ಮಂಗಳೂರು: ಕೇರಳ ರಾಜ್ಯದಿಂದ ಮಂಗಳೂರಿಗೆ ಗರ್ಭಿಣಿ ಮಹಿಳೆಯೊಬ್ಬಳು ಕಾಲ್ನಡಿಗೆಯಲ್ಲಿ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನ ಸಹಾಯದಿಂದ ಗರ್ಭಿಣಿ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಕೇರಳ ರಾಜ್ಯದ ಕಣ್ಣೂರಿನಲ್ಲಿ ವಿಜಯಪುರ ಮೂಲದವರಾದ 8 ಮಂದಿ ಜನರು ಕೆಲಸ ಮಾಡಿಕೊಂಡಿದ್ದರು. Covid-19 ವೈರಸ್ ಸೋಂಕಿನ ಪರಿಣಾಮವಾಗಿ ಲಾಕ್‍ಡೌನ್ ಉಂಟಾದ ಹಿನ್ನೆಲೆಯಲ್ಲಿ ತಮ್ಮ ಮೂಲ ಸ್ಥಳವಾದ ವಿಜಯಪುರಕ್ಕೆ ಹೋಗಲು ಈ ಎಂಟು ಕಾರ್ಮಿಕರು ನಿರ್ಧರಿಸಿದ್ದರು. ಆದರೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲವಾದ್ದರಿಂದ ಅವರು ಕೇರಳದಿಂದ ನಡೆದುಕೊಂಡು ಬಂದಿದ್ದಾರೆ. ಈ ವೇಳೆಯಲ್ಲಿ ಮಂಗಳೂರು ಪೊಲೀಸರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದ್ದು ನಡೆದುಕೊಂಡ ಬಂದ ಜನರಲ್ಲಿ ಗರ್ಭಿಣಿ ಮಹಿಳೆಯು ಇದ್ದದ್ದು ಗೊತ್ತಾಗಿದೆ.
ಇವರೆಲ್ಲರೂ ಏಳು ದಿನಗಳ ಹಿಂದೇನೆ ಕಣ್ಣೂರಿನಿಂದ ನಡೆಯಲಾರಂಭಿಸಿದರಂತೆ. ಮಂಗಳೂರಿನಲ್ಲಿ ಇವರನ್ನು ನಿಲ್ಲಿಸಿ ಕೇಳಿದಾಗ ತಕ್ಷಣವೇ ಮಂಗಳೂರು ಪೊಲೀಸರು ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದ್ದಾರೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು