ಇಂದಿನ ಭವಿಷ್ಯ ಜೂನ್ 13, 2020

Today astrology in kannada today horoscope in kannada
ಹಣಕಾಸಿನ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುವುದರಿಂದ ಕೆಲವರ ವಿರೋಧ ಎದುರಿಸಬೇಕಾಗುತ್ತದೆ. ಖರ್ಚನ್ನು ಉಳಿಸುವ ಪ್ರಯತ್ನದಲ್ಲಿ ಕೆಲವು ತ್ಯಾಗ ಮಾಡುತ್ತೀರಿ. ಆದರೆ ಇದನ್ನು ಪ್ರೀತಿಪಾತ್ರರು, ಆಪ್ತರು ಬೇರೆ ರೀತಿ ಅಂದುಕೊಂಡು, ಮನಸ್ತಾಪ ಆಗಬಹುದು.
Today astrology in kannada today horoscope in kannada
ಸ್ನೇಹಿತರು, ಸಂಬಂಧಿಗಳೊಂದಿಗೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ. ಸಂಗಾತಿ- ಮಕ್ಕಳಿಗಾಗಿ ಸಾಲ ಮಾಡಿಯಾದರೂ ಅವರು ಕೇಳಿದ್ದನ್ನು ಕೊಡಿಸಲು ಮನಸ್ಸು ಮಾಡುತ್ತೀರಿ. ಪ್ರೇಮಿಗಳಿಗೆ ಬಹಳ ಸಂತೋಷವಾದ ದಿನ ಇದು.

Today astrology in kannada today horoscope in kannada
ಸಂಶೋಧಕರು, ಇತಿಹಾಸ ತಜ್ಞರು, ವಿಜ್ಞಾನಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೆ ಅವಕಾಶ ದೊರೆಯಲಿದೆ. ಈ ಹಿಂದಿನ ನಿಮ್ಮ ಶ್ರಮವನ್ನು ಗುರುತಿಸಿ ಮಹತ್ತರವಾದ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ದೂರ ಪ್ರಯಾಣಗಳಿದ್ದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ.

Today astrology in kannada today horoscope in kannada
ಬ್ಯೂಟಿ ಪಾರ್ಲರ್, ಸಲೂನ್ ಗಳಿಗೆ ತೆರಳಬೇಕು ಎಂದಿರುವವರು ಚರ್ಮದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಅನಗತ್ಯವಾದ ಖರ್ಚು ಕಡಿಮೆ ಮಾಡಿಕೊಳ್ಳಿ. ಹೊಸ ಬಟ್ಟೆ, ಆಭರಣಗಳ ಖರೀದಿ ಮಾಡುವಂತಿದ್ದಲ್ಲಿ ಅನುಭವಿಗಳಿಂದ ಸಲಹೆ ಪಡೆದು ಮುಂದುವರಿಯಿರಿ.

Today astrology in kannada today horoscope in kannada
ಒಂದು ಬಗೆಯ ವೈರಾಗ್ಯ ನಿಮ್ಮನ್ನು ಕಾಡಲಿದೆ. ಎಷ್ಟು ಕೆಲಸ ಮಾಡಿದರೂ ಇಷ್ಟೇ ಎಂಬ ಬೇಸರದಿಂದಾಗಿ ಯಾವುದರಲ್ಲೂ ಮನಸಾರೆ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಪ್ರೀತಿಪಾತ್ರರು, ಆಪ್ತರ ಜತೆಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಮನಸ್ಸು ಹಾತೊರೆಯುತ್ತದೆ.

Today astrology in kannada today horoscope in kannada
ನಿಮ್ಮ ಆಲೋಚನಾ ವಿಧಾನದಿಂದ ಇತರರ ಗಮನವನ್ನು ಸೆಳೆಯುತ್ತೀರಿ. ನೀವು ತೆಗೆದುಕೊಂಡ ನಿರ್ಧಾರದಿಂದ ಕೆಲಸ ಮಾಡುವ ಸಂಸ್ಥೆಗೆ ಲಾಭ ಮಾಡಿಕೊಡಲಿದ್ದೀರಿ. ಇಷ್ಟು ಕಾಲ ನಿಮ್ಮನ್ನು ವಿರೋಧಿಸುತ್ತಿದ್ದವರಿಗೆ ಹಿನ್ನಡೆ ಆಗಲಿದೆ. ಆದರೆ ವೈಯಕ್ತಿಕ ಜೀವನದ ಕಡೆಗೆ ಹೆಚ್ಚಿನ ಗಮನ ನೀಡುವುದು ಕಷ್ಟವಾಗುತ್ತದೆ.

Today astrology in kannada today horoscope in kannada
ದೂರ ಪ್ರಯಾಣ ಮಾಡುವ ಯೋಗ ಇದೆ. ತೀರ್ಥ ಕ್ಷೇತ್ರ, ವಿಶ್ರಾಂತಿ ಧಾಮ ಹೀಗೆ ಯಾವುದೇ ಉದ್ದೇಶಕ್ಕಾದರೂ ಸರಿ ಪ್ರಯಾಣ ಮಾಡಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯ ಮಾಡಿಕೊಡಲಿದ್ದೀರಿ. ತಂದೆ- ತಾಯಿಗಳ ಆಶೀರ್ವಾದ ನಿಮ್ಮ ಮೇಲೆ ಇರಲಿದ್ದು, ಹಲವು ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ.

Today astrology in kannada today horoscope in kannada
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರಿಗೆ ಹೊಸ ಪರಿಚಯ, ಪ್ರಭಾವ ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯಲಿದೆ. ಆದರೆ ಇದೇ ವೇಳೆ ವಿವಾದ, ಚರ್ಚೆಯನ್ನು ಸಹ ಹುಟ್ಟು ಹಾಕಲಿದ್ದೀರಿ. ದೈಹಿಕ ಆಯಾಸ ನಿಮ್ಮನ್ನು ಕಾಡಲಿದ್ದು, ಪೌಷ್ಟಿಕ ಆಹಾರ ಸೇವನೆ ಕಡೆಗೆ ಗಮನ ನೀಡಿ.

Today astrology in kannada today horoscope in kannada
ಯಾರದೋ ಮೇಲಿನ ಸೇಡು, ವೈಷಮ್ಯವನ್ನು ಕೆಲವರು ನಿಮ್ಮ ಮೇಲೆ ತಿರುಗಿಸಬಹುದು. ಗಾಬರಿ-ಚಿಂತೆಗೆ ಒಳಗಾಗಬೇಡಿ. ಇದರಿಂದ ಹೊರಬರುವುದಕ್ಕೆ ಸಾಧ್ಯವಿದೆ. ಇನ್ನು ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿದ್ದಲ್ಲಿ ನಾನಾ ಅನುಮಾನಗಳು ಮೂಡಲಿವೆ. ಈ ಸಂದರ್ಭದಲ್ಲಿ ಸಂಯಮ, ತಾಳ್ಮೆ ಬಹಳ ಮುಖ್ಯ.

Today astrology in kannada today horoscope in kannada
ಯಾವುದೇ ಕೆಲಸದಲ್ಲಿ ಒಂದು ಬಗೆಯ ನಿರುತ್ಸಾಹ ಕಾಡಲಿದೆ. ಖರ್ಚಿಗೆ ಹಣ ಹೊಂದಿಸುವುದಕ್ಕೆ ಈಗಿರುವ ಆದಾಯ ಮೂಲ ಸಾಕಾಗದೆ ಚಿಂತೆಗೆ ಕಾರಣ ಆಗಲಿದೆ. ನಿಮ್ಮಿಂದ ಈ ಹಿಂದೆ ಅನುಕೂಲ ಪಡೆದವರು ಎಂದು ಈಗ ಅವರಿಂದ ಸಹಾಯ ಕೇಳಿದರೆ ಅವಮಾನ ಪಾಲಾಗುತ್ತೀರಿ, ಎಚ್ಚರ.

Today astrology in kannada today horoscope in kannada
ಮಕ್ಕಳ ಪ್ರಗತಿಯಿಂದ ಮನಸಿಗೆ ಸಂತೋಷವಾಗುತ್ತದೆ. ರುಚಿಕಟ್ಟಾದ ಊಟ ಸವಿಯುವ ಯೋಗ ಇದೆ. ಸ್ನೇಹಿತರು- ಸಂಬಂಧಿಗಳಿಂದ ಔತಣಕ್ಕೆ ಆಹ್ವಾನ ಬರಬಹುದು. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಲಿದ್ದೀರಿ. ಕಣ್ಣಿನ ಸಮಸ್ಯೆ ಇರುವವರು ಸ್ವಲ್ಪ ಜಾಗ್ರತೆಯಿಂದ ಇರಬೇಕು.

Today astrology in kannada today horoscope in kannada
ಅಧಿಕಾರ ಕೇಂದ್ರದಲ್ಲಿ ಇರುವವರಿಗೆ ಕೈ ಕೆಳಗೆ ಕೆಲಸ ಮಾಡುವವರು ಸಹಕಾರ ನೀಡದೆ ಸಮಸ್ಯೆಗಳಾಗಬಹುದು. ನಿಮಗೆ ಹೆಸರು ಸಿಗಬಹುದು ಎಂಬ ಕಾರಣಕ್ಕೆ ಕೆಲವು ತಪ್ಪಾಗಳಾಗುವಂತೆ ಮಾಡುವವರಿದ್ದಾರೆ, ಆ ಬಗ್ಗೆ ಎಚ್ಚರಿಕೆ ವಹಿಸಿ. ಆಂಜನೇಯ ಸ್ವಾಮಿ ಆರಾಧನೆ ಮಾಡುವುದರಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement