ಉದ್ವಿಘ್ನಗೊಂಡ ಹಾಂಕಾಂಗ್​, ಪ್ರತಿಭಟನಾಕಾರರಿಂದ ಚೀನಾಗೆ ಸಂಬಂಧಿಸಿದ ವಸ್ತುಗಳ ಧ್ವಂಸ

ಉದ್ವಿಘ್ನಗೊಂಡ ಹಾಂಕಾಂಗ್​, ಪ್ರತಿಭಟನಾಕಾರರಿಂದ ಚೀನಾಗೆ ಸಂಬಂಧಿಸಿದ ವಸ್ತುಗಳ ಧ್ವಂಸ

ಚೀನಾ ತನ್ನ ಭದ್ರತಾ ಕಾಯಿದೆಯನ್ನು ಜಾರಿಗೆ ತರಲು ನಡೆಸುತ್ತಿರುವ ಪ್ರಯತ್ನವನ್ನು ವಿರೋಧಿಸಿ ಹಾಂಕಾಂಗ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು. ಪ್ರತಿಭಟನೆ ಇನ್ನೂ ತೀವ್ರ ಸ್ವರೂಪವನ್ನು ಪಡೆದಿದ್ದು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್​ಗಳನ್ನ ಕಿತ್ತು ಎಸೆದಿದ್ದಾರೆ.



ಪ್ರತಿಭಟನಾಕಾರರು ಅಂಗಡಿಗಳಿಗೆ ನುಗ್ಗಿ ಚೀನಾ ದೇಶದಿಂದ ಆಮದು ಮಾಡಿಕೊಂಡ ಚೀನಾಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಹೋರಾಟ ಪ್ರಜಾಪ್ರಭುತ್ವದ ಪರವಾಗಿ ನಡೆಯುತ್ತಿರುವ ಹೋರಾಟ ಇದು ಇನ್ನೂ ಕೂಡ ಮುಂದುವರೆಯುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಚೀನಾ ಸರ್ಕಾರದ ವಿರುದ್ಧದ ಪ್ರತಿಭಟನೆ ಮುಂದುವರಿಸೋದಾಗಿ ತಿಳಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಅಶ್ರುವಾಯು ಉಪಯೋಗಿಸಿದರು ಆದರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ .


ಚೀನಾ ದೇಶದ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳು ಕೆಂಡಾಮಂಡಲವಾಗಿದೆ. ಕೊರಣ ಮಹಾಮಾರಿಯ ನಂತರ ಚೀನಾ ದೇಶದ ದೇಶದ ಬಗೆಗಿನ ಒಲವು ಮಾಯವಾಗುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಎಲ್ಲಾ ರಾಷ್ಟ್ರಗಳು ನಮ್ಮ ಹೆಮ್ಮೆಯ ದೇಶವಾದ ಭಾರತಕ್ಕೆ ಹತ್ತಿರವಾಗುತ್ತಿದೆ.

ಜೈ ಹಿಂದ್ ಜೈ ಭಾರತ್ !!! ನಮ್ಮನ್ನು ಸಪೋರ್ಟ್ ಮಾಡಲು ಪೇಜ್ ಲೈಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement