Ticker

6/recent/ticker-posts
Responsive Advertisement

News: ಉಜ್ವಲಾ ಫಲಾನುಭವಿಗಳಿಗೆ ಬಿಗ್ ಶಾಕ್: ವರ್ಷಕ್ಕೆ ಕೇವಲ 4 ಸಬ್ಸಿಡಿ ಸಿಲಿಂಡರ್ ಮಾತ್ರ!

ಪ್ರಧಾನಮಂತ್ರಿ ಉಜ್ವಲಾ ಯೋಜನೆ (PMUY) ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಕಡಿತಗೊಳಿಸಿದೆ. ಈ ಹಿಂದೆ ವರ್ಷಕ್ಕೆ 9 ಸಬ್ಸಿಡಿ ಸಿಲಿಂಡರ್‌ಗಳ ಸೌಲಭ್ಯ ಇದ್ದರೆ, ಇದೀಗ ಅದನ್ನು 4 ಸಿಲಿಂಡರ್‌ಗಳಿಗೆ ಇಳಿಸಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರವು ಉಜ್ವಲಾ ಕುಟುಂಬಗಳ ಸರಾಸರಿ ವಾರ್ಷಿಕ ಬಳಕೆಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಉಜ್ವಲಾ ಯೋಜನೆ ಆರಂಭವಾದಾಗ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳ ಸೌಲಭ್ಯ ಇತ್ತು. ನಂತರ ಅದನ್ನು 9ಕ್ಕೆ ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸಿ 4 ಸಿಲಿಂಡರ್‌ಗಳಿಗೆ ಮಿತಿಗೊಳಿಸಲಾಗಿದೆ. ಆದರೆ ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ಮುಂದುವರಿಯಲಿದ್ದು, ಅದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. 

ಇತ್ತೀಚೆಗೆ ಗೃಹ ಬಳಕೆಯ LPG ಸಿಲಿಂಡರ್ ದರದಲ್ಲೂ ಏರಿಕೆ ಕಂಡುಬಂದಿದ್ದು, ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯ ಕಡಿತದಿಂದ ಉಜ್ವಲಾ ಯೋಜನೆ ಫಲಾನುಭವಿಗಳ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು