Ticker

6/recent/ticker-posts
Responsive Advertisement

ಹೊನ್ನಾವರ: 6 ವರ್ಷದ ಬಾಲಕಿಯ ಮೇಲೆ ಕಾಂಕ್ರೀಟ್ ರಿಂಗ್ ಬಿದ್ದು ಮಗುವಿನ ದುರ್ಮರಣ

ಹೊನ್ನಾವರ: 6 ವರ್ಷದ ಬಾಲಕಿಯ ಮೇಲೆ ಕಾಂಕ್ರೀಟ್ ರಿಂಗ್ ಬಿದ್ದು ಮಗುವಿನ ದುರ್ಮರಣ


ಹೊನ್ನಾವರ: ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದ ಮಗುವಿನ ಮೈಮೇಲೆ ಕಾಂಕ್ರೀಟ್ ರಿಂಗ್ ಬಿದ್ದು ಮಗು ಸಾವಿಗೀಡಾದ ಘಟನೆ ಹೊನ್ನಾವರದ ಸಾಲಕೂಡ ಗ್ರಾಮದ ಕೆರೆಕೋಣ ಬಳಿ ನಡೆದಿದೆ.


ಮೃತಪಟ್ಟ ಬಾಲಕಿ ಚಿಂತನ ರಾಜು ನಾಯಕ್ ಎನ್ನಲಾಗಿದೆ. ಆರು ವರ್ಷದ ಈ ಬಾಲಕಿ ಉಳಿದ ಮಕ್ಕಳೊಂದಿಗೆ ಮನೆಯತ್ತಿರ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಂಕ್ರೀಟ್ ರಿಂಗ್ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು