Ticker

6/recent/ticker-posts
Responsive Advertisement

Uttarakannda: ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್ ಅಧಿಕಾರ ಸ್ವೀಕಾರ

ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ನೇಮಕ.

ಮುಂಡಗೋಡ: ಇಲ್ಲಿನ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಉಪನಿರೀಕ್ಷಕರಾಗಿ ಮಂಜುನಾಥ್ ಗೌಡರ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ಮುಂಡಗೋಡ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಯಲ್ಲಾಲಿಂಗ್ ಕುನ್ನೂರ್ ಅವರ ಅಕಾಲಿಕ ನಿಧನದಿಂದಾಗಿ ಈ ಹುದ್ದೆ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಖಾಲಿ ಇದ್ದ ಸ್ಥಾನಕ್ಕೆ ಮಂಜುನಾಥ್ ಗೌಡರ್ ಅವರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು. ಅದರಂತೆ ಇಂದು ಅವರು ಠಾಣೆಗೆ ಆಗಮಿಸಿ ಜವಾಬ್ದಾರಿ ವಹಿಸಿಕೊಂಡರು.

ದಿವಂಗತ ಯಲ್ಲಾಲಿಂಗ್ ಕುನ್ನೂರ್ ಅವರು ಕೆಲ ತಿಂಗಳುಗಳ ಹಿಂದಷ್ಟೇ ಯಲ್ಲಾಪುರದಿಂದ ವರ್ಗಾವಣೆಗೊಂಡು, ಎರಡನೇ ಬಾರಿ ಮುಂಡಗೋಡ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಮಂಗಳವಾರ ವಿಧಿವಶರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ಪಿಎಸ್ಐ ಹುದ್ದೆಗೆ ಇದೀಗ ನೂತನ ಅಧಿಕಾರಿಯ ನೇಮಕವಾಗಿದ್ದು, ಠಾಣೆಯ ಆಡಳಿತಾತ್ಮಕ ಕಾರ್ಯಗಳಿಗೆ ಪುನಃ ಚೈತನ್ಯ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು