ಹಾವೇರಿ: ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ‘ಹರ್ ಘರ್ ಜಲ್’ (ಜಲ ಜೀವನ್ ಮಿಷನ್) ಯೋಜನೆ ಹಲವು ಕಡೆ ನಿರೀಕ್ಷಿತ ಫಲಿತಾಂಶ ನೀಡದೆ ಇರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದರೂ, ನಲ್ಲಿಗಳಲ್ಲಿ ನೀರು ಬರದ ಕಾರಣ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಟ್ಟಿಹಳ್ಳಿ ತಾಲೂಕಿನ ನೆಶ್ವಿ ಗ್ರಾಮದಲ್ಲಿ ಈ ಸಮಸ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ 600ಕ್ಕೂ ಹೆಚ್ಚು ಮನೆಗಳಿಗೆ ‘ಮನೆ ಮನೆಗೆ ಗಂಗೆ’ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಪೈಪ್‌ಲೈನ್ ಅಳವಡಿಸಿ, ಮನೆಗಳಿಗೆ ನಲ್ಲಿಗಳನ್ನು ಜೋಡಿಸಿ ಐದು ವರ್ಷ ಕಳೆದರೂ, ಮನೆಗಳಿಗೆ ನೀರು ಸರಬರಾಜು ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನೀರಿಲ್ಲದೇ ಇರುವ ನಲ್ಲಿಗಳು ತುಕ್ಕು ಹಿಡಿಯುತ್ತಿರುವುದಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಬಾಗಿಲಿಗೆ ನಲ್ಲಿ ಇದ್ದರೂ, ನೀರಿಗಾಗಿ ಸಾರ್ವಜನಿಕ ನಳಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸುಮಾರು 50 ರಿಂದ 100 ಕುಟುಂಬಗಳಿಗೆ ಒಂದೇ ಸಾರ್ವಜನಿಕ ನಲ್ಲಿ ಇರುವುದರಿಂದ, ದಿನಕ್ಕೆ ಕೇವಲ ಒಂದು ಗಂಟೆ ನೀರು ಬಂದಾಗ ಎಲ್ಲರೂ ಒಂದೇ ಸಮಯದಲ್ಲಿ ನೀರು ಸಂಗ್ರಹಿಸಲು ಹರಸಾಹಸ ಪಡಬೇಕಾಗಿದೆ. ಇದು ಗ್ರಾಮಸ್ಥರ ನಿತ್ಯದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.