ಭಟ್ಕಳದಲ್ಲಿ ಮಹಿಳಾ ವಂಚಕಿ ಯೊಬ್ಬಳು ತಾನು ಅಯ್ಯಪ್ಪನ ಭಕ್ತರೆಂದು ಸುಳ್ಳು ಹೇಳಿ ಮನೆಯೊಳಕ್ಕೆ ಪ್ರವೇಶ ಪಡೆದು ಮನೆಯವರಿಗೆಲ್ಲ ಸಾವಿನ ಭಯವನ್ನು ಮೂಡಿಸಿ ಮಾಟ ಮಂತ್ರ ಎಂದು ಹೇಳಿಕೊಂಡು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಮಾರ್ಚ್ ಒಂದರಂದು ನಡೆದಿದೆ.
ಇಷ್ಟಾದರೂ ಆ ಮನೆಯವರಿಗೆ ತಾವು ಮೋಸ ಹೋಗಿದ್ದೇವೆ ಎಂದು ತಿಳಿಯದೆ ಆನಂತರ ಹದಿನೈದು ದಿನಗಳ ಬಳಿಕ ತಾವು ಮೋಸ ಹೋಗಿದ್ದೇವೆ ಎಂದು ತಿಳಿದು ಭಟ್ಕಳದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಏನಿದು ಘಟನೆ?
ಮಾರ್ಚ್ ಒಂದನೇಯ ತಾರೀಖಿನಂದು ಭಟ್ಕಳದ ಶಿರಾಲಿ ತಾಲೂಕಿನ ಶಾರದಾ ಹೊಳೆ ಶಶಿಹಿತ್ಲು ವಿನ ಜಯಲಕ್ಷ್ಮಿ ಮಂಜುನಾಥ್ ನಾಯಕ ಎಂಬಾಕೆಯ ಮನೆಗೆ ಮಹಿಳೆಯೊಬ್ಬಳು ನೀಲಿ ಬಣ್ಣದ ಸೀರೆಯನ್ನು ಉಟ್ಟುಕೊಂಡು ತನ್ನ ಮುಖಕ್ಕೆ ಅರ್ಧ ಸೆರಗನ್ನು ಮುಚ್ಚಿಕೊಂಡು ತಾನು ಹುಬ್ಬಳ್ಳಿ ಅವಳು ತನ್ನ ಹೆಸರು ನಾಗಮ್ಮ ಎಂದು ಪರಿಚಯವನ್ನು ಮಾಡಿಕೊಂಡಿದ್ದಾಳೆ. ತಾನು ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಹಾಕಿದ್ದೇನೆ ಯಾವುದೇ ರೀತಿಯ ಸುಳ್ಳನ್ನು ಹೇಳುವುದಿಲ್ಲ ಎಂದು ಕೂಡ ಹೇಳಿದ್ದಾಳೆ.
ಈ ಮಾತನ್ನು ನಂಬಿ ಮನೆಯವರು ಅವಳಿಗೆ ಮನೆಯಲ್ಲಿ ಕುಳಿತುಕೊಳ್ಳಲು ಜಾಗವನ್ನು ಕೊಟ್ಟು ನೀರನ್ನು ಕೊಟ್ಟು ಉಪಚರಿಸಿದರು. ಆನಂತರ ಅವಳು ನಿಮ್ಮ ಮನೆಯ ಮೇಲೆ ಯಾರೋ ಮೋಡಿ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ಒಂದು ಹೆಣ ಹೇಳಬೇಕಿತ್ತು, ದೇವರ ಅನುಗ್ರಹದಿಂದ ಅದು ತಪ್ಪಿದೆ, ಬರುವ ಅಮಾವಾಸ್ಯೆಯ ಒಳಗೆ ನಾಲ್ಕು ಜನರ ಸಾವು ಸಂಭವಿಸಬಹುದು ಎಂದು ಹೇಳಿ ಮನೆಯವರನ್ನು ಹೆದರಿಸಿ ನಾನು ಲಕ್ಷ್ಮಿ ಪೂಜೆಯನ್ನು ಮಾಡಿ ಎಲ್ಲವನ್ನು ನಿವಾರಿಸುತ್ತೇವೆ ಎಂದು ಹೇಳಿದ್ದಾಳೆ.
ಆನಂತರ 1ಲೀಟರ್ ದೀಪದ ಎಣ್ಣೆಯನ್ನು ತಂದು ಕೊಡು ಎಂದು ಹೇಳಿದಾಗ ಮನೆಯೊಡತಿ ತಂದುಕೊಟ್ಟಿದ್ದಾಳೆ. ಅದಕ್ಕೆ ಯಾವುದು ಬಿಳಿ ಪುಡಿಯನ್ನು ಹಾಕಿ ದೀಪ ಹಚ್ಚಲು ಹೇಳಿದ್ದಾಳೆ. ಆನಂತರ ಮನೆಯಲ್ಲಿರುವ ಎಲ್ಲಾ ಆಭರಣಗಳನ್ನು ಪೂಜೆಗೆ ತಂದು ಇಡುವಂತೆ ಹೇಳಿದ್ದಾಳೆ. ಈ ಸಮಯದಲ್ಲಿ ಜಯಲಕ್ಷ್ಮಿ ಅತ್ತೆ ಸುಕ್ರಿ ಎಂಬುವವರು 14101 ರೂಪಾಯಿಗಳನ್ನು ತಂದುಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಗಳು ಹಾಗೂ ಬೆಳ್ಳಿ ತಂದು ಕೊಟ್ಟಿದ್ದಾರೆ.
ಎಲ್ಲಾ ವಸ್ತುಗಳನ್ನು ತುಂಬಿಕೊಂಡ ವಂಚಕಿ ಮಹಿಳೆ ತಾನು ಹುಬ್ಬಳ್ಳಿಗೆ ಹೋಗಿ ಅಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ಮೂರು ದಿನಗಳ ಬಳಿಕ ಬಂದು ಇವನ್ನೆಲ್ಲ ಒಪ್ಪಿಸುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಪೂಜೆಯ ಬಗ್ಗೆ ಯಾರಿಗಾದರೂ ಹೇಳಿದರೆ ಪೂಜೆ ವ್ಯರ್ಥವಾಗುತ್ತದೆ ಎಂದು ಮನೆಯವರನ್ನ ನಂಬಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುಮಾರು ದಿನಗಳು ಕಳೆದರೂ ಅವಳು ಹಿಂದಿರುಗದೇ ಬರೆದಿದ್ದನ್ನು ನೋಡಿದ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.