ಇಂದಿನ ಭವಿಷ್ಯ ಜೂನ್ 12, 2020

Today astrology in kannada today horoscope in kannada
ಧಾರ್ಮಿಕ ಮನೋಭಾವ, ಚಿಂತನೆ ಹೆಚ್ಚಾಗುತ್ತದೆ. ಮಾನಸಿಕ ನೆಮ್ಮದಿ ಪಡೆಯುವ ಸಲುವಾಗಿ ಧ್ಯಾನ, ಯೋಗ ಕಲಿಕೆ ಶುರು ಮಾಡುವ ಸಾಧ್ಯತೆ ಇದೆ. ಇನ್ನು ಕಾಲು- ಬೆನ್ನು ನೋವಿನ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ. ಹಣದ ಅಗತ್ಯ ಇರುವ ಬಡವರಿಗೆ ನೆರವಿನ ಹಸ್ತ ಚಾಚಲಿದ್ದೀರಿ.
Today astrology in kannada today horoscope in kannada
ರೈತಾಪಿ ವರ್ಗದವರಿಗೆ ಸವಾಲಿನ ಸನ್ನಿವೇಶಗಳು ಎದುರಾಗಲಿವೆ. ಖರ್ಚಿನ ಪ್ರಮಾಣ ಹೆಚ್ಚಾಗಲಿದ್ದು, ಸಾಲ ಮಾಡಬೇಕಾಗುತ್ತದೆ. ನೀವು ಈ ಹಿಂದೆ ನಡೆದುಕೊಂಡಿದ್ದ ರೀತಿ ಹಾಗೂ ಆಡಿದ್ದ ಮಾತುಗಳನ್ನು ಮುಂದೆ ಮಾಡಿಕೊಂಡು, ಸಂಬಂಧಿಕರು ಹಾಗೂ ಕೆಲವು ಸ್ನೇಹಿತರು ನಿಮ್ಮನ್ನು ಮೂದಲಿಸಬಹುದು.

Today astrology in kannada today horoscope in kannada
ನೀವೇ ತೆಗೆದುಕೊಂಡ ನಿರ್ಧಾರ, ಕೊಟ್ಟ ಮಾತಿನಿಂದ ಹಿಂದೆ ಸರಿಯಬೇಕಾದ ಸನ್ನಿವೇಶ ಎದುರಾಗಲಿದೆ. ಇದನ್ನು ತಾತ್ಕಾಲಿಕ ಹಿನ್ನಡೆ ಎಂದಷ್ಟೇ ಅಂದುಕೊಳ್ಳಿ. ಮಾನಸಿಕ ಚಿಂತೆಯಿಂದ ದೂರವಾಗ ಬೇಕಿದ್ದಲ್ಲಿ ವಿಷ್ಣುವಿನ ಆರಾಧನೆ ಮಾಡಿ. ತುಳಸಿ ಮಾಲೆಯನ್ನು ಅರ್ಪಿಸಿ. ಆರೋಗ್ಯದ ಕಡೆಗೆ ಗಮನ ಇರಲಿ.

Today astrology in kannada today horoscope in kannada
ಯಾರಿಗೂ ತೋಚದ ಪರಿಹಾರಗಳು ನಿಮ್ಮ ಆಲೋಚನೆಗೆ ಬರುತ್ತವೆ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು, ಹೊಸ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಉದ್ಯಮ- ವ್ಯಾಪಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಕಡಿಮೆ ಆಗಲಿದೆ. ಪ್ರಯಾಣದಿಂದ ದೇಹಾಯಾಸ ಕಾಡಲಿದೆ.

Today astrology in kannada today horoscope in kannada
ಈ ದಿನ ನಿಮ್ಮ ಮಾನಸಿಕ ಕಿರಿಕಿರಿಗೆ ಇತರರಿಗೆ ತೊಂದರೆ ನೀಡುವ ಸಾಧ್ಯತೆ ಇದೆ. ಆದ್ದರಿಂದ ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೋರಿಸಬೇಡಿ. ಸಹೋದ್ಯೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ. ಕಠಿಣವಾದ ಮಾತುಗಳನ್ನಾಡಿದರೆ ವೈಷಮ್ಯ ಬೆಳೆಯುತ್ತದೆ, ಎಚ್ಚರ.

Today astrology in kannada today horoscope in kannada
ಕಮಿಷನ್ ವ್ಯವಹಾರ ನಡೆಸುವವರಿಗೆ ಉತ್ತಮವಾದ ದಿನ ಇದು. ನಿಮ್ಮ ವಾಕ್ಚಾತುರ್ಯದಿಂದ ದೊಡ್ಡ ವ್ಯವಹಾರಗಳನ್ನು ಸಾಧಿಸಲು ಸಫಲರಾಗುತ್ತೀರಿ. ಇಷ್ಟು ಸಮಯ ನಿಮಗೆ ಹಣಕಾಸಿನ ಕೊರತೆ ಕಾಡುತ್ತಿದ್ದಲ್ಲಿ ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಆದರೆ ಅತಿಯಾದ ಲಾಭಕ್ಕೆ ಆಸೆ ಪಡಬೇಡಿ.

Today astrology in kannada today horoscope in kannada
ಲೇವಾದೇವಿ ಮಾಡುವವರಿಗೆ ಒತ್ತಡ ಹೆಚ್ಚಾಗಲಿದೆ. ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಆದಾಯ ಮೂಲಕ್ಕೆ ಅಡೆತಡೆಗಳು ಎದುರಾಗುತ್ತವೆ. ಸಂಗಾತಿ, ಮಕ್ಕಳ ಜತೆಗಿನ ಮನಸ್ತಾಪದಿಂದ ಬೇಸರ ಉಂಟಾಗುತ್ತದೆ. ವೈಯಕ್ತಿಕ ಸಂಬಂಧದಲ್ಲಿ ಬಿರುಕು ಉದ್ಭವಿಸುವ ಸಾಧ್ಯತೆ ಇದೆ.

Today astrology in kannada today horoscope in kannada
ಮೇಲಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಹೊಗಳಲಿದ್ದಾರೆ. ಭವಿಷ್ಯದ ದೊಡ್ಡ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧವಾಗಿರುವಂತೆ ಸೂಚನೆ ದೊರೆಯಲಿದೆ. ವಿಲಾಸಿ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಸ್ವಂತ ನಿವೇಶನ ಇದ್ದಲ್ಲಿ ಮನೆ ಕಟ್ಟಿಸುವ ಆಲೋಚನೆ ಬರಲಿದೆ.

Today astrology in kannada today horoscope in kannada
ಮಕ್ಕಳ ಸಲುವಾಗಿ ಇತರರ ಜತೆಗೆ ವಿರೋಧ ಕಟ್ಟಿಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವಂಥ ಬೆಳವಣಿಗೆಗಳು ನಡೆಯಬಹುದು. ದೀರ್ಘ ಕಾಲದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣ ಆಗುವ ಸಾಧ್ಯತೆ ಇದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada
ಮನೆಗೆ ಅಗತ್ಯ ಇರುವ ವಸ್ತುಗಳು ಅಥವಾ ನೀವು ಇಷ್ಟಪಟ್ಟ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಕೂಡ ಬಳಸಬೇಕಾದ ಸಂದರ್ಭ ಎದುರಾಗಬಹುದು. ಕೆಲವು ನಿರ್ಧಾರಗಳ ಬಗ್ಗೆ ಗೊಂದಲ ಇರುತ್ತದೆ. ಆದರೆ ಇದು ತಾತ್ಕಾಲಿಕ ಮಾತ್ರ. ಯಾವುದಕ್ಕೂ ಬೇರೆಯವರ ಮೇಲೆ ಅವಲಂಬನೆ ಬೇಡ.

Today astrology in kannada today horoscope in kannada
ನಿಮ್ಮಲ್ಲಿ ಕೆಲವರಿಗೆ ನಿದ್ರೆಯ ಸಮಸ್ಯೆ ಕಾಡಬಹುದು. ಮುಖ್ಯವಾಗಿ ವಿಶ್ರಾಂತಿ ದೊರೆಯದಂತೆ ಮೇಲಿಂದ ಮೇಲೆ ಕೆಲಸಗಳು ಬರುತ್ತವೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟವಾಗಬಹುದು. ಮುಚ್ಚುವ ಆಲೋಚನೆ ಕೂಡ ಬರಬಹುದು.

Today astrology in kannada today horoscope in kannada
ಸೀದಾ ಸೀದಾ ಮಾತನಾಡಿ ಸಮಾನ ಸಂಖ್ಯೆಯಲ್ಲಿ ಮಿತ್ರರು, ಶತ್ರುಗಳನ್ನು ಪಡೆಯುವ ದಿನ ಇದು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು ಮೇಲಧಿಕಾರಿಗಳ ಜತೆಗೆ ಎಚ್ಚರಿಕೆಯಿಂದ ಮಾತನಾಡಬೇಕು. ನಿಮಗೆ ವಹಿಸಿದ ಕೆಲಸಗಳು ಯಾವುದೇ ತಪ್ಪಿಲ್ಲದೆ ಪೂರ್ಣವಾಗಿದೆಯೇ ಎಂಬುದನ್ನು ಒಂದಕ್ಕೆ ಎರಡು ಬಾರಿ ಪರಿಶೀಲಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement