ಇಂದಿನ ಭವಿಷ್ಯ ಜೂನ್ 05, 2020

Today astrology in kannada today horoscope in kannada
ನಿಮಗೆ ಸಿಗಬೇಕಾದ ಸಂಬಳ, ಗೌರವಧನ ಅಥವಾ ಬೇರೆ ಯಾವುದೇ ಥರದ ಶ್ರಮದ ಬಾಕಿಯನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಮನೆಯವರ ಜತೆ ಸಂತೋಷವಾಗಿ ಇರುವುದಕ್ಕೆ ಪ್ರಯತ್ನಿಸಿ. ಬ್ಯಾಂಕ್ ವ್ಯವಹಾರಗಳನ್ನು ಮಾಡುವಂತಿದ್ದರೆ ಅಧಿಕಾರಿಗಳೊಂದಿಗೆ ಸ್ಪಷ್ಟವಾಗಿ ಮಾತನಾಡಿ.
Today astrology in kannada today horoscope in kannada
ನಿಮಗಿಂತ ಕೆಳಗಿನ ಹಂತದಲ್ಲಿ ಕೆಲಸ ಮಾಡುವವರೊಂದಿಗೆ ಸ್ನೇಹದಿಂದ ವರ್ತಿಸಿ. ಯಾರದೋ ಮೇಲಿನ ಸಿಟ್ಟನ್ನು ಇನ್ಯಾರ ಮೇಲೋ ತೋರಿಸುವುದು ಸರಿಯಲ್ಲ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಅದರಲ್ಲಿ ಧೈರ್ಯವಾಗಿ ಮುನ್ನಡೆಯಿರಿ.

Today astrology in kannada today horoscope in kannada
ಸ್ತ್ರೀಯರಿಂದ ಲಾಭ, ಅನುಕೂಲ ದೊರೆಯಲಿದೆ. ನಿಮ್ಮ ಮಾತಿನ ಕಾರಣಕ್ಕೆ ಆಕರ್ಷಣೆಯ ಕೇಂದ್ರಬಿಂದು ಆಗಲಿದ್ದೀರಿ. ಕೃಷಿಕರಿಗೆ ಹೆಚ್ಚುವರಿ ಆದಾಯಕ್ಕೆ ದಾರಿ ದೊರಕಲಿದೆ. ಮನೆ ಅಥವಾ ಕಚೇರಿ ಬದಲಾವಣೆಗೆ ನಿರ್ಧಾರ ಮಾಡಲಿದ್ದೀರಿ. ಅದಕ್ಕೆ ಅಗತ್ಯ ಇರುವ ಪ್ರಯತ್ನಗಳನ್ನು ಆರಂಭಿಸಲಿದ್ದೀರಿ.

Today astrology in kannada today horoscope in kannada
ದೂರ ಪ್ರಯಾಣ ಮಾಡುವ ಯೋಗ ಇದೆ. ಹಣಕಾಸು ಉಳಿತಾಯಕ್ಕೆ ಯೋಜನೆ ರೂಪಿಸುತ್ತೀರಿ. ಮಕ್ಕಳ ಶಿಕ್ಷಣದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ಒದಗಿ ಬರುವಂಥ ಅವಕಾಶ ಇದೆ.

Today astrology in kannada today horoscope in kannada
ಮನೆಯ ದುರಸ್ತಿ, ನವೀಕರಣಕ್ಕೆ ಹಣ ಖರ್ಚು ಮಾಡಲಿದ್ದೀರಿ. ಈ ಬಗ್ಗೆ ಸಂಗಾತಿ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಸಂಗೀತಗಾರರು, ಕಲಾವಿದರಿಗೆ ಅವಕಾಶಗಳು ದೊರೆಯಲಿವೆ. ಪ್ರತಿಸ್ಪರ್ಧಿಗಳನ್ನು ಮಣಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲಿದ್ದಾರೆ. ಅದರಲ್ಲಿ ಯಶಸ್ಸು ಕಾಣುತ್ತೀರಿ.

Today astrology in kannada today horoscope in kannada
ವಾಹನ, ಭೂಮಿ ಖರೀದಿಗೆ ಆಲೋಚನೆ ಮಾಡಲಿದ್ದೀರಿ. ಆದರೆ ಈ ಬಗ್ಗೆ ನಿಮ್ಮ ಆಲೋಚನೆಗೆ ಭಿನ್ನವಾದ ಅಭಿಪ್ರಾಯಗಳು ಮನೆಯಲ್ಲಿ ಕೇಳಿಬರಬಹುದು. ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೊಂದಲದ ವಾತಾವರಣ ಸೃಷ್ಟಿಯಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಪ್ರಗತಿ ಇದೆ.

Today astrology in kannada today horoscope in kannada
ಗ್ಯಾಜೆಟ್ ಗಳು, ಮೊಬೈಲ್ ಫೋನ್, ಲ್ಯಾಪ್ ಟಾಪ್ ಖರೀದಿ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಸಾಲ ಮಾಡುವಂಥ ಯೋಗ ಇದೆ. ಆದರೆ ಖರ್ಚು ಮಾಡುವ ವೇಳೆ ನಿಮ್ಮ ಸಾಮರ್ಥ್ಯವನ್ನು ಒಮ್ಮೆ ಆಲೋಚಿಸಿದ ನಂತರವೇ ಮುಂದಕ್ಕೆ ಹೆಜ್ಜೆ ಇಡಿ.

Today astrology in kannada today horoscope in kannada
ರುಚಿಕಟ್ಟಾದ ಊಟ, ತಿಂಡಿ ಸವಿಯುವ ಯೋಗ ಇದೆ. ತಂದೆಯ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ಸಣ್ಣ- ಪುಟ್ಟ ವಿಚಾರಕ್ಕೆ ಸಂತೋಷದ ವಾತಾವರಣವನ್ನು ಹಾಳು ಮಾಡಿಕೊಳ್ಳಬೇಡಿ. ಹಳೆಯ ಗೆಳೆಯರು ಒಟ್ಟಾಗಿ ಸಮಯ ಕಳೆಯುವ ಯೋಗ ಇದೆ. ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ.

Today astrology in kannada today horoscope in kannada
ಹೊಸ ಬಟ್ಟೆ, ಆಭರಣಗಳನ್ನು ಖರೀದಿಸುವ ಯೋಗ ಇದೆ. ಬಹಳ ಸಮಯದಿಂದ ಹುಡುಕುತ್ತಿದ್ದ ವಸ್ತು, ದಾಖಲೆ- ಪತ್ರಗಳು ದೊರೆಯುವ ಯೋಗ ಇದೆ. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಹೊಸದಾಗಿ ಉದ್ಯೋಗ ಆರಂಭಿಸಬೇಕು ಎಂದಿರುವವರು ಹೆಚ್ಚಿನ ಶ್ರಮ ಹಾಕಬೇಕು.

Today astrology in kannada today horoscope in kannada
ಹಲವು ವಿಚಾರದಲ್ಲಿ ಸಣ್ಣದೊಂದು ಗೊಂದಲ ಇದ್ದೇ ಇರುತ್ತದೆ. ನೀವು ಏಕಾಂಗಿ ಆಗಿಹೋದರೇನೋ ಎಂಬ ಬೇಸರ ನಿಮ್ಮನ್ನು ಕಾಡುತ್ತದೆ. ಈ ಹಿಂದೆ ನೀವೇ ಆಡಿದ ಮಾತುಗಳಿಗೆ ಈಗ ಪಶ್ಚಾತ್ತಾಪ ಪಡುವಂತೆ ಆಗುತ್ತದೆ. ದೂರದ ಊರಿಂದ ಸಹಾಯ ಕೇಳಿಕೊಂಡು ಬಂಧುಗಳು, ಸ್ನೇಹಿತರು ಬರಬಹುದು ಅಥವಾ ಯಾರ ಮೂಲಕವಾದರೂ ಕೇಳಿಸಬಹುದು.

Today astrology in kannada today horoscope in kannada
ಸ್ವಾತಂತ್ರ್ಯ ಕಳೆದುಕೊಂಡಂಥ ಭಾವವೊಂದು ನಿಮ್ಮನ್ನು ಕಾಡಲಿದೆ. ನಿಮ್ಮ ಮಾತು- ನಡವಳಿಕೆಯಲ್ಲಿ ಗೊತ್ತಿಲ್ಲದೆ ಒಂದು ಬಗೆಯ ಅಹಂಕಾರ ಸೇರಿಹೋಗುವ ಸಾಧ್ಯತೆಗಳಿವೆ. ಭವಿಷ್ಯದ ಅತಿಮುಖ್ಯ ಘಟನೆಯೊಂದರ ಬಗ್ಗೆ ಸುಳಿವು ದೊರೆಯಲಿದೆ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

Today astrology in kannada today horoscope in kannada
ನೇರವಂತಿಕೆ ನಿಮ್ಮನ್ನು ಕಾಪಾಡಲಿದೆ. ಉದ್ಯೋಗ- ವ್ಯಾಪಾರಗಳಲ್ಲಿ ಪ್ರಗತಿ ಇದೆ. ಕೆಮ್ಮು- ಕಫದಂಥ ಆರೋಗ್ಯ ಬಾಧೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ನೀವಾಗಿಯೇ ಕೇಳದೆ ಕೆಲವರು ಸಹಾಯ ಮಾಡುವಂಥ ಯೋಗ ಈ ದಿನ ನಿಮಗಿದೆ. ಪ್ರೀತಿಪಾತ್ರರ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯಲಿದ್ದೀರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement