೇ ಒಂದು ದಿನ ದೊಡ್ಡ ಸತ್ಯವಾಗುತ್ತವೆ
ಕನಸಾದ ಈ ಕನಸು... 🌸
ಸ್ನೇಹಿತರೇ, ಈ ಒಂದು ಕಥೆಯ ಸಾರಾಂಶ ಪ್ರತಿ ಒಂದು ಹೆಣ್ಣಿನ ಜೀವನದಲ್ಲೂ ಒಂದೊಂದು ತಿರುವುಗಳು ಇದ್ದೇ ಇರುತ್ತದೆ. ಅದಕ್ಕೆ ನಾವು ಶ್ರಮವಹಿಸಿ ಕೆಲಸ ಮಾಡಿದಾಗ ನಮ್ಮ ನಿರೀಕ್ಷೆಗೂ ಮೀರಿದ ಹಂತವನ್ನು ತಲುಪುತ್ತೇವೆ ಅಲ್ಲವೇ?
ಸ್ನೇಹಿತರೇ, ನನ್ನ ಈ ಕಥೆಯ ಉದ್ದೇಶವು ಒಂದೇ — “ನಮ್ಮ ಜೀವನದಲ್ಲಿ ಅದು ಏನೇ ಒಂದು ತಿರುವುಗಳು ಬರಲಿ, ನಾವು ಅದನ್ನು ತಾಳ್ಮೆಯಿಂದ ಹೇಗೆ ಜೀವನವನ್ನು ಮುನ್ನಡೆಸುತ್ತೇವೆ ಎಂಬುದು ಇದರ ಅರ್ಥ.”
ಈ ಕಥೆಯಲ್ಲಿ ಗುರುಗಳು ನಮಗೆ ಯಾಕೆ ಅವಶ್ಯಕ, ನಾವು ನಡೆಯುವ ದಾರಿಯಲ್ಲಿ ಎಂಬುದು ಈ ಕಥೆಯಲ್ಲಿ ನಮಗೆ ಬಹಳ ಹತ್ತಿರವಾಗಿದೆ, ನಮ್ಮ ಜೀವನಕ್ಕೆ ಎಂದು ಗೊತ್ತಾಗುತ್ತದೆ. ಯಾಕೆ? ನಾನು ಇಷ್ಟೊಂದು ಪೀಠಿಕೆ ಹಾಕುತ್ತಿದ್ದೀನಿ ಅಂದ್ರೆ, ಈ ಕಥೆಯು ನಿಮ್ಮ ಜೀವನದ ಕೆಲವೊಂದು ಘಟನೆಗಳನ್ನು ನೆನಪಿಸಬಹುದು.
ಸರಳವಾದ ಜೀವನ, ಆಟ, ಪಾಠ, ಸಮಯ ಪ್ರಜ್ಞೆ ನಮ್ಮಲ್ಲಿ ಹೇಗೆ ಬೆಳೆಯುತ್ತದೆ... ನಾವು ಈಗ ನೋಡುತ್ತಿರುವುದು ಅಷ್ಟರಷ್ಟರ ಜೀವನ ಅಲ್ಲ; ಒಂದು ಮುಗ್ಧ ಹುಡುಗಿ ಚಿಕ್ಕ ವಯಸ್ಸಿನಲ್ಲೇ ಮಾಡುವ ಸಾಧನೆ ಹಾಗೂ ಅವಳಲ್ಲಿ ಸಮಯ ಪ್ರಜ್ಞೆ ಹೇಗೆ ಹಂತ ಹಂತವಾಗಿ ಹೆಚ್ಚಿಸುತ್ತಾ ಹೋಗುತ್ತದೆ ಎಂಬುದು ನಾವು ನೋಡಬೇಕಾಗಿರುವ ಅಂಶ ಅಲ್ಲವೇ?
ಸ್ನೇಹಿತರೆ...!
ಈ ಕಥೆಯ ನಾಯಕಿಯ ಹೆಸರು ಗಿರಿಜಾ. ನಿಮಗೆ ಒಂದು ಪ್ರಶ್ನೆ ಮೂಡಿರಬಹುದು ಅಲ್ಲವೇ? ಈ ಕಥೆಗೆ “ಕನಸಾದ ಈ ಕನಸು – ಗಿರಿಜಾ” ಅನ್ನೋ ಟೈಟಲ್ ಯಾಕೆ ಬಂತು ಅಂತ ನಿಮಗೆ ಗೊಂದಲ ಇರಬಹುದು. ಅದಕ್ಕೆ ನಾನು ನಿಮಗೆ ಮೊದಲ ಅಧ್ಯಾಯದಿಂದಲೇ ತಿಳಿಸುತ್ತೇನೆ... ಸ್ನೇಹಿತರೇ.
“ಕನಸಾದ ಈ ಕನಸು” ಇದು ನನ್ನ ಕವನ. ಕಥೆ ಯಾವಾಗಲೂ ನಾವು ಒಂದು ಗೀತೆಯಿಂದ ಶುರು ಮಾಡುತ್ತೇವೆ ಅಲ್ಲವೇ? ಹಾಗೇ ನಾನು ಈ ಕಥೆ ಶುರು ಮಾಡಲು ನನ್ನ ಸ್ವಂತ ರಚನೆಯಾದ “ಕಣ್ಣಲಿ ಹುಟ್ಟಿದ ಚಿಕ್ಕಕನಸು ತುಂಬಾ ದೂರ ಬೆಳಕಾಯಿತು” ಎಂಬ ಕವನವನ್ನು ಬಳಸಿದ್ದೇನೆ.
ಈ ಕವನ ನಿಮಗೆ ಇಷ್ಟವಾಯಿತಾ? ಸ್ನೇಹಿತರೇ!
ಹೌದು! ಸ್ನೇಹಿತರೇ, ನನ್ನ ಜೀವನದಲ್ಲಿ ಪ್ರತಿಲಿಪಿ ಮತ್ತೆ ಒಂದು ಹೊಸ ರೂಪ ಕೊಟ್ಟಿದೆ. ನನ್ನಲ್ಲಿ ಚಿಕ್ಕವಯಸ್ಸಿನಿಂದಲೂ ನನಗೆ ಸಾಧನೆ ಮಾಡಬೇಕು ಎಂಬ ಹಂಬಲ ತುಂಬಾ ಇತ್ತು. ಕಾಲೇಜ್ ಮುಗಿದ ಮೇಲೆಯೇ ಕೆಲಸ, ಕೆಲಸ ಎಂದು ಓಡಾಡಿದೆ. ಕೆಲಸ ಏನೋ ಸಿಕ್ತು, ಆದರೂ ಮನಸ್ಸಿಗೆ ತೃಪ್ತಿ ಸಿಗಲಿಲ್ಲ. ಸ್ನೇಹಿತರೇ, ನಂತರ ಬಂದ ಕಷ್ಟಗಳು ಸಾಗರದಷ್ಟು. ಆ ಅಲೆಗಳಲ್ಲೇ ನಾನು ದಿನಾಲೂ ಕೊಚ್ಚಿಹೋಗುತ್ತಿದ್ದೀನೋ ಅನ್ನೋ ತರ ಜೀವನ ಇತ್ತು. ಹಾಗೋ ಹೀಗೋ ಆ ಭಯಂಕರವಾದ ಬೆಂಗಳೂರಿನಲ್ಲೂ ಕೆಲವೊಂದು ಸಲ ತಣ್ಣನೆ ಗಾಳಿ ಬೀಸೋ ಹಾಗೇ ಅನಿಸುತ್ತಿತ್ತು.
ಆಮೇಲೆ ಬೆಂಗಳೂರು ಬೇಜಾರ್ ಬಂತು. ಅಲ್ಲಿ ಜೀವನಕ್ಕೆ ನನ್ನ ಹತ್ತಿರ ಇರೋದಿಕ್ಕೆ ಆಗಲಿಲ್ಲ. ಯಾಕಂದ್ರೆ ನಾನು ಹಳ್ಳಿಯಿಂದ ಬೆಂಗಳೂರಿಗೆ ಬಂದ ಹುಡುಗಿ. ನನಗೆ ಅಷ್ಟು ವರ್ಷ ಬೆಂಗಳೂರು ಇದ್ದರೂ ಅಲ್ಲಿನ ಫ್ಯಾಷನ್‌ಗೆ ಹೊಂದಿಕೊಳ್ಳೋದು ಬಹಳ ಕಷ್ಟವಾಯಿತು.
ಇದೇನೋ ಇವಳು ಕಥೆಯಲ್ಲಿ ತಿಳಿಸಿರುವ ಹಾಗೇ ಇವಳು ಈಗ ಇವಳ ಜೀವನದ ಬಗ್ಗೆ ಪುರಾಣ ಹೊಡೆಯುತ್ತಿದ್ದಾಳಾ ಅಂತ ತಿಳ್ಕೊಳ್ಬೇಡಿ. ಕಾರಣ ಇಷ್ಟೇ — ನಾ ಯಾಕೆ ಇಷ್ಟೊಂದು ಕಥೆ ಹೇಳ್ತಾ ಇದೀನಿ ನನ್ನ ಬಗ್ಗೆ ಅಂದರೆ ಮುಂದೆ ಬರುವ ಕಥೆ ನನ್ನ ಸ್ವಂತ ರಚನೆಯೇ, ಆದರೆ ಅದು ನನ್ನ ಜೀವನದಲ್ಲಿ ನಡೆದಿರುವ ಘಟನೆ ಅಲ್ಲಾ... ಸ್ನೇಹಿತರೇ.
“ಕಣ್ಣಲ್ಲಿ ಹುಟ್ಟಿದ ಚಿಕ್ಕಕನಸು ತುಂಬಾ ದೂರ ಬೆಳಕಾಯಿತು...” ಇದು ನಾನು ನನ್ನ ಕನಸಿಗೆ ಬೆಂಬಲವಾಗಿ ನಿಂತ ಪ್ರತಿಲಿಪಿಗೆ ಅರ್ಪಿಸುತ್ತೇನೆ.
ಗಿರಿಜಾ ಈ ಪದ ಟೈಟಲ್ ಯಾಕೆ ಅಂದರೆ ಕಾರಣ ರಾಮಾಯಣದಲ್ಲಿ ಸೀತಾ ಮಾತೆಯನ್ನು ಹಲವು ಹೆಸರುಗಳಿಂದ ಕರೆಯಲ್ಪಡುತ್ತಿದ್ದರು — ಜಾನಕಿ, ಸೀತಾ, ಗಿರಿಜಾ, ಸೀತಾ ರಾಮ್ ಹೀಗೆ ಹಲವಾರು ಹೆಸರುಗಳು. ನನಗೆ ಸೀತಾ ರಾಮ್ ಅಂದರೆ ಬಹಳ ಪ್ರಿಯವಾದ ಹಾಗೂ ಆದರ್ಶವಾದ ದಂಪತಿಗಳು.
ಅದಕ್ಕೆ ನನಗೆ ಸೀತಾ ಮಾತೆಯ ಇನ್ನೊಂದು ಹೆಸರಾದ ಗಿರಿಜಾ ಅನ್ನೋ ಟೈಟಲ್ ತೆಗೆದುಕೊಂಡಿರುವುದು.
ಬದುಕಿನ ಏಳು-ಬೀಳುಗಳು, ಜೀವನದ ಅದ್ಭುತ ಘಟನೆಗಳು ಹೀಗೇ ಮುಂದುವರಿಯುವುದು ನಾನು ಸ್ವಂತ ರಚಿಸಿದ ಈ ಕಥೆ.
ಮೊದಲು ನಾವು ಗಿರಿಜಾ ಅವಳ ಊರಿನ ಬಗ್ಗೆ ಮಾತನಾಡೋಣ ಅಲ್ಲವೇ ಸ್ನೇಹಿತರೇ!
ಊರೆಂದರೆ ನಿಮ್ಮ ಮನಸಿನಲ್ಲಿ ಬರುವ ಕಲ್ಪನೆ ಸರಿಯಾಗಿಯೇ ಇದೆ. ಹೌದು ಸ್ನೇಹಿತರೆ, ಗಿರಿಜಾಳ ಊರು ಸ್ವರ್ಗಲೋಕದಂತೆ ಕಂಗೊಳಿಸುತ್ತಿತ್ತು.
ಸುತ್ತಲೂ ಕಾಡು, ಧುಮುಕುವ ಜಲಪಾತ, ಸರಸರನೆ ಹರಿಯುವ ನೀರು, ಬಾನೆತ್ತರಕ್ಕೆ ಬೆಳೆದು ನಿಂತ ಅಡಿಕೆ, ತೆಂಗಿನ ತೋಟಗಳು...
ಮುಂಜಾನೆ ಬೇಗ ಎದ್ದು ರೈತರು ತಮ್ಮ ತಮ್ಮ ಎತ್ತುಗಳು ಹಾಗೂ ಅದಕ್ಕೆ ಕಟ್ಟಲು ಬೇಕಾದ ನೇಗಿಲು ಹಿಡಿದು ಗದ್ದೆಗಳಿಗೆ ಹೋಗುತ್ತಿದ್ದರು. ಇನ್ನೂ ಕೆಲವು ರೈತರು ತಾವು ಬೆಳೆದ ಅಡಿಕೆ ಕೊಯ್ಲು ಮಾಡಲು ಧೋಟಿಯನ್ನು ಹಿಡಿದುಕೊಂಡು ತೋಟಗಳಿಗೆ ಹೋಗುತ್ತಿದ್ದರು. ಅವರ ಹಿಂದೆ ಮಕ್ಕಳು “ತಾ ಮುಂದು, ತಾ ಮುಂದು” ಅಂತ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪನವರ ಹಿಂದೆ ಓಡುತ್ತಿದ್ದರು.
ಸ್ನೇಹಿತರೇ! ಇದುವೇ ಅಲ್ಲವೇ ಮನುಷ್ಯ ಸುಖವಾದ ಜೀವನ ಮಾಡಲು. “ಕೆಲಸದಲ್ಲಿ ಸ್ವರ್ಗ ಸುಖವನ್ನು ಅರಿತರೆ ಯಾವ ವ್ಯಕ್ತಿಯೂ ಸೋಮಾರಿತನ ಬೆಳೆಸಿಕೊಳ್ಳಲಾರ.”
ಮನೆಯ ಹೆಂಗಸರು ಕೂಡ ಅಷ್ಟೇ ಚಾತುರ್ಯದಿಂದ ಮನೆಯ ಕೆಲಸವನ್ನು ಮುಗಿಸಿ ತಮ್ಮ ತಮ್ಮ ಹೊಲಗಳಿಗೆ ಸಹಾಯ ಮಾಡಲು ಅವರಿಗೆ ಬೇಕಾದ ಆಹಾರವನ್ನು — ಅಂದರೆ ಸ್ವಲ್ಪ ಕುಡಿಯಲು ಮಜ್ಜಿಗೆ, ನೀರು, ಹಾಗೇ ಸ್ವಲ್ಪ ಕಾಯಿ, ಈರುಳ್ಳಿ ಹಾಕಿ ಕಲಸಿದ ಅವಲಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ಆ ಊರಲ್ಲಿ ಇನ್ನೊಂದು ವಿಶೇಷ! ಎಂದರೆ ಅಲ್ಲಿರುವ ದೇವಸ್ಥಾನ.
ಆ ದೇವಸ್ಥಾನದ ವಿಶೇಷ ಏನೆಂದರೆ ತಾನಾಗಿಯೇ ಉದ್ಭವವಾಗಿ ಮೂಡಿಬಂದ ದೇವರ ಮೂರ್ತಿ. ಅದು ಕೇವಲ ಶಿಲೆಯಲ್ಲಿ ಕೆತ್ತಿದ ಹಾಗೆ ಕಾಣದೆ ಒಂದು ಹುತ್ತದ ರೂಪದಲ್ಲಿ ಕಾಣುವ ಸಿದ್ಧಿವಿನಾಯಕ ದೇವರು. ಮತ್ತೆ ಒಂದು ಹಳೆಯ ಕಾಲದಲ್ಲಿ ಕೆತ್ತನೆ ಮಾಡಿದ ಮಠ. ಅಲ್ಲಿ ಇದ್ದ ಗುರುಗಳು ರಾಯರ ಹಾಗೇ ಮುಖದಲ್ಲಿ ತೇಜಸ್ಸು ತುಂಬಿಕೊಂಡು ನೋವನ್ನು ಹೇಳಿಕೊಂಡು ಬಂದ ಭಕ್ತರಿಗೆ ತಮ್ಮ ಹಿತನುಡಿಗಳಿಂದ, ಅವರು ರಾಯರ ಹಾಗೇ ತಂದೆ-ತಾಯಿ ಮಕ್ಕಳನ್ನು ಹೇಗೆ ಸಮಾಧಾನ ಮಾಡುತ್ತಾರೋ ಹಾಗೇ ಅಲ್ಲಿಯ ಗುರುಗಳು ತಮ್ಮನ್ನು ನೋಡಲು ಬಂದ ಭಕ್ತರನ್ನು ಸಮಾಧಾನ ಮಾಡುತ್ತಿದ್ದರು.
ಊರಲ್ಲಿ ಇದ್ದ ಮಕ್ಕಳು ದೇವಸ್ಥಾನದಲ್ಲಿರುವ ಪುಷ್ಕರಣಿಯಲ್ಲಿ ಮಿಂದು ಖುಷಿಪಡುತ್ತಿದ್ದರು. ಅದನ್ನು ತಡೆಯಲು ದೇವಸ್ಥಾನದಲ್ಲಿದ್ದ ಒಬ್ಬ ಭಟ್ಟ ಮಾತ್ರ ಮಕ್ಕಳನ್ನು ಹೊಡೆಯಲು ಕೋಲು ಹಿಡಿದುಕೊಂಡು, ಮಕ್ಕಳು ಇದ್ದ ಪುಷ್ಕರಣಿಗೆ ಓಡಿ ಬರುತ್ತಿದ್ದರು. ಇದನ್ನು ದೂರದಲ್ಲೇ ಕಂಡ ಮಕ್ಕಳು ಇದ್ದೋ ಬಿದ್ದೋ ಓಡಲು ಶುರುಮಾಡುತ್ತಿದ್ದರು.
ಈ ಜೀವನ ಬಲು ಹಿತದಿಂದ ಕೂಡಿತ್ತು ಯಾಕೆ ಅಂದರೆ? ಯಾವುದೇ ತಲೆಬಿಸಿ ಇಲ್ಲದೇ ನಡೆಯುವ ಜೀವನ. ಹಾಗೇ ಯಾವುದೇ ಟ್ರಾಫಿಕ್, ಜಗಳ ಇಲ್ಲದೇ ಮನಸ್ಸಿಗೆ ಬಹಳ ಇಷ್ಟವಾಗುವ ವಾತಾವರಣ ಆ ಊರಲ್ಲಿತ್ತು.
ಗದ್ದೆ ನಾಟಿ ಬಂತು ಅಂದರೆ ಊರಿನ ಹೆಂಗಸರು ಒಂದು ಗುಂಪು ಮಾಡಿಕೊಂಡು ಒಂದೊಂದು ಮನೆಯ ಗದ್ದೆ ನಾಟಿ ಕೆಲಸವನ್ನು ಮುಗಿಸುತ್ತಿದ್ದರು. ಇದರಲ್ಲಿ ಅವರಿಗೆ ಸಂಬಳ ಇರಲಿಲ್ಲ. ಅಂದರೆ ತಮ್ಮ ಮನೆ ಗದ್ದೆ ನಾಟಿ ಕೆಲಸಕ್ಕೆ ಬಂದವರು ಇನ್ನೊಬ್ಬರ ಮನೆ ಗದ್ದೆ ನಾಟಿ ಕೆಲಸಕ್ಕೆ “ಮುರಿಯಂತ” ಹೋಗುತ್ತಿದ್ದರು. (“ಮುರಿ” ಅಂದರೆ ಅದೊಂದು ಹಳ್ಳಿ ಭಾಷೆ.) ಎಲ್ಲರೂ ಸೇರಿ ಎಲ್ಲರ ಗದ್ದೆ ನಾಟಿ ಕೆಲಸವನ್ನು ಮುಗಿಸುವುದು.
ಊರಿನ ಜಾತ್ರೆ ಅಂದರೆ ಎಲ್ಲರಿಗೂ ಸಂಭ್ರಮವೋ ಸಂಭ್ರಮ!
ಜಾತ್ರೆಗೆ ಇನ್ನೇನು ಸ್ವಲ್ಪ ದಿನ ಇರಬೇಕು, ಆಗ ಎಲ್ಲಾ ಊರಿನ ಜನರು ಸೇರಿ ತೇರು ಕಟ್ಟುವ ಕೆಲಸಕ್ಕೆ ಹೋಗುತ್ತಿದ್ದರು. ಇದಕ್ಕೆ ಯಾವುದೇ ಸಂಬಳ ಅಂತ ತಗೊಳ್ಳದೇ, “ನಾವು ದೇವರಿಗೆ ಮಾಡುವ ಸಣ್ಣ ಸೇವೆ” ಎಂದು ಊರ ಜನರು ಒಗ್ಗೂಡಿ ಮಾಡುವ ದಿನ.
ಅಲ್ಲಿ ಅತೀ ಹೆಚ್ಚು ತಮ್ಮಲ್ಲಿರುವ ಒಗ್ಗಟ್ಟನ್ನು ಎಷ್ಟುಗಟ್ಟಿಯಾಗಿ ಇದೆ ಎಂದು ಸಮಾಜಕ್ಕೆ ತೋರಿಸುತ್ತಿದ್ದರು.
ಜಾತ್ರೆ ಹತ್ತಿರ ಬಂದಾಗ ಊರಿನ ಹೆಂಗಸರು ತಮ್ಮ ಮಕ್ಕಳಿಗೆ ಹಾಗೂ ತಮಗೆ ಬೇಕಾದ ಹೊಸ ಬಟ್ಟೆಯನ್ನು ತರಲು ಮನೆಯ ಯಜಮಾನನ ಹತ್ತಿರ ಸುತ್ತಿಬಳಸಿ ಅದೇ ಮಾತನಾಡುತ್ತಿದ್ದರು.
ಅದು ಏನು ಅಂದರೆ, ಕೆಲವೊಂದು ಹೆಂಗಸರಿಗೆ ಗಂಡನ ಹತ್ತಿರ ಕೇಳೋಕ್ಕಿಂತ ಮೊದಲೇ ಗಂಡ ಜಾತ್ರೆಗೆ ಅಂತ ಹೊಸ ಬಟ್ಟೆ ತರಲು ಹಣ ಕೊಟ್ಟು ಬಿಡುತ್ತಿದ್ದರು — “ಯಾಕಪ್ಪ ಬೈಸ್ಕೊಬೇಕು ಅಂತ!”
ಇನ್ನೂ ಕೆಲವು ಗಂಡಸರು ಹೆಂಡತಿಯ ಹತ್ತಿರ ಬೈಸ್ಕೊಂಡು ಆದಮೇಲೆ ತಮಗೆ ಜ್ಞಾನೋದಯ ಆಗುತ್ತಿತ್ತು.
ಗಂಡಸರು ಜಾತ್ರೆಗೆ ಕೊಟ್ಟ ಹಣವನ್ನು ಪೇಟೆಗೆ ಹೋಗಿ ಮಕ್ಕಳಿಗೆ, ತಮ್ಮ ಮನೆಯ ಗಂಡಸರಿಗೆ ಬಟ್ಟೆಯನ್ನು ತೆಗೆದುಕೊಂಡು ಬರುತ್ತಿದ್ದರು.
ಒಂದು ನಿಮಿಷ ಸ್ನೇಹಿತರೇ, ನೀವು ಗಮನಿಸಬಹುದು — ಇಲ್ಲಿ ಹೆಂಗಸರು ಬರೀ ಮಕ್ಕಳಿಗೆ ಹಾಗೂ ಗಂಡನಿಗೆ ಮಾತ್ರ ಬಟ್ಟೆ ತೆಗೆದುಕೊಂಡಿದ್ದು, ಮತ್ತೆ ಅವರಿಗೆ ಅಂತ ಯಾಕೆ ಬಟ್ಟೆ ತೆಗೆದುಕೊಂಡಿಲ್ಲ ಅಂತ...
ಹೌದು ಸ್ನೇಹಿತರೆ! ಮನೆಯಲ್ಲಿರುವ ಹೆಂಡತಿಯ ಮನಸ್ಸನ್ನು ಅರ್ಥ ಮಾಡಿಕೊಂಡರೆ ಈ ಒಂದು ಗಂಡ-ಹೆಂಡತಿ ಸಂಬಂಧ ಯಾವಾಗಲೂ ಗಟ್ಟಿಯಾಗಿರುತ್ತೆ ಅಲ್ಲವೇ!
ಯಾವಾಗಲೋ ಒಂದು ದಿನ ಗಂಡ ಪೇಟೆಗೆ ಕರೆದುಕೊಂಡು ಹೋದಾಗ ಗಂಡನ ಕೈಯಾರೇ ತೆಗೆಸಿಕೊಂಡು ಸೀರೆ ಟ್ರಂಕ್‌ನಲ್ಲಿ ಹಾಗೇ ಉಳಿದಿತ್ತು. ಅದನ್ನೇ ಉಟ್ಟುಕೊಂಡು ಜಾತ್ರೆಗೆ ಹೋಗಬೇಕು ಅನ್ನೋ ಆಸೆ ಕೆಲವು ಹೆಂಗಸರಿಗೆ.
ಹಾಗೇ ಇನ್ನೂ ಕೆಲವರಿಗೆ ತಮ್ಮ ತಾಯಿ ಮನೆಯಿಂದ ಬಂದ ಸೀರೆಯನ್ನು ಜಾತ್ರೆಗೆ ಉಟ್ಟುಕೊಂಡು ಹೋಗುವ ಆಸೆ. ಮತ್ತೆ ಇನ್ನೂ ಕೆಲವು ಹೆಂಗಸರಿಗೆ ಮದುವೆಗೆ ಉಟ್ಟಿದ ಧಾರಿ ಸೀರೆಯನ್ನು ಉಟ್ಟುಕೊಂಡು ಹೋಗಬೇಕು ಎನ್ನುವ ಆಸೆ...
ಸ್ನೇಹಿತರೆ! ನಾವು ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ನಮ್ಮ ಹೆಂಡತಿ ಅಥವಾ ಗಂಡನನ್ನು ಅರ್ಥ ಮಾಡಿಕೊಂಡಾಗ ಅವರು ಒಂದು ಚಿಕ್ಕ ವಸ್ತು ಕೊಟ್ಟರು ಅಥವಾ ಪ್ರೀತಿಯಿಂದ ಸ್ವಲ್ಪ ಮಾತಾಡಿಸಿದರು, ಅದು ಅವರಿಗೆ ಅವರ ಮನಸ್ಸಿಗೆ ಎಷ್ಟೊಂದು ಖುಷಿ ಕೊಡುತ್ತೆ ಅಲ್ಲವೇ!
ಜಾತ್ರೆ ದಿನ ಎಲ್ಲಾ ಊರಿನ ಜನರು ಬಂಧು ಬಳಗವನ್ನು ಕರೆದು ಹಬ್ಬ ಮಾಡುತ್ತಾರೆ. ಮನೆಯಲ್ಲಿ ಮುಸ್ಸಂಜೆ ಸಮಯ 6 ಗಂಟೆಗೆ ತೇರನ್ನು ಎಳೆಯುವುದನ್ನು ನೋಡಲು ಎಲ್ಲರೂ ಸಂಭ್ರಮದಿಂದ ಹೋಗುತ್ತಾರೆ.
ಊರಿನ ಗಂಡಸರು ತೇರನ್ನು ಎಳೆಯಲು ಮುಂದೆ ಹೋಗುತ್ತಾರೆ. ಅಲ್ಲಿನ ಸಂಭ್ರಮಕ್ಕೆ ಮಿತಿಯೇ ಇಲ್ಲದ ಹಾಗೆ!
ಹೆಂಗಸರು ತಮಗೆ ಬೇಕಾದ ಅಚ್ಚ ಹಸಿರಿನ ಬಳೆ ಇಡುವ ತವಕ, ಮಕ್ಕಳಿಗೆ ಯಾವ ಯಾವ ಆಟದ ಸಾಮಾನುಗಳನ್ನು ತೆಗೆದುಕೊಳ್ಳಬೇಕು ಎಂಬ ಆತುರ...
ಜನರಿಂದ ತುಂಬಿ ತುಳುಕುತ್ತಿರುವ ಜಾತ್ರೆ — ಆಹಾ! ನೋಡಲು ಬಲು ಅದ್ಭುತ!!!
ಕಥೆ ಮುಂದುವರಿಯುವುದು...
ಇದು ನನ್ನ ಸ್ವಂತ ರಚನೆ ಆಗಿದ್ದು, ಎಲ್ಲರೂ ನನ್ನನ್ನು ಹೀಗೇ ಮುಂದೆ ಪ್ರೋತ್ಸಾಹಿಸಬೇಕು ಎಂದು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.. ❤️🙏🥰
Wrt by : ಶ್ರೀಮಾಲಾ ನಾರಾಯಣ ಗೌಡ
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.