ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ಮಂದಿ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈಯಕ್ತಿಕ ಕಾರಣಗಳಿಂದ ಸಂಚರಿಸುತ್ತಾರೆ. ಹೊಸ ರೈಲು ಸೇವೆ ಆರಂಭವಾದರೆ ಪ್ರಯಾಣದ ಆಯ್ಕೆಗಳು ಹೆಚ್ಚುವುದರ ಜೊತೆಗೆ ಈಗಿರುವ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗುವ ನಿರೀಕ್ಷೆಯಿದೆ.
ಪ್ರಯಾಣಿಕರ ಸಂಘಗಳು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದು, ಸಂಬಂಧಿತ ಅಧಿಕಾರಿಗಳು ಅದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಆದರೆ, ಈ ರೈಲು ಸೇವೆ ಆರಂಭಿಸುವ ಕುರಿತು ರೈಲ್ವೆ ಇಲಾಖೆಯಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಅಧಿಕೃತ ಅನುಮೋದನೆ ದೊರೆತ ಬಳಿಕವೇ ವೇಳಾಪಟ್ಟಿ, ಸಂಚಾರ ದಿನಗಳು ಹಾಗೂ ಇತರ ವಿವರಗಳು ಪ್ರಕಟವಾಗಲಿವೆ. ಕರಾವಳಿ ಭಾಗದ ಜನರು ಈ ಸೇವೆ ಶೀಘ್ರ ಆರಂಭವಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.