ಸೆವೆನ್ ಆಫ್ ಎಂದುಕೊಂಡು ವಿಷಯವನ್ನು ಕುಡಿದ ಯುವಕನೊಬ್ಬ ಮೃತಪಟ್ಟ ಘಟನೆ ಹಾವೇರಿಯ ಸವನೂರು ತಾಲೂಕಿನ ಚಿಕ್ಕಮರಳಿ ಹಳ್ಳಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಹನುಮಂತ್ ಲಂಬಾಣಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮತಪಟ್ಟ ಯುವಕನ ತಂದೆ ಹಳಸಂದಿ ಮತ್ತು ಮೆಕ್ಕೆಜೋಳದ ಕೀಟಗಳಿಗೆ ಹಾಕುವ ವಿಷಕಾರಿ ಔಷಧವನ್ನು ಸೆವೆನ್ ಆಫ್ ಬಾಟಲಿಯಲ್ಲಿ ತುಂಬಿ ಇಟ್ಟಿದ್ದರು. ಆದರೆ ಇದನ್ನೇ ಸೆವೆನ್ ಆಫ್ ಎಂದು ತಿಳಿದುಕೊಂಡು ಅದನ್ನು ಕುಡಿದ ಯುವಕ ಅಸ್ವಸ್ಥ ನಾಗಿದ್ದಾಗ ಅವನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುತ್ತಿದ್ದಾಗ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Tags:
ಹಾವೇರಿ