ಇಂದಿನ ಭವಿಷ್ಯ ಜೂನ್ 15, 2020

Today astrology in kannada today horoscope in kannada
ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಶುಭ ಕಾರ್ಯಗಳ ನೇತೃತ್ವವನ್ನು ನಿಮಗೆ ವಹಿಸುವ ಸಾಧ್ಯತೆ ಇದೆ. ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ. ಇಷ್ಟು ಸಮಯ ನಿಮ್ಮ ಶ್ರಮವನ್ನು ಗಮನಿಸಿದ್ದ ವ್ಯಕ್ತಿಯಿಂದ ಮೆಚ್ಚುಗೆ ಹಾಗೂ ಹೊಸ ಜವಾಬ್ದಾರಿ ದೊರೆಯುವ ಅವಕಾಶ ಇದೆ.
Today astrology in kannada today horoscope in kannada
ಎಲ್ಲರ ಸಮಸ್ಯೆಗಳನ್ನೂ ನಿಮ್ಮದೇ ಎನ್ನುವಂತೆ ಭಾವಿಸಿ, ಅವುಗಳನ್ನು ಪರಿಹರಿಸಲು ಮುಂದಾಗುವಿರಿ. ನಿಮ್ಮ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ. ದೂರಾಲೋಚನೆಯಿಂದ ನೀವು ಕೈಗೊಂಡಿದ್ದ ನಿರ್ಣಯಗಳಿಂದ ಈಗ ಫಲ ದೊರೆಯುವ ಯೋಗ ಇದೆ. ಹೊಸಬರ ಜತೆಗೆ ವ್ಯವಹಾರ ನಡೆಸುವಾಗ ಎಚ್ಚರ.

Today astrology in kannada today horoscope in kannada
ಸ್ನೇಹಿತರು- ಬಂಧುಗಳ ಒತ್ತಡಕ್ಕೆ ಮಣಿದು, ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಒಲ್ಲದ ಮನಸ್ಸಿನಿಂದ ಕೆಲವರ ಸ್ನೇಹ ಮಾಡುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ನಿರಂತರವಾದ ದುಡಿಮೆಯಿಂದ ದೇಹಾಯಾಸ ಕಾಡಬಹುದು. ಇತರರಿಗೆ ನೀವು ಒಪ್ಪಿಸಿದ ಕೆಲಸ ಪೂರ್ಣವಾಗುವುದಕ್ಕೆ ತಡ ಆಗಬಹುದು.

Today astrology in kannada today horoscope in kannada
ಸೂಕ್ಷ್ಮ ಸ್ವಭಾವದ ವ್ಯಕ್ತಿಗಳ ಪರಿಚಯ ಆಗಲಿದೆ. ದೀರ್ಘಾವಧಿಯಲ್ಲಿ ಅವರಿಂದ ಅನುಕೂಲ ಒದಗಿಬರುವ ಸಾಧ್ಯತೆ ಇದೆ. ಕಾಲಾಂತರದಿಂದ ನೀವು ಅನುಸರಿಸಿಕೊಂಡು ಬಂದಿದ್ದ ಪದ್ಧತಿಯನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಜತೆಗೆ ಬಿರುಸಿನ ಮಾತುಕತೆ ಇದೆ.

Today astrology in kannada today horoscope in kannada
ಕ್ಲಿಷ್ಟ ಸನ್ನಿವೇಶವನ್ನು ಕೂಡ ತುಂಬ ಜಾಣ್ಮೆಯಿಂದ ದಾಟಿಕೊಳ್ಳುತ್ತೀರಿ. ಯಾರದೋ ತುರ್ತಿನ ಕಾರಣಕ್ಕೆ ನೀವು ಹಣಕಾಸಿನ ನೆರವು ನೀಡುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಅಥವಾ ಬೇಕಾದ ಸ್ಥಳ ಅಥವಾ ಇಲಾಖೆಗೆ ವರ್ಗಾವಣೆ ಆಗುವ ಯೋಗ ಇದೆ. ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಏಳ್ಗೆ ಇದೆ.

Today astrology in kannada today horoscope in kannada
ಉದ್ಯೋಗ ಸ್ಥಳದಲ್ಲಿ ಭಾರೀ ಬದಲಾವಣೆ ಇದೆ. ಸ್ವತಂತ್ರ ಆಲೋಚನೆ ಹಾಗೂ ನಿರ್ಧಾರದ ಮೂಲಕ ಮೇಲಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಹೊಸ ಸಾಧ್ಯತೆಗಳು ಗೋಚರಿಸಲಿವೆ. ಅನುಭವಿ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗಿ, ಯಶಸ್ಸು ಸಾಧಿಸುವಿರಿ.

Today astrology in kannada today horoscope in kannada
ಮನೆಗೆ ವಿಲಾಸಿ ವಸ್ತುಗಳನ್ನು ತರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಬಾಧ್ಯತೆಗಳು ಹೆಚ್ಚಾಗಲಿವೆ. ಉದ್ಯೋಗ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಆಲಸ್ಯ ನಿಮ್ಮನ್ನು ಕಾಡಬಹುದು. ಸಣ್ಣ- ಪುಟ್ಟ ವಿಚಾರಗಳಿಗೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸೃಷ್ಟಿ ಆಗಬಹುದು. ಆದರೆ ದಿನದ ಕೊನೆಗೆ ನಿವಾರಣೆ ಆಗುತ್ತದೆ.

Today astrology in kannada today horoscope in kannada
ದೂರ ಪ್ರಯಾಣ ಮಾಡುವ ಯೋಗ ಇದೆ. ಉದ್ಯೋಗ- ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಅವಕಾಶ ದೊರೆಯಲಿದೆ. ಬೇರೆ ಯಾರಿಂದಲೂ ಸಹಾಯ ನಿರೀಕ್ಷೆ ಮಾಡದೆ ಮುಂದಕ್ಕೆ ಹೆಜ್ಜೆ ಇಡಿ. ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಕಷ್ಟ ಆಗಬಹುದು. ಆದರೆ ಸಾಧ್ಯವಾಗದ್ದೇನೂ ಅಲ್ಲ.

Today astrology in kannada today horoscope in kannada
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಆಗಬೇಕು. ನನಗೆ ಎಲ್ಲವೂ ಗೊತ್ತು ಎಂಬ ಧೋರಣೆ ಒಳ್ಳೆಯದಲ್ಲಿ ಇದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಸಂಬಂಧಿಗಳು, ಸ್ನೇಹಿತರ ಎಚ್ಚರಿಕೆಯ ಮಾತುಗಳನ್ನು ಕೇಳಿಸಿಕೊಳ್ಳಿ.

Today astrology in kannada today horoscope in kannada
ಬಹಳ ಗೊಂದಲದಿಂದ ಇರುವ ದಿನ ಇದು. ಭವಿಷ್ಯದ ಬಗ್ಗೆ ಆತಂಕ ಕಾಡಲಿದೆ. ನೀವಾಗಿಯೇ ಅಸಾಧ್ಯವಾದ ಮಾತನ್ನು ನೀಡಿ, ಅದನ್ನು ಪೂರೈಸಲಾಗದೆ ಮುಜುಗರಕ್ಕೆ ಸಿಲುಕಿಕೊಳ್ಳುತ್ತೀರಿ. ಸ್ವಂತ ವಿಚಾರದಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಿಗೆ ಒಳಗಾಗುತ್ತೀರಿ.

Today astrology in kannada today horoscope in kannada
ಹೊಸ ಮನೆ, ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಸೂಕ್ತ ವ್ಯಕ್ತಿಗಳ ಸಲಹೆ ಪಡೆಯುವುದು ಉತ್ತಮ. ಕೃಷಿಕರಿಗೆ ಬಿಡುವಿಲ್ಲದ ದಿನ ಆಗಿರುತ್ತದೆ. ದೈನಂದಿನ ಖರ್ಚುಗಳಿಗೆ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗುತ್ತದೆ. ವಿದೇಶಗಳಲ್ಲಿ ಉದ್ಯೋಗಾವಕಾಶಕ್ಕೆ ಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಇದೆ.

Today astrology in kannada today horoscope in kannada
ಮೊದಲಿನ ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಬಹುದು. ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಇರುವವರಿಗೆ ಜವಾಬ್ದಾರಿ ಜಾಸ್ತಿ ಆಗಲಿದೆ. ಪರಿಚಯಸ್ಥರ ಮೂಲಕ ಗುಟ್ಟೊಂದು ತಿಳಿದುಬರುತ್ತದೆ. ಇದನ್ನು ಉಪಯೋಗಿಸಿಕೊಂಡು, ಭವಿಷ್ಯದ ಅನುಕೂಲವನ್ನು ಮಾಡಿಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement