ಅನಿರೀಕ್ಷಿತವಾಗಿ ಧನಾಗಮ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ನಿಮ್ಮ ಮೇಲಿರುವ ಆರ್ಥಿಕ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇದೆ. ಸ್ನೇಹಿತರು- ಬಂಧುಗಳು ಸಹಾಯಕ್ಕೆ ಬರಲಿದ್ದಾರೆ. ಕುಂದಿದ್ದ ಉತ್ಸಾಹ ಹಾಗೂ ನಂಬಿಕೆ ಮತ್ತೆ ಕಾಣಿಸಿಕೊಳ್ಳಲಿದೆ.
ದಿಢೀರ್ ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿ ಆಗುತ್ತದೆ. ಹಣದ ಸಮಸ್ಯೆ ತೀವ್ರವಾಗುವುದರಿಂದ ನೆರವು ಕೇಳಲೇಬೇಕಾದ ಸ್ಥಿತಿ ಉದ್ಭವಿಸುತ್ತದೆ. ಅವಿವಾಹಿತರಿಗೆ ನಾನಾ ಬಗೆಯಲ್ಲಿ ಅಡ್ಡಿ- ಆತಂಕಗಳು ಕಾಣಿಸಿಕೊಳ್ಳುತ್ತವೆ. ಉದ್ಯೋಗ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಬರುತ್ತದೆ.
ನಿಮ್ಮ ಸ್ವಭಾವದಲ್ಲಿ ಬದಲಾವಣೆ ಆಗುತ್ತಿರುವುದನ್ನು ಕುಟುಂಬದವರು ಗಮನಿಸುತ್ತಾರೆ. ಇತರರ ಸಮಸ್ಯೆಗಳಿಗೆ ಸ್ಪಂದಿಸುತ್ತೀರಿ. ಕೈಲಾಸ ಸಹಾಯ ಮಾಡಲು ಮುಂದಾಗುತ್ತೀರಿ. ವಾಹನ ಓಡಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ವಂಚಕರಿಂದ ಮೋಸ ಹೋಗುವ ಸಾಧ್ಯತೆ ಇದೆ.
ನಿಮಗೆ ಕೇಳಿಬಂದ ವದಂತಿಯನ್ನು ನಂಬಿ, ಯಾವುದೇ ನಿರ್ಧಾರ ಮಾಡಬೇಡಿ. ಅಧಿಕೃತವಾಗಿ ಮಾಹಿತಿ ಸಿಗುವ ತನಕ ವಿಪರೀತದ ನಡೆ ಒಳ್ಳೆಯದಲ್ಲ. ಹತ್ತಿರದವರಿಗೆ ಇರುವ ಸಾಲದ ಬಾಕಿಯನ್ನು ವಾಪಸ್ ಮಾಡಿ. ಯಾರೇ ನೀಡಿದ ಸಲಹೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರಿ.
ಕರಿದ ಅಥವಾ ಮಸಾಲೆ ಪದಾರ್ಥಗಳ ಸೇವನೆಯನ್ನು ಮಾಡಬೇಡಿ. ಇನ್ನು ನೀರು ಸೇವನೆ ಬಗ್ಗೆಯೂ ಗಮನ ಇರಲಿ. ಸ್ವಚ್ಛತೆ ಕಾಪಾಡಿಕೊಳ್ಳದೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಕಾಣುತ್ತಿದೆ. ಆಪ್ತರ ಹಣಕಾಸಿನ ಸಮಸ್ಯೆಗಳನ್ನು ನೀವು ಬಗೆಹರಿಸಲಿದ್ದೀರಿ. ಪ್ರೇಮಿಗಳಿಗೆ ಉತ್ತಮವಾದ ದಿನ.
ಎಲ್ಲ ಸಮಸ್ಯೆಗಳೂ ನನ್ನನ್ನೇ ಬೆನ್ನಟ್ಟಿ ಬರುತ್ತವೆ ಎಂಬ ಹತಾಶ ಭಾವನೆ ಬೇಡ. ಇವೆಲ್ಲ ತಾತ್ಕಾಲಿಕ ಮಾತ್ರ. ನಿಮ್ಮ ಸಾಮರ್ಥ್ಯ ಹಾಗೂ ಪ್ರಾಮಾಣಿಕತೆ ಗೊತ್ತಾಗಿ, ಸೂಕ್ತ ಸ್ಥಾನಮಾನ ದೊರೆಯಲಿದೆ. ಯಾರ ಬಳಿ ಸಹಾಯ ಕೇಳುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಇರಲಿ. ಅನರ್ಹರ ಬಳಿ ಕೈ ಚಾಚಬೇಡಿ.
ನಿಮ್ಮ ಮೇಲೆ ಮನೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. ಸಣ್ಣ ಸುಳ್ಳು, ಇದರಿಂದ ಅಪಾಯ ಏನೂ ಇಲ್ಲ ಎಂಬ ಧೋರಣೆ ಸರಿಯಲ್ಲ. ಸಂಗಾತಿ- ಮಕ್ಕಳಿಗೆ ಹೆಚ್ಚಿನ ಸಮಯ ಕೊಡಿ. ಸ್ವತಂತ್ರವಾಗಿ ಆಲೋಚನೆ ಮಾಡಿ. ಇತರರನ್ನು ಅನುಸರಿಸದಿರುವುದು ಅತ್ಯುತ್ತಮ.
ಸಹೋದ್ಯೋಗಿಗಳಿಗೆ ನಿಮ್ಮ ನಡವಳಿಕೆ ಬೇಸರ ತರಿಸುತ್ತದೆ. ಉದ್ದೇಶಪೂರ್ವಕ ಹೌದೋ ಅಲ್ಲವೋ ನೀವು ಸಿಟ್ಟು ಮಾಡಿಕೊಳ್ಳುವುದೋ ಕೋಪದಿಂದ ಕೂಗಾಡುವುದೋ ಮಾಡುತ್ತೀರಿ. ಇತರರ ದೃಷ್ಟಿಯಲ್ಲಿ ಪೂರ್ವಾಪರ ಆಲೋಚನೆ ಇಲ್ಲದ ವ್ಯಕ್ತಿ ಎಂಬ ಹಣೆಪಟ್ಟಿ ಹಚ್ಚಿಸಿಕೊಳ್ಳುತ್ತೀರಿ, ಎಚ್ಚರ.
ಗುಟ್ಟಾಗಿದ್ದ ಸಂಬಂಧ, ಪ್ರೇಮ ಪ್ರಕರಣಗಳಿಂದ ಅವಮಾನ ಎದುರಾಗಬಹುದು. ತಲೆ ನೋವು, ಹಲ್ಲು- ಗಂಟಲು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ದೊರೆಯುವ ಅವಕಾಶ ಇದೆ. ಆದರೆ ಹಣದ ವಿತರಣೆ ಸರಿಯಾಗಿ ಆಗುವಂತೆ ಎಚ್ಚರ ವಹಿಸಿ.
ಬಹಳ ಲೆಕ್ಕಾಚಾರದ ಹೆಜ್ಜೆಗಳನ್ನು ಇಡುತ್ತೀರಿ. ಮಾತಿನ ಮೂಲಕವೇ ಅಪಾಯಗಳನ್ನು ನಿವಾರಿಸಿಕೊಳ್ಳುತ್ತೀರಿ. ನಿಮ್ಮ ತಾಳ್ಮೆ- ಸಂಯಮ ಸಹಾಯಕ್ಕೆ ಬರುತ್ತದೆ. ನಿಮ್ಮ ಸಲಹೆ- ಆಲೋಚನಾ ವಿಧಾನಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ವೃತ್ತಿಪರರಿಗೆ ಏಳ್ಗೆಯ ದಿನ ಇದು.
ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ಧ್ಯಾನ- ಯೋಗ ಇತ್ಯಾದಿಗಳಿಗೆ ಸಮಯ ಮೀಸಲಿಡುತ್ತೀರಿ. ಹಣಕಾಸಿನ ಬಿಕ್ಕಟ್ಟಿಗೆ ತಾತ್ಕಾಲಿಕವಾಗಿ ಪರಿಹಾರ ದೊರೆಯಲಿದೆ. ಮನೆಯ ದುರಸ್ತಿ ಮಾಡಬೇಕೆಂದು ಇದ್ದವರು ಇನ್ನೂ ಕೆಲ ಸಮಯ ಮುಂದೂಡಲು ತೀರ್ಮಾನಿಸುತ್ತೀರಿ.
ಒಂದಲ್ಲ ಒಂದು ಕೆಲಸ ಬಂದು ನಿಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ಪೂರೈಸುವುದು ಕಷ್ಟವಾಗುತ್ತದೆ. ನೀವು ಬಹಳ ನಂಬಿದ ಆಪ್ತರ ಜತೆಗೆ ಭಿನ್ನಾಭಿಪ್ರಾಯ ಉದ್ಭವ ಆಗಲಿದೆ. ವ್ಯಾಪಾರಿಗಳು- ಉದ್ಯಮಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗುವುದಿಲ್ಲ. ಮುಖ್ಯವಾದ ಕೆಲಸಗಳನ್ನು ಮುಂದೂಡಬೇಕಾಗುತ್ತದೆ.
ಕೃಪೆ: kannada.oneindia.com
Tags:
ದಿನ ಭವಿಷ್ಯ