ಬಂಟ್ವಾಳದ ನಿವೃತ್ತ ಉಪನ್ಯಾಸಕ,ಪರಿಸರ ಪ್ರೇಮಿಯೊಬ್ಬರು ತಮ್ಮ ಮಗಳ ಮದುವೆಗೆ ವಿಶಿಷ್ಟ ರೀತಿಯಲ್ಲಿ ಪರಿಸರ ಸ್ನೇಹ ಆಮಂತ್ರಣ ಪತ್ರಿಕೆಯನ್ನು ನಿರ್ಮಿಸಿದ್ದಾರೆ. ರಾಜಮಣಿ ರಾಮ ಕುಂಜ ಎನ್ನುವವರ ಪುತ್ರಿ ಮೇಧಾ ರಾಮ ಕುಂಜ ಅವರ ಮದುವೆ ಇದೇ ಬರುವ ಡಿಸೆಂಬರ್ ತಿಂಗಳಿನಲ್ಲಿ ರಂಜನ್ ಆಚಾರ್ಯ ಅವರೊಂದಿಗೆ ನಡೆಯಲಿದ್ದು ತಮ್ಮ ಮಗಳ ಮದುವೆಯ ನಿಮಿತ್ತ ರಾಜಮಣಿ ರಾಮ ಕುಂಜ ಅವರು ವಿಶಿಷ್ಟ ರೀತಿಯಲ್ಲಿ ಲಗ್ನಪತ್ರಿಕೆಯನ್ನು ರೆಡಿ ಮಾಡಿಸಿದ್ದಾರೆ.
ಮದುವೆಯ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಖ್ಯಾತ ಕಲಾವಿದ ಭುವನ್ ಮಂಗಳೂರು ಅವರು ವಿನ್ಯಾಸಗೊಳಿಸಿದ ವಧು-ವರರ ರೇಖಾಚಿತ್ರಗಳಿವೆ.
ಲಗ್ನ ಪತ್ರಿಕೆಯ ಒಳ ಪುಟದಲ್ಲಿ ಆಹ್ವಾನ ನೀಡುವ ರೀತಿಯಲ್ಲಿ ಗಿಡ ಒಂದು ಮೂಡಿದ್ದು ಅದರ ಜೊತೆಗೆ ಹೋಮ ಕುಂಡ ಚೆನ್ನಾಗಿ ಅಲಂಕೃತವಾಗಿದೆ. ಲಗ್ನ ಪತ್ರಿಕೆಯಲ್ಲಿರುವ ಬರಹದ ಕೆಳಗೆ ಬೆಂಡೆಕಾಯಿ, ಬದನೆಕಾಯಿ, ಪಾಲಕ್ ಮುಂತಾದ ವಿವಿಧ ತರಕಾರಿಗಳ ಪ್ಯಾಕೆಟ್‌ಗಳಿವೆ. ಆಹ್ವಾನ ಪಡೆದ ಪ್ರತಿ ಮನೆಯಲ್ಲಿ ಕನಿಷ್ಠ ಒಂದು ತರಕಾರಿ ಇರಬೇಕು ಮತ್ತು ಆ ಮೂಲಕ ಪರಿಸರವನ್ನು ಸಂರಕ್ಷಿಸುವತ್ತ ಅವರ ಮನಸ್ಸು ಪರಿವರ್ತನೆಯಾಗಬೇಕು ಎಂದು ರಾಜಮಣಿ ಹೇಳುತ್ತಾರೆ.
ನಾಲ್ಕು ಪುಟಗಳ ಆಮಂತ್ರಣ ಪತ್ರಿಕೆಯ ಕೊನೆಯ ಪುಟದಲ್ಲಿ ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಶೀರ್ಷಿಕೆಯಡಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಘೋಷಣೆಗಳು ಆಹ್ವಾನಿತರನ್ನು ಆಕರ್ಷಿಸುತ್ತವೆ. ಪ್ಲಾಸ್ಟಿಕ್ ಮತ್ತು ಕಸವನ್ನು ಬಳಸಬೇಡಿ ಮತ್ತು ಎಸೆಯಬೇಡಿ ಎಂಬ ಸಂದೇಶಗಳನ್ನು ಸಹ ಲಗ್ನ ಪತ್ರಿಕೆಯಲ್ಲಿ ಬರೆಯಲಾಗಿದೆ.
ಮದುವೆಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಮೊರೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ರಾಜಾಮಣಿ ಅವರ ವಿಶಿಷ್ಟ ತರಕಾರಿ ಸೀಡ್ ವಿನ್ಯಾಸದ ಮದುವೆಯ ಆಮಂತ್ರಣ ಹಲವರಿಗೆ ಪೂರ್ತಿ ನೀಡುವ ರೀತಿಯಲ್ಲಿ ಇದ್ದು ಅವರ ಈ ಕಾರ್ಯ ಹಲವರಿಗೆ ಮಾದರಿಯಾಗಲಿ ಎನ್ನುವುದು ನಮ್ಮೆಲ್ಲರ ಆಶಯ
Tags:
ಮಂಗಳೂರು ಜಿಲ್ಲಾ ಸುದ್ದಿಗಳು