Ticker

6/recent/ticker-posts
Responsive Advertisement

Udupi: ಕರಾವಳಿಯ 11 ಬೀಚ್‌ಗಳಿಗೆ ಬ್ಲ್ಯೂ ಫ್ಲ್ಯಾಗ್‌ ಗೌರವ

ಉಡುಪಿ:ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ಸಿಕ್ಕಿದೆ. ಕಾಪು, ತಣ್ಣೀರುಬಾವಿ, ಕೋಡಿ ಸೇರಿದಂತೆ ಒಟ್ಟು 11 ಬೀಚ್‌ಗಳನ್ನು ಬ್ಲ್ಯೂ ಫ್ಲ್ಯಾಗ್ ಪ್ರಮಾಣೀಕರಣಕ್ಕೆ ಆಯ್ಕೆ ಮಾಡಲಾಗಿದೆ. ಸ್ವಚ್ಛತೆ, ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ಮಾನದಂಡಗಳ ಆಧಾರದ ಮೇಲೆ ಈ ಬೀಚ್‌ಗಳನ್ನು ಗುರುತಿಸಲಾಗಿದೆ.

ಈ ಪಟ್ಟಿಯಲ್ಲಿ ಕಾಪು ಬೀಚ್, ತಣ್ಣೀರುಬಾವಿ ಬೀಚ್, ಕೋಡಿ ಬೀಚ್ ಸೇರಿವೆ. ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಬೀಚ್‌ಗಳೂ ಈ ಯೋಜನೆಯ ಭಾಗವಾಗಿವೆ. ಇದರಿಂದ ಕರಾವಳಿ ಪ್ರದೇಶಗಳ ಪ್ರವಾಸೋದ್ಯಮದ ಚಿತ್ರಣವೇ ಬದಲಾಗುವ ನಿರೀಕ್ಷೆ ಇದೆ.

ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ದೊರೆತರೆ, ಈ ಬೀಚ್‌ಗಳಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್, ಬೀಚ್‌ಸೈಡ್ ರೆಸಾರ್ಟ್, ಹೋಮ್‌ಸ್ಟೇ, ಆತಿಥ್ಯ ಸೇವೆಗಳಂತಹ ಹೊಸ ಹೂಡಿಕೆ ಅವಕಾಶಗಳು ಹೆಚ್ಚಾಗಲಿವೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿ, ಸಣ್ಣ ವ್ಯಾಪಾರಗಳಿಗೆ ಚೈತನ್ಯ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2024–29ರಡಿ ಕರಾವಳಿ ಜಿಲ್ಲೆಗಳಲ್ಲಿ ನೂರಾರು ಕೋಟಿ ರೂ. ಹೂಡಿಕೆ ಯೋಜನೆಗಳನ್ನು ಜಾರಿಗೊಳಿಸುವ ಗುರಿ ಇಟ್ಟಿದ್ದು, 2029ರ ವೇಳೆಗೆ ರಾಜ್ಯವನ್ನು ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮದಲ್ಲಿ ಮುಂಚೂಣಿಗೆ ತರಲು ಸರ್ಕಾರ ಯೋಜಿಸಿದೆ. ಕರಾವಳಿಯ ಬೀಚ್‌ಗಳಿಗೆ ಬ್ಲ್ಯೂ ಫ್ಲ್ಯಾಗ್ ಗೌರವ ಸಿಕ್ಕರೆ, ಇದು ಕರ್ನಾಟಕದ ಪ್ರವಾಸೋದ್ಯಮಕ್ಕೆ ದೀರ್ಘಕಾಲಿಕ ಲಾಭ ತರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು