ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಕೆಲವರು ವಿಡಿಯೋವನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದರೆ, ಕೆಲವು ಅಭಿಮಾನಿಗಳು ಇದನ್ನು ಅಸಭ್ಯ ವರ್ತನೆ ಎಂದು ಟೀಕಿಸಿದ್ದಾರೆ. ಈ ಹಿನ್ನೆಲೆ, ನಟ ಸುದೀಪ್ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಾಗ್ ಸತೀಶ್, ತಮ್ಮ ವಿರುದ್ಧ ಹರಿದಾಡುತ್ತಿರುವ ಹಲವಾರು ಕಾಮೆಂಟ್‌ಗಳು ಮತ್ತು ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. “ನಾನು ಮೂತ್ರ ವಿಸರ್ಜನೆ ಮಾಡಿದರೆ ಅದೇ ಸುದ್ದಿ ಆಗುತ್ತದೆಯೇ ಎಂದು ಕೆಲವರು ಹೇಳುತ್ತಿದ್ದರಿಂದ ಅದನ್ನು ತೋರಿಸಲು ವಿಡಿಯೋ ಹಂಚಿಕೊಂಡಿದ್ದೆ. ಆದರೆ ಇದನ್ನು ತಮಾಷೆ ಮಾಡಲು ಕೆಲವರು ತಪ್ಪಾಗಿ ಪ್ರಸಾರ ಮಾಡುತ್ತಿದ್ದಾರೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಡಿಯೋ ತೆಗೆದುಹಾಕುವಂತೆ ಒತ್ತಾಯಿಸಿರುವ ಬಗ್ಗೆ ಮಾತನಾಡಿದ ಸತೀಶ್, “ಆ ಹಾಡು ಆ ವಿಡಿಯೋಗೆ ಸರಿಹೊಂದುತ್ತದೆ ಎಂದು ಹಾಕಿದ್ದೆ. ಅದರಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಕಾಮೆಂಟ್‌ಗಳಿಂದ ನನಗೆ ಏನೂ ಲಾಭವಾಗುವುದಿಲ್ಲ. ಯಾರೂ ನಮ್ಮ ಮನೆಗೆ ಬಂದು ಊಟ ಹಾಕುವುದಿಲ್ಲ,” ಎಂದು ಹೇಳಿದ್ದಾರೆ.
ಅವರು ಇನ್ನೂ ಮುಂದುವರೆದು, “ನಾನು ಆ ವಿಡಿಯೋ ಡಿಲೀಟ್ ಮಾಡುವ ಪ್ರಶ್ನೆಯೇ ಇಲ್ಲ. ಯಾರೇ ಹೇಳಿದರೂ ನಾನು ಅದನ್ನು ತೆಗೆದುಹಾಕುವುದಿಲ್ಲ. ಈ ವಿಷಯದಲ್ಲಿ ನನ್ನ ನಿರ್ಧಾರ ಬದಲಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಚರ್ಚೆಗೆ ಕಾರಣವಾಗಿದ್ದು, ಬಳಕೆದಾರರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.