ಕರಾಚಿ (ಪಾಕಿಸ್ತಾನ): Covid-19 ವೈರಸ್ ಕುರಿತಾದ ವಿಚಾರದಲ್ಲಿ ತುಂಬಾ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಾಗುವುದರ ಮೂಲಕ ಸುದ್ದಿಗೆ ಬರುತ್ತಿದ್ದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮತ್ತೊಮ್ಮೆ ಹೃದಯಗೆಲ್ಲುವಂತ ಕೆಲಸವನ್ನು ಮಾಡಿ ಎಲ್ಲರ ಜನಮನವನ್ನು ಗೆದ್ದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಶಾಹಿದ್ ಆಫ್ರಿದಿ ಯವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದು ಇದೀಗ ಅವರ ಈ ಸ್ನೇಹಸಂಬಂಧ ಇನ್ನೊಂದು ರೀತಿಯಲ್ಲಿ ಪಾಕಿಸ್ತಾನದಲ್ಲಿರುವ ಹಿಂದುಗಳ ನೆರವಿಗೆ ತುಂಬಾನೇ ಸಹಾಯಕಾರಿಯಾಗಿದೆ. ಯುವರಾಜ್ ಸಿಂಗ್ ಟ್ರಸ್ಟ್ ಫೌಂಡೇಶನ್ ಹಣವನ್ನು ಬಳಸಿಕೊಂಡಿರುವ ಶಾಹಿದ್ ಆಫ್ರಿದಿ ಅವರು ಪಾಕಿಸ್ತಾನದ ಕರಾಚಿಯಲ್ಲಿರುವ ಲಕ್ಷ್ಮಿ ನಾರಾಯಣ್ ಹಿಂದೂ ದೇವಸ್ಥಾನದಲ್ಲಿ ಅನೇಕ ಹಿಂದೂ ಕುಟುಂಬಗಳಿಗೆ ಪಡಿತರವನ್ನು ವಿತರಿಸಿದ್ದಾರೆ .