Ticker

6/recent/ticker-posts
Responsive Advertisement

Uttarakannda: ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ನು ಸ್ಪರ್ಶ ದರ್ಶನ ಇಲ್ಲ

ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಹಾಗೂ ನೇರ ಪೂಜಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಾಚೀನ ಶಿಲಾಮೂರ್ತಿಗೆ ಸವಕಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಮೂರ್ತಿಯ ಸಂರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೊಸ ನಿಯಮದಂತೆ, ಎಲ್ಲ ಭಕ್ತರು ದೂರದಿಂದಲೇ ದೇವರ ದರ್ಶನ ಪಡೆಯಬೇಕು. ಮೂರ್ತಿಯನ್ನು ಸ್ಪರ್ಶಿಸುವುದು, ಅಭಿಷೇಕ ಮಾಡುವುದು ಹಾಗೂ ನೇರ ಪೂಜೆ ಸಲ್ಲಿಸಲು ಅವಕಾಶ ಇರುವುದಿಲ್ಲ. ದೇವಸ್ಥಾನದ ನಿತ್ಯ ಪೂಜೆಗಳನ್ನು ಅರ್ಚಕರು ಎಂದಿನಂತೆ ನೆರವೇರಿಸಲಿದ್ದು, ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು