Ticker

6/recent/ticker-posts
Responsive Advertisement

KSRTC: ಸತತ ಮೂರು ದಿನ ರಜೆ: ಊರು- KSRTC ಜೊತೆಗೆ BMTC ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, (ಜನವರಿ 23):
ಜನವರಿ ತಿಂಗಳ ಕೊನೆಯಲ್ಲಿ ಸತತ ಮೂರು ದಿನ ರಜೆ ಲಭಿಸುತ್ತಿರುವುದರಿಂದ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಜಿಲ್ಲೆಗಳತ್ತ ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿವರ್ಷದಂತೆ ಈ ಬಾರಿ ಕೂಡ ರಜೆ ಅವಧಿಯಲ್ಲಿ ಊರು ಹಾಗೂ ಪ್ರವಾಸ ಸ್ಥಳಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ.

ಈ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿದೆ. ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕೂಡ ನಗರದಿಂದ ಹೊರ ಜಿಲ್ಲೆಗಳತ್ತ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಿದೆ.

ಜನವರಿ 24ರಂದು ನಾಲ್ಕನೇ ಶನಿವಾರ, 25ರಂದು ಭಾನುವಾರ ಹಾಗೂ 26ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನವರಿ 23ರಿಂದಲೇ ಹೆಚ್ಚುವರಿ ಬಸ್ ಸಂಚಾರ ಆರಂಭವಾಗಲಿದೆ.

ಮಾಹಿತಿ ಪ್ರಕಾರ, ಜನವರಿ 23ರಂದು ಸುಮಾರು 265 BMTC ಬಸ್‌ಗಳು ಹಾಗೂ ಜನವರಿ 24ರಂದು 500ಕ್ಕೂ ಹೆಚ್ಚು BMTC ಬಸ್‌ಗಳನ್ನು ಹೆಚ್ಚುವರಿಯಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳತ್ತ ಪ್ರಯಾಣಿಕರನ್ನು ಸಾಗಿಸಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು