ವಸ್ತ್ರಾಭರಣ ಖರೀದಿ ಯೋಗ ಇದೆ. ಆದರೆ ಖರ್ಚಿನ ವಿಚಾರವಾಗಿ ಸಂಗಾತಿ ಜತೆ ಭಿನ್ನಾಭಿಪ್ರಾಯ ಮೂಡಬಹುದು. ಧಾರ್ಮಿಕ ಚಿಂತನೆ, ದೇವತಾರಾಧನೆಗೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದೆ ಒತ್ತಡ ಸೃಷ್ಟಿ ಆಗಬಹುದು. ನಿವಾಗಿಯೇ ಕೆಲವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲಿದ್ದೀರಿ.
ತೀರ್ಥ ಕ್ಷೇತ್ರ ದರ್ಶನ ಯೋಗ ಇದೆ. ತಂದೆ- ತಾಯಿಯ ಜತೆಗೆ ಪ್ರಯಾಣ ಮಾಡಲಿದ್ದೀರಿ. ಅದೃಷ್ಟ ನಿಮ್ಮ ಪಾಲಿಗೆ ಇರುವುದರಿಂದ ಯಾವುದೇ ದೊಡ್ಡ ಸವಾಲುಗಳು ಎದುರಾಗುವುದಿಲ್ಲ. ಈ ಹಿಂದಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಸೂಕ್ತ ಮಾರ್ಗದರ್ಶನ ದೊರೆಯಲಿದೆ.
ನಿಮ್ಮ ಪ್ರಭಾವ ಹಾಗೂ ಸಂಪರ್ಕ ವಿಸ್ತರಿಸಿಕೊಳ್ಳುವ ಸಮಯ ಇದು. ಹೊಸ ಪರಿಚಯದ ಮೂಲಕ ಅವಕಾಶಗಳು ದೊರೆಯಲಿವೆ. ಆದರೆ ನಿಮ್ಮ ದೈಹಿಕ ಆರೋಗ್ಯ ಸಮಸ್ಯೆ ತಂದೊಡ್ಡಬಹುದು. ಮುಖ್ಯವಾಗಿ ವಾಹನ ಚಾಲನೆ ಮಾಡಬೇಡಿ. ಯಾರೊಂದಿಗೂ ವೃಥಾ ವಾಗ್ವಾದ ಮಾಡಿಕೊಳ್ಳಬೇಡಿ
ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಮುಖ್ಯವಾದ ದಾಖಲೆ- ಪತ್ರಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಇತರರ ಬಗ್ಗೆ ಹಗುರವಾದ ಮಾತುಗಳನ್ನಾಡ ಬೇಡಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ.
ವ್ಯಾಪಾರ- ವ್ಯವಹಾರದಲ್ಲಿ ಲಾಭವನ್ನು ಕಾಣುವಿರಿ. ದೂರದ ಸ್ಥಳಗಳಿಂದ ಶುಭ ವಾರ್ತೆ ಕೇಳುವಿರಿ. ಈ ಹಿಂದಿನ ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಸಾಲ ಬರಬೇಕಾಗಿದ್ದಲ್ಲಿ ಪ್ರಯತ್ನಿಸಿದರೆ ವಾಪಸ್ ಬರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇದಕ್ಕಾಗಿ ಹೆಚ್ಚಿನ ಶ್ರಮವನ್ನು ಹಾಕಬೇಕು.
ಉದ್ಯೋಗ ವಿಚಾರವಾಗಿ ಬದಲಾವಣೆ ಸೂಚನೆಗಳು ನಿಮಗೆ ದೊರೆಯಲಿವೆ. ನೀವು ನಂಬಿದ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಉದ್ಯೋಗಕ್ಕೆ ಪೂರಕವಾದ ಸನ್ನಿವೇಶ ಸೃಷ್ಟಿ ಆಗಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಅಂತಿರುವವರಿಗೆ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಬಹುದು.
ದಾನ- ಧರ್ಮಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ವರ್ಗಾವಣೆ ಅಥವಾ ತಾತ್ಕಾಲಿಕವಾಗಿ ಹೊಸ ಜವಾಬ್ದಾರಿ ನೀಡಿ, ಬೇರೆ ಇಲಾಖೆಗೆ ನಿಯೋಜನೆ ಮಾಡುವ ಸಾಧ್ಯತೆ ಇದೆ.
ವಾಹನ ಚಾಲನೆ, ದೂರ ಪ್ರಯಾಣ ಮಾಡದಿರಿ. ಮೇಲಧಿಕಾರಿಗಳ ಬಗ್ಗೆ ಇತರರ ಜತೆಗೆ ಹಗುರವಾಗಿ ಮಾತನಾಡಬೇಡಿ. ಸಾಧ್ಯವಾದಷ್ಟೂ ಮೌನವಾಗಿದ್ದು ಬಿಡಿ. ನವಗ್ರಹಗಳ ಪೈಕಿ ರಾಹು ಹಾಗೂ ರವಿ ಗ್ರಹದ ಆರಾಧನೆ ಮಾಡಿ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ.
ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸಂಗಾತಿ ಜತೆಗೆ ಪಾರದರ್ಶಕವಾಗಿ ನಡೆದುಕೊಳ್ಳಿ. ಗೃಹಾಲಂಕಾರ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡುವುದು ಸೂಕ್ತವಲ್ಲ. ದೂರದ ಊರುಗಳಿಂದ ಬಂಧುಗಳು, ಸ್ನೇಹಿತರು ಬರುವ ಸಾಧ್ಯತೆ ಇದೆ. ವಿದೇಶ ಪ್ರಯಾಣಕ್ಕೆ ಅವಕಾಶಗಳು ಬರಬಹುದು.
ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಮಾತನಾಡುವ ಮುನ್ನ ಅದರ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಅರಿವಿರಲಿ. ಇನ್ನು ಊಟ- ತಿಂಡಿ ವಿಚಾರದಲ್ಲಿ ಪಥ್ಯವನ್ನು ಪಾಲಿಸಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ದಾಖಲೆಪತ್ರಗಳ ಕಡೆಗೆ ಗಮನ ಇರಲಿ.
ಆಲಸ್ಯ ಈ ದಿನ ನಿಮ್ಮನ್ನು ಕಾಡಲಿದೆ. ಮೈ- ಕೈ ನೋವು, ನಿರಾಸಕ್ತಿಯಿಂದ ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡುವುದು ಕಷ್ಟವಾಗುತ್ತದೆ. ಇತರರ ಮಾತನ್ನು ಕೇಳಿ, ಆಸ್ತಿ ವಿಚಾರದಲ್ಲಿ ಯಾವುದೇ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.
ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷ ಇದೆ. ವಿವಾಹ ವಯಸ್ಕ ಮಕ್ಕಳಿಗೆ ಸೂಕ್ತ ಸಂಬಂಧಗಳು ಒದಗಿ ಬರುವ ಯೋಗ ಇದೆ. ಬೆನ್ನು ನೋವು, ಕಾಲು ನೋವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಬಹುದು. ತಾಯಿ ಕಡೆಯ ಸಂಬಂಧಿಕರಿಂದ ಶುಭ ವಾರ್ತೆಯೊಂದು ಬರುವ ಯೋಗ ಇದೆ.
Tags:
ದಿನ ಭವಿಷ್ಯ