ಇಂದಿನ ಭವಿಷ್ಯ ಜೂನ್ 09, 2020

Today astrology in kannada today horoscope in kannada
ಉದ್ಯೋಗಸ್ಥರಿಗೆ ನಂಬಲಸಾಧ್ಯವಾದಂಥ ಬೆಳವಣಿಗೆಗಳು ನಡೆಯುತ್ತವೆ. ಒತ್ತಡದ ಸನ್ನಿವೇಶದಲ್ಲೂ ಅದ್ಭುತವಾದ ಕೆಲಸವನ್ನು ಮಾಡಲಿದ್ದೀರಿ. ತಾಳ್ಮೆಯಿಂದ ವರ್ತಿಸಿದರೆ ಅಂದುಕೊಂಡ ಕೆಲಸವನ್ನು ಇನ್ನಷ್ಟು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ. ಆದಾಯ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನ ಆರಂಭಿಸಲಿದ್ದೀರಿ.
Today astrology in kannada today horoscope in kannada
ಮೌನವಾಗಿದ್ದು ಕೆಲಸಗಳನ್ನು ಪೂರ್ತಿ ಮಾಡಿಕೊಳ್ಳುವಂಥ ದಿನ ಇದು. ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಾಸ್ತವ ನೆಲೆಗಟ್ಟಿನಲ್ಲಿ ನಿಂತು, ಆಲೋಚನೆ ಮಾಡಿ. ಭಾವನಾತ್ಮಕವಾಗಿ ಆಲೋಚಿಸಿದರೆ ಕೆಲಸಗಳು ವಿಳಂಬ ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ.

Today astrology in kannada today horoscope in kannada
ನೀವಾಗಿಯೇ ಆರಿಸಿಕೊಂಡ ದಾರಿಯಲ್ಲಿ ಸಾಗುವುದು ಸವಾಲು ಎಂದೆನಿಸಬಹುದು. ಬಂಧುಗಳು, ಸ್ನೇಹಿತರ ಅಗತ್ಯಗಳಿಗಾಗಿ ನಿಮ್ಮ ಉಳಿತಾಯದ ಹಣವನ್ನು ತೆಗೆಯಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಸಂಗಾತಿ- ಮಕ್ಕಳಿಗೆ ಮುಖ್ಯ ಎನಿಸಿದ ಸಂಗತಿಗಳು ನಿಮಗೆ ಮುಖ್ಯವಲ್ಲ ಎನಿಸಬಹುದು. ಇದರಿಂದ ತಿಕ್ಕಾಟಕ್ಕೆ ಕಾರಣ ಆಗಬಹುದು.

Today astrology in kannada today horoscope in kannada
ಎಲ್ಲವೂ ಅಂದುಕೊಂಡಂತೆ ಸಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಸಣ್ಣ- ಪುಟ್ಟ ಆತಂಕಗಳು ಎದುರಾಗುತ್ತದೆ. ಆದರೆ ನಿಮ್ಮ ಸಮಯಪ್ರಜ್ಞೆಯಿಂದ ಅವುಗಳನ್ನು ದಾಟಿಕೊಳ್ಳುತ್ತೀರಿ. ಕಲಾವಿದರಿಗೆ ಹೊಸ ಅವಕಾಶಗಳು ಸಿಗಲಿವೆ. ಆದರೆ ಗಟ್ಟಿಯಾದ ಪ್ರಯತ್ನ ಬೇಕು. ಅಗತ್ಯ ಬಿದ್ದಲ್ಲಿ ಇತರರ ನೆರವು ಪಡೆಯಿರಿ.

Today astrology in kannada today horoscope in kannada
ಹೆಚ್ಚುವರಿ ಆದಾಯ ಮೂಲದಿಂದ ಲಾಭದ ಪ್ರಮಾಣ ಹೆಚ್ಚಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಸ್ನೇಹಿತರು- ಸಂಬಂಧಿಕರು ಔತಣ ಕೂಟಕ್ಕೆ ಆಹ್ವಾನ ನೀಡಬಹುದು. ಕಚೇರಿ ಅಥವಾ ಮನೆ ಬದಲಾವಣೆಗೆ ಪ್ರಯತ್ನ ಮಾಡಲಿದ್ದೀರಿ.

Today astrology in kannada today horoscope in kannada
ವಾಹನ, ಮನೆ ಖರೀದಿಗೆ ಸಾಲ ಪಡೆಯಲು ಪ್ರಯತ್ನ ಮಾಡಲಿದ್ದೀರಿ. ವೃತ್ತಿನಿರತರಿಗೆ ಹೊಸ ಪರಿಚಯಗಳಿಂದ ಸಹಾಯ ಆಗಲಿದೆ. ನೇರವಂತಿಕೆಗಿಂತ ಆಲೋಚಿಸಿ, ಮಾತನಾಡುವುದು ಬಹಳ ಮುಖ್ಯ. ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ. ಹಿರಿಯರ ಸಲಹೆಯನ್ನು ಪಾಲಿಸಿ.

Today astrology in kannada today horoscope in kannada
ಇತರರು ಮಾನಸಿಕವಾಗಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಸಂಗತಿಗಳಿಗೂ ಪ್ರತಿಕ್ರಿಯಿಸಬೇಡಿ. ಊಟ- ತಿಂಡಿಯೇ ಆಗಲಿ, ಮಾತೇ ಆಗಲಿ ನಾಲಗೆ ಮೇಲೆ ಹಿಡಿತ ಇರಲಿ. ಅವಿವಾಹಿತರಿಗೆ ಸೂಕ್ತ ವಿವಾಹ ಸಂಬಂಧಗಳು ದೊರೆಯುವ ಸಾಧ್ಯತೆ ಇದೆ.

Today astrology in kannada today horoscope in kannada
ಪ್ರೇಮಿಗಳಿಗೆ ಸುಮಧುರ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ಮೇಲಧಿಕಾರಿಯ ಜತೆಗೆ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಸಹಕಾರದಿಂದ ಹಲವು ಬಗೆಯಲ್ಲಿ ಅನುಕೂಲ ಒದಗಿ ಬರಲಿದೆ. ಸ್ವಾದಿಷ್ಟವಾದ ಆಹಾರ ಸವಿಯುವ ಯೋಗ ಇದೆ.

Today astrology in kannada today horoscope in kannada
ಸ್ವಂತ ಮನೆಯಿರುವವರು ದುರಸ್ತಿ ಹಾಗೂ ಗೃಹಾಲಂಕಾರಕ್ಕೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ವಾಹನ ಚಾಲನೆ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ನಾನು ಮಾಡಿದ್ದೆಲ್ಲ ಸರಿ ಎಂಬ ಧೋರಣೆ ಒಳ್ಳೆಯದಲ್ಲ. ಹಳೇ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರ ಜತೆಗೂ ವೈಮನಸ್ಯ ಮಾಡಿಕೊಳ್ಳಬೇಡಿ.

Today astrology in kannada today horoscope in kannada
ಸಂಗಾತಿಯ ಅಗತ್ಯ ಹಾಗೂ ಆಸೆಗಳನ್ನು ಪೂರೈಸುವ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಇರುವ ಆತಂಕ ದೂರ ಆಗುವ ಸಾಧ್ಯತೆ ಇದೆ. ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಅಗತ್ಯ ಇದ್ದಲ್ಲಿ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.

Today astrology in kannada today horoscope in kannada
ಯಾರದೋ ಮೇಲಿನ ಸಿಟ್ಟಿಗೆ ಇನ್ಯಾರ ಮೇಲೋ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ. ಸಾಧ್ಯವಾದಷ್ಟೂ ಈ ದಿನ ನೀವು- ನಿಮ್ಮ ಕೆಲಸ ಎಂಬಂತೆ ಇದ್ದುಬಿಡುವುದು ಉತ್ತಮ. ಬೇಡದ ವಾದ- ವಿವಾದಗಳನ್ನು ಮೈ ಮೇಲೆ ಎಳೆದುಕೊಂಡರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

Today astrology in kannada today horoscope in kannada
ರಾಜಕಾರಣ, ಸಾಮಾಜಿಕ ಜೀವನದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಹೋಟೆಲ್, ರೆಸ್ಟೋರೆಂಟ್ ಗಳಿಗೆ ಕುಟುಂಬದ ಸಮೇತ ತೆರಳಲಿದ್ದೀರಿ. ವೃತ್ತಿಪರ ಕಾರಣಗಳಿಗಾಗಿ ದೂರ ಪ್ರಯಾಣ ಮಾಡುವ ಯೋಗ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement