ಮಂಗಳೂರು, ಜೂ.1: ಕೊರೋನ ವೈರಸ್ ಸೋಂಕಿನ ತಡೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಜಾರಿಗೊಳಿಸಲಾದ ಲಾಕ್‌ಡೌನ್‌ನ ಸಮಯದಲ್ಲಿ ಸ್ವಲ್ಪ ಬದಲಾವಣೆಯನ್ನು ತಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಆದೇಶವನ್ನು ಹೊರಡಿಸಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ನಿಗದಿಯಾಗಿದ್ದ ಲಾಕ್‌ಡೌನ್ ಸಮಯದ ಸಡಿಲಿಕೆ ನಿಯಮವನ್ನು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ವಿಸ್ತರಿಸಿದ್ದಾರೆ.
ಸರಕಾರದ ಪರಿಷ್ಕೃತ ಆದೇಶದ ಪ್ರಕಾರ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ಎಲ್ಲಾ ವ್ಯಕ್ತಿಗಳ ಚಲನವಲನವನ್ನು ಕಟ್ಟುನಿಟ್ಟಾಗಿ ನಿಷೇಧ ಗೊಳಿಸಲಾಗಿದೆ. ಜನರ ಮಧ್ಯೆ ಸುರಕ್ಷಿತ ಅಂತರವು ಕಡ್ಡಾಯ ಆಗಿದ್ದು ಅಂಗಡಿಗಳಲ್ಲಿ ಗ್ರಾಹಕರು ಸಾಮಾಜಿಕ ಮತ್ತು ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳುವುದು, ಒಂದೇ ಸಮಯಕ್ಕೆ ಐದಕ್ಕಿಂತ ಹೆಚ್ಚು ಮಂದಿಯನ್ನು ಅನುಮತಿಸಬಾರದು ಎಂದು ಜಿಲ್ಲಾಧಿಕಾರಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು