ಧನಾಗಮದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗ ಸ್ಥಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದೀರಿ. ಮೇಲಧಿಕಾರಿಗಳು ನಿಮ್ಮ ಕಾರ್ಯ ವೈಖರಿಗೆ ಮೆಚ್ಚುಗೆಯನ್ನು ಸೂಚಿಸಲಿದ್ದಾರೆ. ಸ್ವಂತ ನಿರ್ಧಾರದಿಂದ ಹೆಚ್ಚು ಲಾಭ ಆಗಲಿದೆ. ಉದ್ಯಮಿಗಳಿಗೆ ಲಾಭದ ಪ್ರಮಾಣ ಸಾಧಾರಣವಾಗಿ ಇರಲಿದೆ.
ಯಾರು- ಏನೆಂದುಕೊಳ್ಳುತ್ತಾರೋ ಎಂಬ ಚಿಂತೆ ನಿಮ್ಮನ್ನು ಬಹುವಾಗಿ ಕಾಡುತ್ತದೆ. ಬಹಳ ಕಾಲದಿಂದ ಬಾಕಿ ಉಳಿದುಕೊಂಡಿದ್ದ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲು ಹೊಸ ದಾರಿ, ಪರಿಚಯ ಕಂಡುಕೊಳ್ಳುತ್ತೀರಿ. ಖರ್ಚು ಹೆಚ್ಚೇ ಆದರೂ ಕಾರ್ಯ ಸಾಧನೆ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಸಂಗೀತ, ನೃತ್ಯ ಅಥವಾ ವಾದ್ಯಗಳನ್ನು ಕಲಿಯುತ್ತಿರುವವರು ಹೊಸ ಗುರುಗಳನ್ನು ಹುಡುಕುವ ಪ್ರಯತ್ನ ಮಾಡಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಆದರೆ ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಏಕಾಗ್ರತೆ ಕಳೆದುಕೊಳ್ಳಬೇಡಿ.
ಆರ್ಥಿಕ ಬಿಕ್ಕಟ್ಟು ಉದ್ಭವಿಸಲಿದೆ. ನೀವು ಊಹಿಸದ ರೀತಿಯಲ್ಲಿ ಆಪ್ತರೇ ನಿಮ್ಮ ಬಗ್ಗೆ ಅಸಮಾಧಾನವನ್ನು ಹೊರ ಹಾಕಲಿದ್ದಾರೆ. ನೀವು ಇರಿಸಿಕೊಂಡಿರುವ ಗುರಿ ತಲುಪಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಹೊಸದಾಗಿ ಪರಿಚಯ ಆದವರ ಜತೆಗೆ ಅತಿಯಾದ ಸಲುಗೆ ಒಳ್ಳೆಯದಲ್ಲ.
ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆದರೆ ಆಲಸ್ಯ ನಿಮ್ಮನ್ನು ಕಾಡಲಿದೆ. ಆರ್ಥಿಕ ಸ್ಥಿತಿಯ ಬಗ್ಗೆ ಚಿಂತೆ ಮಾಡುವಂತಾಗುತ್ತದೆ. ಪರಿಚಯಸ್ಥರ ಮೂಲಕ ಅವಕಾಶಗಳು ನಿಮಗೆ ದೊರೆಯಲಿವೆ. ಆದರೆ ನೀವು ಉತ್ಸಾಹ ತೋರದ ಕಾರಣಕ್ಕೆ ಮತ್ತೊಬ್ಬರ ಪಾಲಾಗುವ ಸಾಧ್ಯತೆ ಇದೆ.
ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗಾಗಿಯೇ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಮನೆ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ಅದರ ಮುಂದಾಳತ್ವವನ್ನು ನೀವೇ ವಹಿಸುವಂತೆ ಕೇಳಿಕೊಳ್ಳಲಾಗುತ್ತದೆ. ಈ ಹಿಂದೆ ಮಾಡಿಕೊಂಡ ಒಪ್ಪಂದವೊಂದು ಈಗ ಸಮಸ್ಯೆಯಾಗಿ ಪರಿಣಮಿಸಬಹುದು.
ಆಪ್ತರ ಬಗ್ಗೆ ಅನುಮಾನ ಪಡುವುದರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನಿಶ್ಚಿತತೆ ಕಾಡಲಿದೆ. ಮನೆಯಲ್ಲಿ ಹಣಕಾಸು ವಿಚಾರಕ್ಕೆ ಮನಸ್ತಾಪ ಉದ್ಭವಿಸಲಿದೆ. ವಿಷ್ಣುವನ್ನು ಸ್ಮರಣೆ ಮಾಡಿದಲ್ಲಿ ಮಾನಸಿಕ ಸ್ಥೈರ್ಯ ದೊರೆಯಲಿದೆ.
ತಂದೆ- ತಾಯಿ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಅವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮನೆಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸ್ಥಳ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಬಹುದು.
ಸಾರ್ವಜನಿಕ ಜೀವನದಲ್ಲಿ ಇರುವವರು ನಡವಳಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಾತುಕತೆಯಲ್ಲಿ ಹಿಡಿತದಿಂದ ನಡೆದುಕೊಳ್ಳಬೇಕು. ಇನ್ನು ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತದೆ. ದೀರ್ಘ ಕಾಲದ ಯೋಜನೆಗಳು ಇನ್ನಷ್ಟು ಮುಂದಕ್ಕೆ ಹೋಗುತ್ತದೆ.
ಯಶಸ್ಸಿಗಾಗಿ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಮೊದಲಿನ ಉತ್ಸಾಹದಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಇತರರಿಗೆ ಜಾಮೀನು ನಿಲ್ಲದಿರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಆರೋಗ್ಯದ ಬಗ್ಗೆ ಗಮನ ಇರಲಿ.
ಬಹಳ ಕಾಲದಿಂದ ಕಾಯುತ್ತಿದ್ದ ಸಮಯವನ್ನು ಎದುರುಗೊಳ್ಳಲಿದ್ದೀರಿ. ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ನಿಮಗೆ ಏನು ಬೇಕು ಎಂಬುದನ್ನು ತಿಳಿಸದ ಹೊರತು ಅದು ಇತರರಿಗೆ ತಿಳಿಯುವುದಾದರೂ ಹೇಗೆ? ಚರ್ಮ ರೋಗದ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರಬೇಕು.
ಹೊಸ ವಸ್ತ್ರಾಭರಣ ಖರೀದಿಸುವ ಸಾಧ್ಯತೆ ಇದೆ. ಅದಕ್ಕಾಗಿ ಸಾಲ ಮಾಡುವ ಮನಸ್ಸು ಮಾಡುತ್ತೀರಿ. ಸೋದರ ಸಂಬಂಧಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಸ್ನೇಹಿತರ ಮೂಲಕ ಅವಕಾಶ ದೊರೆಯಬಹುದು. ಆದರೆ ಅದನ್ನು ಬಳಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
Tags:
ದಿನ ಭವಿಷ್ಯ