ಇತ್ತೀಚೆಗೆ ನಡೆದ ಇಂಟರ್ ಮೀಡಿಯೇಟ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿರುವ ಸಂದರ್ಭದಲ್ಲಿ, ಒಬ್ಬ ವಿದ್ಯಾರ್ಥಿಯ ಪೇಪರ್ ಶಿಕ್ಷಕರ ಗಮನ ಸೆಳೆದಿದೆ. ಪ್ರಶ್ನೆಗಳಿಗೆ ಉತ್ತರ ಬರೆಯುವ ಬದಲು, ಆತ ತನ್ನ ಪರಿಸ್ಥಿತಿಯನ್ನು ವಿವರಿಸುವ ಭಾವನಾತ್ಮಕ ಮನವಿ ಪತ್ರವನ್ನೇ ಬರೆದಿದ್ದಾನೆ.
“ಸರ್… ನನಗೆ ಅಪ್ಪ-ಅಮ್ಮ ಇಲ್ಲ. ನೀವೇ ನನಗೆ ಅಪ್ಪ-ಅಮ್ಮ ಹಾಗು ದೇವರಂತೆ. ದಯವಿಟ್ಟು ನನಗೆ ಪಾಸ್ ಮಾಡಿ. ನಾನು ಓದಿದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿಲ್ಲ. ನಿಮ್ಮ ಕಾಲಿಗೆ ಬೀಳುತ್ತೇನೆ, ದಯವಿಟ್ಟು ಸಹಾಯ ಮಾಡಿ” ಎಂದು ಆತ ಬರೆದಿದ್ದಾನೆ.
ಇದರಲ್ಲಿ ಮಾತ್ರ ನಿಲ್ಲದೆ, ಶಿಕ್ಷಕರ ಮನ ಗೆಲ್ಲಲು ವಿದ್ಯಾರ್ಥಿ ಒಂದು ಚಿತ್ರವನ್ನೂ ಬಿಡಿಸಿದ್ದಾನೆ. ಶಿಷ್ಯನು ಗುರುವಿನ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ದೃಶ್ಯವನ್ನು ಚಿತ್ರಿಸಿ, ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಯತ್ನಿಸಿದ್ದಾನೆ.
ಈ ಉತ್ತರ ಪತ್ರಿಕೆಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಹಲವರು ಈ ಘಟನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು “ಇವನಿಗೆ ಕಾಮಿಡಿ ಶೋಗೆ ಹೋದರೆ ಖಂಡಿತ ಹೆಸರು ಬರುತ್ತದೆ” ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು “ಇಂದಿನ ಮಕ್ಕಳ ಓದಿನ ಮೇಲೆ ಇರುವ ನಿರ್ಲಕ್ಷ್ಯಕ್ಕೆ ಇದು ಉದಾಹರಣೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆ ವಿದ್ಯಾರ್ಥಿಗಳ ಅಧ್ಯಯನದ ಮೇಲಿನ ಗಮನ ಹಾಗೂ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಚಿಂತನೆಗೆ ಕಾರಣವಾಗಿದೆ. ಭಾವನಾತ್ಮಕ ಮನವಿ ಮಾಡಿ ಪಾಸ್ ಆಗಲು ಯತ್ನಿಸಿದ ಈ ವಿದ್ಯಾರ್ಥಿಗೆ ಅಂತಿಮವಾಗಿ ಯಾವ ಫಲಿತಾಂಶ ಸಿಗುತ್ತದೆ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.