ಮೃತರನ್ನು ಭಟ್ಕಳ ತಾಲೂಕಿನ ಬೇಂಗ್ರೆ-2 ಗ್ರಾಮದ ಮೋಳಿಮನೆ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಎಂದು ಗುರುತಿಸಲಾಗಿದೆ. ಅವರು ಎಂ.ಕಾಂ. ಪದವೀಧರರಾಗಿದ್ದು, ಶಾಶ್ವತ ಉದ್ಯೋಗ ಸಿಗದ ಕಾರಣ ಕೆಲಕಾಲ ಪೇಂಟಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಇತ್ತೀಚೆಗೆ ವೆಂಕಟಾಪುರ ನದಿಯ ತಟ್ಟಿಹಕ್ಕಲ ಹೊಳೆಯಲ್ಲಿ ಸಂಭವಿಸಿದ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟ 14 ಮಂದಿಯಲ್ಲಿ ಆನಂದ ಅವರ ತಾಯಿ ಲಕ್ಷ್ಮೀ ನಾಯ್ಕ ಅವರೂ ಸೇರಿದ್ದರು. ತಾಯಿಯ ಅಗಲಿಕೆಯ ನಂತರ ಆನಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಜುಲೈ 7ರಂದು ಮಧ್ಯಾಹ್ನ ಅವರು ಮನೆಯಿಂದ ಹೊರಟ ಬಳಿಕ ಮನೆಯ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಅವರನ್ನು ಮೇಲಕ್ಕೆತ್ತಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಮೃತರ ತಂದೆ ಅಣ್ಣಪ್ಪ ಭೈರಾ ನಾಯ್ಕ (63) ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಅಲ್ಪಾವಧಿಯಲ್ಲೇ ಒಂದೇ ಕುಟುಂಬದ ಮೇಲೆ ಸಂಭವಿಸಿದ ಎರಡು ದುರ್ಘಟನೆಗಳು ಗ್ರಾಮಸ್ಥರ ಮನಸ್ಸನ್ನು ಮರುಗಿಸಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.