Ticker

6/recent/ticker-posts
Responsive Advertisement

ಉತ್ತರ ಕನ್ನಡ ಜಿಲ್ಲೆಗೆ ಬಂಗಾರದ ಪದಕ ತಂದುಕೊಟ್ಟ ಯಲ್ಲಾಪುರದ ಕುವರಿ

ಉತ್ತರ ಕನ್ನಡ ಜಿಲ್ಲೆಗೆ ಬಂಗಾರದ ಪದಕ ತಂದುಕೊಟ್ಟ ಎಲ್ಲಾಪುರದ ಕುವರಿ


ಯಲ್ಲಾಪುರದ ತೇಜಸ್ವಿನಿ ಭಟ್ ಅವರು ದಾವಣಗೆರೆ ವಿಶ್ವವಿದ್ಯಾಲಯದ ಎಂಎಸ್ಸಿ ಪದವಿಯಲ್ಲಿ ಬಂಗಾರದ ಪದಕವನ್ನು ಪಡೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಎಂಎಸ್ಸಿ ಪದವಿ ಪರೀಕ್ಷೆಯ ಸಸ್ಯ ಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಅವರು ಈ ಸಾಧನೆಯನ್ನು ಮಾಡಿದ್ದಾರೆ. 

ಇದನ್ನು ಓದಿ:  ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ

ಇವರು ಉಮಾಮಹೇಶ್ವರ ಭಟ್ ಹಾಗೂ ಶೈಲಶ್ರೀ ಭಟ್ ದಂಪತಿಗಳ ಮಗಳಾಗಿದ್ದಾರೆ. ಈ ಹಿಂದೆ ಇವರು ಕಾರವಾರದ b.ed ಕಾಲೇಜಿನಲ್ಲಿ ಕೂಡ ಪ್ರಥಮ ಸ್ಥಾನ ಬಂದಿದ್ದರು. ಇವರ ಈ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಎಂಎಲ್ಸಿ ಶಾಂತಾರಾಮ್ ಸಿದ್ದಿ ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿಎಸ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು