ಈ ಹೊಸ ಮಾರ್ಗದಲ್ಲಿ ಬಸ್‌ಗಳು ಚಂದಾಪುರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ, ಮಡಿವಾಳ, ಕೋರಮಂಗಲ ವಾಟರ್ ಟ್ಯಾಂಕ್, ಡೊಮ್ಮಲೂರು ಹಾಗೂ ಇಂದಿರಾನಗರ ಮಾರ್ಗವಾಗಿ ಸಂಚರಿಸಲಿವೆ. ಬೆಳಿಗ್ಗೆಯಿಂದ ರಾತ್ರಿ ತನಕ ನಿಗದಿತ ಅವಧಿಯಲ್ಲಿ ಹಲವು ಸುತ್ತುಗಳ ಸೇವೆ ಲಭ್ಯವಿದ್ದು, ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ರೈಲು ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಸಂಚಾರ ದಟ್ಟಣೆ ನಡುವೆಯೂ ಪ್ರಮುಖ ಪ್ರದೇಶಗಳನ್ನು ನೇರವಾಗಿ ಸಂಪರ್ಕಿಸುವ ಈ ಹೊಸ ಸೇವೆಯಿಂದ ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಈ ಹೊಸ ಬಸ್ ಸೇವೆಯ ಸದುಪಯೋಗ ಪಡೆಯುವಂತೆ ಬಿಎಂಟಿಸಿ ಮನವಿ ಮಾಡಿದೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.