ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 22 ವರ್ಷದ ಯುವತಿ, ತಾನು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಒಬ್ಬ ಯುವಕನೊಂದಿಗೆ ಪರಿಚಯ ಬೆಳೆದಿತ್ತು ಎಂದು ಹೇಳಿಕೊಂಡಳು. ಆರಂಭದಲ್ಲಿ ಕೆಲಸ ಮುಂದುವರಿಸಬಹುದು, ಯಾವುದೇ ಧಾರ್ಮಿಕ ಒತ್ತಡ ಇರದು ಎಂದು ಹೇಳಲಾಗಿತ್ತು. ಆದರೆ ಮದುವೆಯಾದ ನಂತರ ಕೆಲಸಕ್ಕೆ ಹೋಗಬಾರದು, ಮನೆಯಲ್ಲೇ ಇರಬೇಕು ಹಾಗೂ ಕೆಲವು ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು ಎಂದು ಒತ್ತಡ ಹಾಕಲಾಯಿತು ಎಂದು ಆಕೆ ದೂರಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬಂದು ಈಗ ಕುಟುಂಬದೊಂದಿಗೆ ಇರುವುದಾಗಿ ತಿಳಿಸಿದರು.
ಇನ್ನೊಬ್ಬ ಮಹಿಳೆ ಮಾತನಾಡಿ, ತಮ್ಮ ಮನೆಯ ಸಮೀಪದ ಯುವಕನೊಂದಿಗೆ ಸ್ನೇಹ ಬೆಳೆದಿತ್ತು ಎಂದು ಹೇಳಿದರು. ನಂತರ ಧರ್ಮಗುರುವೊಬ್ಬರು ಮದುವೆ ಮಾಡಿಸುತ್ತೇನೆ ಎಂದು ಹೇಳಿ ಹೊರನಾಡಿಗೆ ಹೋಗುವಂತೆ ಪ್ರೇರೇಪಿಸಿದರು ಎಂದು ಆರೋಪಿಸಿದರು. ಆಂಧ್ರಪ್ರದೇಶಕ್ಕೆ ತೆರಳಿದ ನಂತರ ವಿಷಯದ ನಿಜಸ್ಥಿತಿ ಅರಿವಾಗಿ, ಕುಟುಂಬದವರನ್ನು ಸಂಪರ್ಕಿಸಿ ಮನೆಗೆ ಮರಳಿದ್ದೇನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಮೂರನೇ ಯುವತಿ ಮಾತನಾಡಿ, ಕೆಲ ತಿಂಗಳುಗಳ ಹಿಂದೆ ತನ್ನನ್ನು ಗೋವಾ, ಮೈಸೂರು ಮತ್ತು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದರು. ಬಳಿಕ ಕುಟುಂಬದವರು ಪೊಲೀಸರ ಬಳಿ ದೂರು ನೀಡಿದ ನಂತರ ಮನೆಗೆ ಮರಳಿದ್ದೇನೆ. ಈ ಸಂದರ್ಭದಲ್ಲಿ ಕೆಲವು ರಾಜಕೀಯ ಮುಖಂಡರು ಮಧ್ಯಸ್ಥಿಕೆ ವಹಿಸಿದ್ದರ ಬಗ್ಗೆ ಕೂಡ ಆಕೆ ಹೇಳಿಕೆ ನೀಡಿದ್ದಾರೆ.
ಈ ಘಟನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಯುವತಿಯರು ಆಗ್ರಹಿಸಿದ್ದಾರೆ. ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
(ಸೂಚನೆ: ಈ ವರದಿ ಸುದ್ದಿಗೋಷ್ಠಿಯಲ್ಲಿ ಯುವತಿಯರು ನೀಡಿದ ಹೇಳಿಕೆಗಳ ಆಧಾರಿತವಾಗಿದೆ. ಪ್ರಕರಣದ ಕುರಿತು ಅಂತಿಮ ಸತ್ಯಾಸತ್ಯತೆ ತನಿಖೆಯ ನಂತರ ಸ್ಪಷ್ಟವಾಗಲಿದೆ.)
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.