Ticker

6/recent/ticker-posts
Responsive Advertisement

News: 51 ರನ್ ನೀಡಿ 5 ವಿಕೆಟ್ – ಟಿ20 ಕ್ರಿಕೆಟ್‌ನಲ್ಲಿ ಅರ್ಷದೀಪ್ ಸಿಂಗ್ ಹೊಸ ದಾಖಲೆ

ನ್ಯೂಝಿಲೆಂಡ್ ವಿರುದ್ಧದ ಐದನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಆರ್ಶಿದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಅರ್ಷದೀಪ್ ನಾಲ್ಕು ಓವರ್‌ಗಳಲ್ಲಿ 51 ರನ್ ನೀಡುತ್ತಾ 5 ವಿಕೆಟ್ ಕಬಳಿಸಿದರು.

ಇದು ಅರ್ಷದೀಪ್ ಸಿಂಗ್ ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿ ಜೀವನದ ಮೊದಲ ಐದು ವಿಕೆಟ್ ಸಾಧನೆ ಎಂಬುದು ವಿಶೇಷ. ಆದರೆ, ಈ ಸಾಧನೆಯ ಜೊತೆಗೆ ಒಂದು ಅಪರೂಪದ ಹಾಗೂ ಅನಗತ್ಯ ದಾಖಲೆ ಕೂಡ ಅವರ ಪಾಲಾಗಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಿಟ್ಟು ಕೊಟ್ಟು 5 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಅರ್ಷದೀಪ್ ಹೆಸರಿಗೆ ಸೇರಿದೆ.

ಈ ಮೊದಲು ಈ ದಾಖಲೆಯು ವೆಸ್ಟ್ ಇಂಡೀಸ್ ವೇಗಿ ಅಝರ್ರಿ ಜೋಸೆಫ್ ಅವರ ಹೆಸರಿನಲ್ಲಿತ್ತು. 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಲ್ಝಾರಿ ಜೋಸೆಫ್ 40 ರನ್ ನೀಡಿ ಐದು ವಿಕೆಟ್ ಪಡೆದಿದ್ದರು. ಇದೀಗ ಅದಕ್ಕಿಂತಲೂ ಹೆಚ್ಚು, 51 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ಅರ್ಷದೀಪ್ ಸಿಂಗ್ ಈ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ನಡೆಸಿದ India ತಂಡ 20 ಓವರ್‌ಗಳಲ್ಲಿ ಭರ್ಜರಿ 271 ರನ್‌ಗಳನ್ನು ಪೇರಿಸಿತು. ಈ ದೊಡ್ಡ ಗುರಿಯನ್ನು ಬೆನ್ನತ್ತಿದ New Zealand ತಂಡ 19.4 ಓವರ್‌ಗಳಲ್ಲಿ 225 ರನ್ ಗಳಿಸಿ ಆಲೌಟ್ ಆಯಿತು.

ಈ ಮೂಲಕ ಭಾರತ ತಂಡವು 46 ರನ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿಗೆ ಸ್ಮರಣೀಯ ಅಂತ್ಯ ನೀಡಿತು. ದಾಖಲೆಗೂಡಿದ ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆಗೂ ಕಾರಣವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು