ಇಂದಿನ ಭವಿಷ್ಯ ಜೂನ್ 17, 2020

Today astrology in kannada today horoscope in kannada
ಆದಾಯದಲ್ಲಿ ಹೆಚ್ಚಳ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಕಚೇರಿ ಬದಲಾವಣೆಗೆ ಆಲೋಚನೆ ಮಾಡಬಹುದು. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಈ ಹಿಂದೆ ನೀವು ಸಹಾಯ ಮಾಡಿದ್ದೀರಿ ಎಂಬ ಕಾರಣಕ್ಕೆ ಈಗ ನೆರವು ಕೇಳಿದರೆ ಅವಮಾನದ ಪಾಲಾಗುತ್ತೀರಿ.
Today astrology in kannada today horoscope in kannada
ಸಾಮಾಜಿಕ- ಧಾರ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಬೇಕಾಗುತ್ತದೆ. ಖರ್ಚಿನ ಪ್ರಮಾಣ ಹೆಚ್ಚಾಗಿರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಿಂದ ಮೆಚ್ಚುಗೆಯ ಮಾತುಗಳು ಕೇಳಿಬರಲಿವೆ. ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದೆ ದಿಢೀರ್ ದೂರಪ್ರಯಾಣ ಮಾಡುವಂಥ ಯೋಗ ಇದೆ.

Today astrology in kannada today horoscope in kannada
ನಿಮ್ಮ ವರ್ಚಸ್ಸು, ಪ್ರಭಾವ ಬಳಸಿ ಇತರರಿಗೆ ನೆರವಾಗಲಿದ್ದೀರಿ. ಅನಿರೀಕ್ಷಿತವಾಗಿ ಹೊಸ ಹೊಸ ಕ್ಷೇತ್ರದಲ್ಲಿ ಇರುವವರ ಪರಿಚಯವಾಗಿ, ನಿಮಗೆ ವೃತ್ತಿಪರ ಅನುಕೂಲಗಳು ಒದಗಿಬರಲಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಪ್ರಗತಿ ಇದೆ. ನಿಮಗಿರುವ ಸೀಮಿತ ಸಂಪನ್ಮೂಲದಲ್ಲಿ ದೊಡ್ಡದನ್ನು ಸಾಧಿಸಲಿದ್ದೀರಿ.

Today astrology in kannada today horoscope in kannada
ದಾಕ್ಷಿಣ್ಯದಿಂದಾಗಿ ನಿಮ್ಮಿಂದ ಸಾಧ್ಯವಿಲ್ಲದಂಥ ಕೆಲವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲಿದ್ದೀರಿ. ವಿರೋಧಿಗಳು ಸುಖಾಸುಮ್ಮನೆ ಆರೋಪಗಳನ್ನು ಮಾಡಬಹುದು. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲಿಸುವುದು ಉತ್ತಮ.

Today astrology in kannada today horoscope in kannada
ಯೋಗ- ಧ್ಯಾನ ಅಭ್ಯಾಸ ಶುರು ಮಾಡಬೇಕು ಅಂತ ಇರುವವರಿಗೆ ಸೂಕ್ತವಾದ ಸಮಯ ಇದು. ಅದಕ್ಕೆ ತಕ್ಕಂತೆ ಅನುಭವಿಗಳು, ತಜ್ಞರ ಮಾರ್ಗದರ್ಶನ ನಿಮಗೆ ದೊರೆಯಲಿದೆ. ನಿಮಗೆ ವಹಿಸಿದ ಜವಾಬ್ದಾರಿಯನ್ನು ಮಾಡಿದರಾಯಿತು ಎಂಬ ಧೋರಣೆಯಿಂದ ನೋಡಬೇಡಿ.

Today astrology in kannada today horoscope in kannada
ಈ ದಿನ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅನುಮಾನ ಮೂಡಬಹುದು. ಲೆಕ್ಕಾಚಾರಗಳು ಕೈ ಕೊಡುವ ಸಾಧ್ಯತೆ ಇದೆ. ಸಾಲಗಾರರಿಂದ ಒತ್ತಡ ಹೆಚ್ಚಾಗಲಿದೆ. ಸಂಗಾತಿ, ಮಕ್ಕಳ ಸಂತೋಷಕ್ಕಾಗಿ ಹೆಚ್ಚಿನ ಖರ್ಚು ಆಗಲಿದೆ. ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

Today astrology in kannada today horoscope in kannada
ಕಾನೂನು ವ್ಯಾಜ್ಯಗಳು ಇದ್ದಲ್ಲಿ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಿ. ಇತರರು ಮೂದಲಿಸಿದರೂ ಹೀಯಾಳಿಸಿದರೂ ಉದ್ವಿಗ್ನರಾಗಬೇಡಿ. ವೃತ್ತಿಪರರಿಗೆ ಹೊಸ ಸವಾಲುಗಳು ಎದುರಾಗಲಿವೆ. ಉದ್ಯೋಗ್ಯಸ್ಥರಿಗೆ ಅನಿರೀಕ್ಷಿತವಾದ ಬದಲಾವಣೆಗಳು ಆಗಬಹುದು. ಆದರೆ ಇದರಿಂದ ಆತಂಕ ಪಡುವ ಅಗತ್ಯ ಇಲ್ಲ.

Today astrology in kannada today horoscope in kannada
ಸಿದ್ಧ ಉಡುಪುಗಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ, ವೇತನ ಹೆಚ್ಚಳದಂಥದ್ದು ನಿರೀಕ್ಷೆ ಮಾಡಬಹುದು. ಭೂಮಿ- ಆಸ್ತಿ ವ್ಯವಹಾರಗಳಿಗೆ ಪ್ರಯತ್ನ ಪಡುತ್ತಿದ್ದಲ್ಲಿ ಪ್ರಗತಿ ಇದೆ. ಕೃಷಿಕರಿಗೆ ಹೆಚ್ಚುವರಿ ಆದಾಯ ಮೂಲಗಳು ಗೋಚರಿಸಲಿವೆ. ಸೋದರ- ಸೋದರಿಯರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ.

Today astrology in kannada today horoscope in kannada
ಪರಸ್ಥಳಕ್ಕೆ ವರ್ಗಾವಣೆ ಬಯಸುತ್ತಿದ್ದಲ್ಲಿ ಅಂದುಕೊಂಡಂತೆ ಬೆಳವಣಿಗೆಗಳು ಆಗಬಹುದು. ಗ್ಯಾಜೆಟ್, ಮೊಬೈಲ್ ಅಥವಾ ಲ್ಯಾಪ್ ಟಾಪ್ ಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವವರು ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಳತೆಗೆ ಮೀರಿ ಖರ್ಚು ಮಾಡಿದರೆ ಪರಿತಪಿಸುವಂತೆ ಆಗುತ್ತದೆ.

Today astrology in kannada today horoscope in kannada
ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಮಾತನಾಡುವ ಮುನ್ನ ಅದರ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಅರಿವಿರಲಿ. ಇನ್ನು ಊಟ- ತಿಂಡಿ ವಿಚಾರದಲ್ಲಿ ಪಥ್ಯವನ್ನು ಪಾಲಿಸಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ದಾಖಲೆಪತ್ರಗಳ ಕಡೆಗೆ ಗಮನ ಇರಲಿ.

Today astrology in kannada today horoscope in kannada
ಆಲಸ್ಯ ಈ ದಿನ ನಿಮ್ಮನ್ನು ಕಾಡಲಿದೆ. ಮೈ- ಕೈ ನೋವು, ನಿರಾಸಕ್ತಿಯಿಂದ ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡುವುದು ಕಷ್ಟವಾಗುತ್ತದೆ. ಇತರರ ಮಾತನ್ನು ಕೇಳಿ, ಆಸ್ತಿ ವಿಚಾರದಲ್ಲಿ ಯಾವುದೇ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.

Today astrology in kannada today horoscope in kannada
ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷ ಇದೆ. ವಿವಾಹ ವಯಸ್ಕ ಮಕ್ಕಳಿಗೆ ಸೂಕ್ತ ಸಂಬಂಧಗಳು ಒದಗಿ ಬರುವ ಯೋಗ ಇದೆ. ಬೆನ್ನು ನೋವು, ಕಾಲು ನೋವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಬಹುದು. ತಾಯಿ ಕಡೆಯ ಸಂಬಂಧಿಕರಿಂದ ಶುಭ ವಾರ್ತೆಯೊಂದು ಬರುವ ಯೋಗ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement