Ticker

6/recent/ticker-posts
Responsive Advertisement

News: ಜ.27 ಬ್ಯಾಂಕ್ ಮುಷ್ಕರ ಎಫೆಕ್ಟ್: ಜನವರಿಗೆ 4 ದಿನ ಬ್ಯಾಂಕ್ ಬಂದ್?

ಬೆಂಗಳೂರು:
ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ಮುಷ್ಕರದ ಹಿನ್ನೆಲೆ, ಜನವರಿ 24ರಿಂದ 27ರವರೆಗೆ ಬ್ಯಾಂಕ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬ್ಯಾಂಕ್ ನೌಕರರ ಸಂಘಟನೆಗಳ ಮಾಹಿತಿ ಪ್ರಕಾರ, ದೇಶಾದ್ಯಂತ ಸುಮಾರು 9 ಯೂನಿಯನ್ಸ್‌ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಇದರ ಪರಿಣಾಮವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಶಾಖಾ ಮಟ್ಟದ ಕಾರ್ಯಾಚರಣೆಗಳು ಭಾಗಶಃ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ರಜೆಗಳು ಈ ರೀತಿಯಾಗಿವೆ:

ಜ.24 – ನಾಲ್ಕನೇ ಶನಿವಾರ (ಬ್ಯಾಂಕ್ ರಜೆ)

ಜ.25 – ಭಾನುವಾರ

ಜ.26 – ಗಣರಾಜ್ಯೋತ್ಸವ (ರಾಷ್ಟ್ರೀಯ ರಜೆ)

ಜ.27 – ಬ್ಯಾಂಕ್ ನೌಕರರ ಮುಷ್ಕರ

ಈ ಕಾರಣದಿಂದ ಒಟ್ಟು 4 ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ. ನಗದು ವಹಿವಾಟು, ಚೆಕ್ ಕ್ಲಿಯರೆನ್ಸ್, ಶಾಖಾ ಸೇವೆಗಳು ಹಾಗೂ ಕೌಂಟರ್ ಕಾರ್ಯಗಳಲ್ಲಿ ತೊಂದರೆ ಉಂಟಾಗಬಹುದು.

ಆದರೆ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, UPI, ATM ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಗ್ರಾಹಕರು ಅಗತ್ಯ ಹಣಕಾಸು ವ್ಯವಹಾರಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಉತ್ತಮ ಎಂದು ಬ್ಯಾಂಕ್ ವಲಯದವರು ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು