Ticker

6/recent/ticker-posts
Responsive Advertisement

Uttarakannda: ಮಾರಿಕಾಂಬಾ ಜಾತ್ರೆ ಹೆಸರಿನಲ್ಲಿ ಆನ್‌ಲೈನ್ ವಂಚನೆ: ದೇವಸ್ಥಾನದಿಂದ ಭಕ್ತರಿಗೆ ಎಚ್ಚರಿಕೆ

ಶಿರಸಿ: ವಿಶ್ವಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ದೇವಸ್ಥಾನ ಆಡಳಿತ ಭಕ್ತರಿಗೆ ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ WhatsApp, Facebook ಹಾಗೂ Instagram ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾತ್ರೆಯ ಸೇವೆಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ಹಣ ಸಂಗ್ರಹಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಹೆಸರಿನಲ್ಲಿ ಭಕ್ತರನ್ನು ಸಂಪರ್ಕಿಸಿ ಪಾವತಿ ಮಾಡುವಂತೆ ಮನವಿ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ.

ದೇವಸ್ಥಾನ ಆಡಳಿತವು ಸ್ಪಷ್ಟಪಡಿಸಿರುವಂತೆ, ಯಾವುದೇ ಸೇವೆ, ಶುಲ್ಕ ಅಥವಾ ಪಾವತಿ ಸಂಬಂಧಿತ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ www.marikambatemple.com ಮೂಲಕ ಮಾತ್ರ ಪಡೆಯಬೇಕು. ಭಕ್ತರು ಸಾಧ್ಯವಾದಷ್ಟು ದೇವಸ್ಥಾನಕ್ಕೆ ನೇರವಾಗಿ ಭೇಟಿ ನೀಡಿ ಪಾವತಿ ಮಾಡುವಂತೆ ಸೂಚಿಸಲಾಗಿದೆ.

ಅನಧಿಕೃತ ವ್ಯಕ್ತಿಗಳ ಖಾತೆಗಳಿಗೆ ಹಣ ಕಳುಹಿಸುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಭಕ್ತರು ಎಚ್ಚರಿಕೆಯಿಂದ ಇರಬೇಕು ಎಂದು ದೇವಸ್ಥಾನ ಮನವಿ ಮಾಡಿದೆ. ಈ ಸಂಬಂಧ ಶಿರಸಿ ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ.

ಭಕ್ತರು ಯಾವುದೇ ಸಂದೇಹಾಸ್ಪದ ಕರೆ, ಸಂದೇಶ ಅಥವಾ ಲಿಂಕ್ ಕಂಡುಬಂದಲ್ಲಿ ತಕ್ಷಣ ದೇವಸ್ಥಾನ ಅಥವಾ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಆಡಳಿತ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು