ಗುರಿ ಸಾಧನೆಯ ಹಾದಿಯಲ್ಲಿ ಮತೊಂದು ಬಲವಾದ ಹೆಜ್ಜೆಯನ್ನು ಇಡಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ದೂರದ ಊರಿಂದ ಬಂಧುಗಳು, ಸ್ನೇಹಿತರು ಬರುವ ಸಾಧ್ಯತೆ ಇದೆ. ಅಥವಾ ಹಣಕಾಸಿನ ನೆರವು ಕೇಳಿಕೊಂಡು ಬರಬಹುದು. ನಿಮ್ಮಿಂದ ಸಾಧ್ಯವಾದರೆ ಸಹಾಯ ಮಾಡಿ.
ಸ್ನೇಹಿತರಿಗೆ ಸಹಾಯ ಮಾಡುವ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ದೂರದೃಷ್ಟಿಯಿಂದ ನೀವು ಮಾಡಿದ ಕೆಲಸಗಳಿಂದ ಈಗ ಪ್ರತಿಫಲ ದೊರೆಯಲಿದೆ. ಸಂಗಾತಿ ಜತೆಗೆ ಸಣ್ಣ- ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು. ಆದರೆ ತುಂಬ ಚಿಂತೆ ಮಾಡುವ ಅಗತ್ಯ ಇಲ್ಲ.
ಉದ್ಯೋಗ ವಿಚಾರದಲ್ಲಿ ಗೊಂದಲ ಮುಂದುವರಿಯಲಿದೆ. ಕೈ ಬದಲಿಗಾಗಿ ಹಣ ಸಾಲ ಪಡೆದುಕೊಂಡಿದ್ದರೆ ಒತ್ತಡ ಹೆಚ್ಚಾಗಲಿದೆ. ನಿರೀಕ್ಷೆ ಮಾಡದ ರೀತಿಯಲ್ಲಿ ಹಣಕಾಸಿನ ಹರಿವು ಒದಗಿ ಬರಲಿದ್ದು, ಭವಿಷ್ಯಕ್ಕೆ ಮಕ್ಕಳ ಸಲುವಾಗಿ ಉಳಿತಾಯ ಮಾಡಲಿದ್ದೀರಿ. ಒಪ್ಪಿಕೊಂಡ ಕೆಲಸಗಳನ್ನು ನಿಗದಿತ ಮಿತಿಯೊಳಗೆ ಮಾಡಿ ಮುಗಿಸುವುದು ಸವಾಲಾಗಿ ಪರಿಣಮಿಸಲಿದೆ.
ಇತರರಿಂದ ಮಾಡುವುದಕ್ಕೆ ಕಷ್ಟವಾದ ಕೆಲಸವನ್ನು ನೀವು ಸುಲಭವಾಗಿ ಮಾಡಲಿದ್ದೀರಿ. ಸಾಮಾಜಿಕವಾಗಿ, ರಾಜಕೀಯವಾಗಿ ಸಕ್ರಿಯವಾಗಿರುವವರಿಗೆ ಬಿಡುವಿಲ್ಲದಷ್ಟೇ ಕೆಲಸಗಳು ಇರುತ್ತವೆ. ಕಫ, ಶೀತದಂಥ ಆರೋಗ್ಯ ಸಮಸ್ಯೆಗಳು ಕಾಡಬಹುದು. ಔಷಧ ಸೇವನೆಯಲ್ಲಿ ಎಚ್ಚರಿಕೆಯಾಗಿರಬೇಕು.
ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಕೆಲವು ಜವಾಬ್ದಾರಿ ಹಾಗೂ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಬೆನ್ನು ನೋವು, ಕಾಲು ನೋವಿನಂತೆ ಸಮಸ್ಯೆಗಳು ಕಾಡಬಹುದು. ಸೂಕ್ತ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಈ ಸಮಸ್ಯೆ ದೀರ್ಘ ಕಾಲ ಇರುವ ಸಾಧ್ಯತೆ ಇದೆ.
ವಾಹನ ಸಾಲ ಪಡೆಯಬೇಕು ಎಂದು ಪ್ರಯತ್ನಿಸುವವರಿಗೆ ಸಹಾಯ ದೊರೆಯಲಿದೆ. ಈ ಹಿಂದೆ ನೀವು ಪ್ರಯತ್ನಪಟ್ಟು, ವಿಫಲ ಆಗಿರುವ ಯೋಜನೆಗಳು ಸಹ ಸುಲಭವಾಗಿ ಮುಗಿಸಲು ದಾರಿಗಳು ಗೋಚರಿಸುತ್ತವೆ. ಸಂಗಾತಿ- ಮಕ್ಕಳ ಸಂತೋಷಕ್ಕಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ.
ಮಾಮೂಲಿ ದಿನಕ್ಕಿಂತ ಹೆಚ್ಚು ಉತ್ಸಾಹದಿಂದ ಇರುತ್ತೀರಿ. ಕೆಲಸ- ಕಾರ್ಯದಿಂದ ವಿಶ್ರಾಂತಿ ಪಡೆಯಲು ತೀರ್ಮಾನ ಮಾಡುತ್ತೀರಿ. ಸ್ನೇಹಿತರು, ಸಂಬಂಧಿಗಳಿಂದ ಔತಣ ಕೂಟಕ್ಕೆ ಆಹ್ವಾನ ಬರಬಹುದು. ವಿವಾಹಕ್ಕೆ ಸೂಕ್ತ ಸಂಬಂಧ ಹುಡುಕುತ್ತಿದ್ದಲ್ಲಿ ಪ್ರಯತ್ನ ಯಶಸ್ಸು ಕಾಣಲಿದೆ.
ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ತಂದೆ- ತಾಯಿಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಮನೆಯಲ್ಲಿ ಸಣ್ಣ- ಪುಟ್ಟ ನವೀಕರಣ ಮಾಡುವ ಬಗ್ಗೆಯಾದರೂ ಚರ್ಚೆ ನಡೆಸಲಿದ್ದೀರಿ. ಹಣದ ವ್ಯವಹಾರದಲ್ಲಿ ಪಾರದರ್ಶಕವಾಗಿ ವರ್ತಿಸಿ. ಇಲ್ಲದಿದ್ದಲ್ಲಿ ವರ್ಚಸ್ಸಿಗೆ ಧಕ್ಕೆ ಆಗಬಹುದು.
ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ನಿಗಾ ಇರಿಸಬೇಕು. ಸೋದರ- ಸೋದರಿಯರ ನೆರವಿನಿಂದ ಮನಸಿಗೆ ಸಮಾಧಾನ ಸಿಗುತ್ತದೆ. ಈ ವರೆಗೆ ಚಿಂತೆಯಾಗಿ ಕಾಡುತ್ತಿದ್ದ ಸಂಗತಿಗಳು ದೂರವಾಗುವ ಮಾರ್ಗಗಳು ಗೋಚರವಾಗುತ್ತವೆ. ಪ್ರೇಮಿಗಳಿಗೆ ಸುಮಧುರ ಕ್ಷಣಗಳನ್ನು ಕಳೆಯುವ ಯೋಗ ಇದೆ.
ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಆಗಲಿದೆ. ಮಕ್ಕಳು, ಪತ್ನಿಯ ಸಲುವಾಗಿ ಸಾಲ ಮಾಡಿಯಾದರೂ ಖರ್ಚು ಮಾಡಲಿದ್ದೀರಿ. ದೂರ ಪ್ರಯಾಣ ಮಾಡುವ ಯೋಗ ಇದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಸ್ನೇಹಿತರ ಮೂಲಕ ಅವಕಾಶಗಳ ಬಗ್ಗೆ ಮಾಹಿತಿ ಸಿಗಲಿದೆ.
ಈ ಹಿಂದೆಂದೋ ಆಗಿರುವ ವಾಗ್ವಾದ, ವೈಮನಸ್ಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರ ಜತೆಗೂ ಜಗಳ ಆಡಬೇಡಿ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿಯೇ ಹಾಳು. ಮಕ್ಕಳ ಏಳ್ಗೆಗಾಗಿ ಹಣ ಹೂಡಿಕೆ ಮಾಡುವ ಸಾಧ್ಯತೆ ಇದೆ. ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಅದು ಸಫಲವಾಗುವ ಸಾಧ್ಯತೆ ಇದೆ.
ರಾಜಕೀಯವಾಗಿ ಪ್ರಭಾವ ಹೆಚ್ಚಾಗಲಿದೆ. ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ಹೊಸ ವಸ್ತ್ರಾಭರಣ ಖರೀದಿ ಮಾಡುವ ಯೋಗ ಇದೆ. ವಿದೇಶದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬೆಳವಣಿಗೆಗೆ ಅವಕಾಶಗಳು ದೊರೆಯಲಿವೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ.
Tags:
ದಿನ ಭವಿಷ್ಯ