ಪಾಕ್ ತಂಡದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿಧಿಗೆ ಕೊರೋನಾ ಸೋಂಕು ಧೃಡ.

ಪಾಕ್ ತಂಡದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿಧಿಗೆ ಕೊರೋನಾ ಸೋಂಕು ಧೃಡ.


ಪಾಕಿಸ್ತಾನದಲ್ಲಿ ಕೊರೊನಾ ತನ್ನ ಪ್ರಭಾವವನ್ನು ಈಗಾಗಲೇ ಬೀರುತ್ತಿದೆ. ಪಾಕಿಸ್ತಾನದಲ್ಲಿ ಕೂಡ ಕೊರೊನಾ ವೈರಸ್ನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಈಗಾಗಲೇ ಅಲ್ಲಿನ ಮಾಜಿ ಕ್ರಿಕೆಟ್ ಆಟಗಾರರು ಕೊರೊನಾ ಗೆ ಬಲಿಯಾಗಿದ್ದು ಕೂಡಾ ಮಾದ್ಯಮಗಳ ಸುದ್ದಿಯ ಮೂಲಕ ತಿಳಿದು ಬಂದಿತ್ತು. ಈಗ ಇದೆಲ್ಲದರ ಮಧ್ಯೆ ಇನ್ನೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಪಾಕ್ ನ ಇನ್ನೊಬ್ಬ ಕ್ರಿಕೆಟಿಗನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಶಾಹಿದ್ ಅಫ್ರಿದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಈ ವಿಷಯವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.



ಗುರುವಾರದ ದಿನ ತನಗೆ ಅತಿ ಅನಾರೋಗ್ಯ ಕಾಡಿದ್ದು ಅದಕ್ಕಾಗಿ ನಾನು ಆಸ್ಪತ್ರೆಗೆ ಕಾಣಿಸಿದಾಗ ನನಗೆ ವೈರಸ್ ಸೋಂಕು ಇರುವುದು ದೃಡಪಟ್ಟಿದೆ. ಇದು ಆದಷ್ಟು ಬೇಗ ಗುಣವಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ಮನವಿ ಮಾಡಿರುವುದಾಗಿ ತಮ್ಮ ಅಭಿಮಾನಿಗಳಿಗೆ ಸೋಂಕಿನ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳೆಲ್ಲರೂ ಶೀಘ್ರವಾಗಿ ಗುಣಮುಖವಾಗಲಿ ಎಂದು ಆರೈಕೆಯನ್ನು ಮಾಡುತ್ತಿದ್ದಾರೆ.


ಮೇ ತಿಂಗಳ ಆರಂಭದ ಸಮಯದಲ್ಲಿ ಶಾಹಿದ್ ಆಫ್ರಿದಿ ಅವರು ಬಾಂಗ್ಲಾದೇಶದ ಮುಶ್ಕೀರ್ ರಹೀಮ್ ಅವರ ಬ್ಯಾಟನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರು. ಇದಷ್ಟೇ ಅಲ್ಲದೆ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಹಣವನ್ನು ಕೂಡ ನೀಡಿದ್ದರು, ಅದಲ್ಲದೆ ಸಂಕಷ್ಟಕ್ಕೆ ಒಳಗಾದವರಿಗೆ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದರ ಮೂಲಕ ಜನಸೇವೆಯ ಕಾರ್ಯಗಳನ್ನು ಮಾಡುತ್ತಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement