ಇಂದಿನ ಭವಿಷ್ಯ ಜೂನ್ 03, 2020

Today astrology in kannada today horoscope in kannada
ಹಣಕಾಸಿನ ವಿಚಾರಕ್ಕೆ ಚಿಂತೆ ಕಾಡಲಿದೆ. ಮಕ್ಕಳ ಭವಿಷ್ಯದ ವಿಚಾರಕ್ಕೆ ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಮದುವೆ ಪ್ರಸ್ತಾವಗಳು ಬಂದರೂ ಗೊಂದಲ ಕಾಡಲಿದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರು ಆಸ್ತಿ ಮಾರಾಟದ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬರಲಿದ್ದೀರಿ.
Today astrology in kannada today horoscope in kannada
ಕೂಡಿಟ್ಟ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡಬೇಕು ಎಂಬ ಆಲೋಚನೆ ಬರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ನಿಮ್ಮ ರಾಶಿಯವರ ಪೈಕಿ ಕೆಲವರು ವಾಹನ, ಮನೆ ಖರೀದಿಗಾಗಿ ಬ್ಯಾಂಕ್ ನಲ್ಲಿ ಸಾಲ ದೊರೆಯುವ ಬಗ್ಗೆ ವಿಚಾರಣೆ ನಡೆಸಲಿದ್ದೀರಿ.

Today astrology in kannada today horoscope in kannada
ಹೊಸ ವ್ಯಾಪಾರ, ವ್ಯವಹಾರ ಶುರು ಮಾಡುವ ಬಗ್ಗೆ ಸ್ನೇಹಿತರು, ಬಂಧುಗಳ ಸಲಹೆ- ಸಹಾಯ ಪಡೆಯುವ ಸಾಧ್ಯತೆ ಇದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ನಾನಾ ಒತ್ತಡ ಕಂಡುಬಂದರೂ ಅದನ್ನು ನಿವಾರಿಸಿಕೊಳ್ಳಲು ನಿಮ್ಮ ಬುದ್ಧಿಶಕ್ತಿಯ ಸಹಾಯದಿಂದ ಸಾಧ್ಯವಾಗುತ್ತದೆ.

Today astrology in kannada today horoscope in kannada
ನೆಮ್ಮದಿಯಿಂದ ದಿನ ಕಳೆಯಲು ಸೂಕ್ತ ವಾತಾವರಣ ಇರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಕಲಾವಿದರು, ಸಂಗೀತಗಾರರಿಗೆ ಗೌರವ, ಮನ್ನಣೆ ದೊರೆಯಲಿದೆ. ಸಂಗಾತಿ- ಮಕ್ಕಳ ಜತೆಗೂಡಿ ಮನರಂಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ.

Today astrology in kannada today horoscope in kannada
ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ತಂದೆ- ತಾಯಿ ನಿಮ್ಮ ನಡವಳಿಕೆ ಹಾಗೂ ಕೆಲಸ- ಕಾರ್ಯಗಳನ್ನು ಮೆಚ್ಚಿಕೊಳ್ಳಲಿದ್ದಾರೆ. ದೇವತಾರಾಧನೆ ಆಯೋಜನೆ ಜವಾಬ್ದಾರಿ ನಿಮಗೆ ನೀಡಬಹುದು. ಈ ದಿನ ಇತರರ ವೈಯಕ್ತಿಕ ಸಂಗತಿಗಳಲ್ಲಿ ತಲೆ ಹಾಕಬೇಡಿ.

Today astrology in kannada today horoscope in kannada
ನಿಮ್ಮ ಆಲೋಚನೆ, ಯೋಚನೆಗಳನ್ನು ಅನುಷ್ಠಾನಕ್ಕೆ ತರಲು ಸೂಕ್ತ ಅವಕಾಶವೊಂದು ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆಗೆ ಪ್ರಯತ್ನ ಮಾಡಲಿದ್ದೀರಿ. ಸಾಂಸಾರಿಕ ವಿಚಾರಗಳನ್ನು ಹೊಸಬರೊಂದಿಗೆ ಹಂಚಿಕೊಳ್ಳಬೇಡಿ. ಚರ್ಮ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada
ತಲೆ ನೋವು, ಹಲ್ಲು ನೋವು ಇಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಉದ್ಯೋಗ ಸ್ಥಳದಲ್ಲಿ ಬೇಕೆಂತಲೇ ನಿಮ್ಮ ತಪ್ಪುಗಳನ್ನು ಎತ್ತಾಡಿ, ಅವಮಾನಕ್ಕೆ ಗುರಿ ಮಾಡಬಹುದು. ಈ ಸಮಯದಲ್ಲಿ ಸಂಯಮ ಕಾಯ್ದುಕೊಳ್ಳುವುದು ತುಂಬ ಮುಖ್ಯ. ಸಂಗಾತಿಯಿಂದ ಯಾವುದೇ ಮುಖ್ಯ ವಿಚಾರವನ್ನು ಮುಚ್ಚಿಡಬೇಡಿ.

Today astrology in kannada today horoscope in kannada
ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಅದಕ್ಕಾಗಿ ಸಾಲ ಮಾಡಬಹುದು. ಆದರೆ ಹಣದ ಖರ್ಚಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಮಕ್ಕಳ ಓಡಾಟದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಸಣ್ಣ- ಪುಟ್ಟ ಗಾಯಗಳಾಗುವ ಸಾಧ್ಯತೆ ಇದೆ.

Today astrology in kannada today horoscope in kannada
ಸೈಟು, ಮನೆ ಖರೀದಿ ವ್ಯವಹಾರಗಳನ್ನು ಮುಂದಕ್ಕೆ ಹಾಕುವುದು ಉತ್ತಮ. ದಾಖಲೆ ಪತ್ರಗಳನ್ನು ಪರಿಶೀಲಿಸುವಾಗ ಹಿರಿಯರು, ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಸುಳ್ಳು ಮಾಹಿತಿ ನೀಡಿ, ಕೆಲವರು ನಿಮ್ಮನ್ನು ದಾರಿ ತಪ್ಪಿಸುವುದಕ್ಕೆ ಪ್ರಯತ್ನಿಸಬಹುದು. ಆದ್ದರಿಂದ ನಯವಾದ ಮಾತುಗಳಾಡುವ ವಂಚಕರಿಂದ ದೂರ ಇರಿ.

Today astrology in kannada today horoscope in kannada
ಸಹೋದ್ಯೋಗಿಗಳ ಬೆಂಬಲ ಇಲ್ಲದೆ ಕೆಲಸ- ಕಾರ್ಯದಲ್ಲಿ ಹಿನ್ನಡೆ ಆಗಲಿದೆ. ಸಂಗಾತಿ, ಮಕ್ಕಳ ಸಲುವಾಗಿ ಹಣ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕಾಲು, ಬೆನ್ನು ನೋವಿನಂಥ ಆರೋಗ್ಯ ಸಮಸ್ಯೆಗಳು ಕಾಡಬಹುದು.

Today astrology in kannada today horoscope in kannada
ಧಾರ್ಮಿಕ, ಅಧ್ಯಾತ್ಮ ಚಿಂತನೆ ಕಡೆಗೆ ಮನಸ್ಸು ವಾಲುತ್ತದೆ. ಕುಟುಂಬದ ಹಿರಿಯರ ಸದಸ್ಯರ ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚಾಗಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಗೌರವ- ಮನ್ನಣೆ ದೊರೆಯಲಿದೆ. ಕಿರು ಪ್ರಯಾಣ ಮಾಡಲಿದ್ದು, ಇದರಿಂದ ಉದ್ಯೋಗ ವಿಚಾರದಲ್ಲಿ ಅನುಕೂಲ ಇದೆ.

Today astrology in kannada today horoscope in kannada
ನಾಲಗೆ ಮೇಲೆ ಹಿಡಿತ ಇರಲಿ. ಅದು ಊಟ- ತಿಂಡಿ ವಿಚಾರ ಇರಲಿ ಅಥವಾ ಮಾತಿನ ಬಗ್ಗೆಯೇ ಇರಲಿ, ಬಹಳ ಎ‌ಚ್ಚರಿಕೆಯನ್ನು ವಹಿಸಬೇಕು. ಪ್ರಭಾವಿ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸುವಂತಿದ್ದರೆ ಆದ್ಯತೆ ಏನು ಎಂಬುದನ್ನು ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಇಡಿ. ಇಲ್ಲದಿದ್ದರೆ ಅಪಾಯ ಎದುರಾಗಬಹುದು

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement