Ticker

6/recent/ticker-posts
Responsive Advertisement

Astrology: ಹೋಳಿ ಹುಣ್ಣಿಮೆಯ ರಕ್ತಚಂದ್ರಗ್ರಹಣ: 12 ರಾಶಿಗಳ ಮೇಲೆ ಪರಿಣಾಮ ಮತ್ತು ಪರಿಹಾರಗಳು

ವರ್ಷದ ಮೊದಲ ರಕ್ತಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನ ಸಂಭವಿಸುತ್ತಿದೆ. ಮಧ್ಯಾಹ್ನ 2:39ಕ್ಕೆ ಗ್ರಹಣ ಸ್ಪರ್ಶ, ಸಂಜೆ 4:29ಕ್ಕೆ ಮಧ್ಯಮ, 6:19ಕ್ಕೆ ಮೋಕ್ಷ ಕಾಲ ಎಂದು ಪಂಚಾಂಗಗಳಲ್ಲಿ ಸೂಚಿಸಲಾಗಿದೆ. ಗ್ರಹಣ ಸಮಯದಲ್ಲಿ ಅನೇಕ ದೇವಾಲಯಗಳಲ್ಲಿ ಗರ್ಭಗುಡಿ ಮುಚ್ಚುವ ಪದ್ಧತಿ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಗ್ರಹಣವು ಸಿಂಹ ರಾಶಿಯಲ್ಲಿ ಸಂಭವಿಸುತ್ತಿರುವ ಹಿನ್ನೆಲೆ ಕೆಲವು ರಾಶಿಗಳ ಮೇಲೆ ವಿಶೇಷ ಪ್ರಭಾವ ಇರಲಿದೆ ಎಂದು ಹೇಳಲಾಗುತ್ತಿದೆ.

🔮 12 ರಾಶಿಗಳ ಫಲಾಫಲ ಮತ್ತು ಪರಿಹಾರ

ಮೇಷ ರಾಶಿ

5ನೇ ಸ್ಥಾನದಲ್ಲಿ ಗ್ರಹಣ ಸಂಭವಿಸುವ ಕಾರಣ ಮಿಶ್ರ ಫಲ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ.

ಪರಿಹಾರ: ದೇವತಾರಾಧನೆ ಮಾಡಿ. 48 ದಿನ ಹೊಸ ಕಾರ್ಯ ಆರಂಭಿಸುವಲ್ಲಿ ಎಚ್ಚರಿಕೆ.

ವೃಷಭ ರಾಶಿ

ಅಶುಭ ಸೂಚನೆ. ತಾಯಿ ಆರೋಗ್ಯ ಹಾಗೂ ಭೂ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.

ಪರಿಹಾರ: ಗ್ರಹಣ ಶಾಂತಿ, ಉರುಳಿ ಹಾಗೂ ಭತ್ತ ದಾನ.

ಮಿಥುನ ರಾಶಿ

ಶುಭ ಫಲ. ಸಹೋದರ ಸಂಬಂಧ ಸುಧಾರಣೆ, ಆಸ್ತಿ ವಿಚಾರದಲ್ಲಿ ಅನುಕೂಲ. ಪೊಲೀಸ್, ಆರ್ಮಿ, ರಾಜಕೀಯ ಕ್ಷೇತ್ರದವರಿಗೆ ಅವಕಾಶ.

ಕರ್ಕಾಟಕ ರಾಶಿ

ಮಿಶ್ರ ಫಲ. ಹಣಕಾಸು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ.

ಪರಿಹಾರ: ಶಾಂತಿ ಹೋಮ ಮಾಡಿಸುವುದು ಒಳಿತು.

ಸಿಂಹ ರಾಶಿ

ಅಶುಭ ಫಲ ಹೆಚ್ಚು. ಆರೋಗ್ಯ, ಉದ್ಯೋಗ ಹಾಗೂ ಮಾನಸಿಕ ಒತ್ತಡ ಸಾಧ್ಯತೆ.

ಪರಿಹಾರ: ಗ್ರಹಣ ಶಾಂತಿ, ಹುರುಳಿ-ಭತ್ತ ದಾನ, ಚಂದ್ರ ಬಿಂಬ ದಾನ.

ಕನ್ಯಾ ರಾಶಿ

ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಹೂಡಿಕೆಗಳಲ್ಲಿ ಎಚ್ಚರಿಕೆ.

ಪರಿಹಾರ: 48 ದಿನ ವಿಷ್ಣು ಸಹಸ್ರನಾಮ ಪಠಣೆ, ದಾನ ಧರ್ಮ.

ತುಲಾ ರಾಶಿ

ಶುಭ ಫಲ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಸಾಧ್ಯತೆ.

ವೃಶ್ಚಿಕ ರಾಶಿ

ಉದ್ಯೋಗ, ಆಸ್ತಿ ವಿಚಾರದಲ್ಲಿ ಅನುಕೂಲ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಾಧ್ಯತೆ.

ಧನು ರಾಶಿ

ಮಿಶ್ರ ಫಲ. ಆರೋಗ್ಯ ಮತ್ತು ಮಾನಸಿಕ ಸ್ಥಿತಿಯಲ್ಲಿ ಗಮನ ಅಗತ್ಯ.

ಪರಿಹಾರ: ಈಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ದಾನ.

ಮಕರ ರಾಶಿ

ವಿವಾಹ ಹಾಗೂ ಕುಟುಂಬ ವಿಚಾರದಲ್ಲಿ ಅಡಚಣೆ ಸಾಧ್ಯತೆ.

ಪರಿಹಾರ: ಕುಲದೇವರ ಆರಾಧನೆ, ಪಂಚಾಕ್ಷರಿ ಜಪ, ತುಪ್ಪದ ದೀಪ.

ಕುಂಭ ರಾಶಿ

ಸಾಲ ಹಾಗೂ ಆರೋಗ್ಯ ಸಮಸ್ಯೆ ಸಾಧ್ಯತೆ.

ಪರಿಹಾರ: ಗಣಪತಿ ಅಷ್ಟೋತ್ತರ ಪಠಣೆ, ದಾನ.

ಮೀನ ರಾಶಿ

ಶುಭ ಫಲ. ಸಾಲ ನಿವಾರಣೆ ಹಾಗೂ ಆರೋಗ್ಯ ಸುಧಾರಣೆ ಸಾಧ್ಯತೆ.

ಪರಿಹಾರ: ಮನೆದೇವರ ದರ್ಶನ, ಭತ್ತ-ಉರುಳಿ ದಾನ.

⚠️ ಸೂಚನೆ: ಮೇಲಿನ ಮಾಹಿತಿಗಳು ಜ್ಯೋತಿಷ್ಯ ನಂಬಿಕೆಗಳ ಆಧಾರಿತವಾಗಿದ್ದು, ವೈಯಕ್ತಿಕ ಜೀವನದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಸೂಕ್ತ ಸಲಹೆ ಪಡೆಯುವುದು ಒಳಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು