ಇಂದಿನ ಭವಿಷ್ಯ ಮೇ 28, 2020



Today astrology in kannada today horoscope in kannada
ನೇರವಾದ ಮಾತುಗಳನ್ನು ಆಡುವ ಮೂಲಕ ಸಮಾನ ಸಂಖ್ಯೆಯಲ್ಲಿ ಮಿತ್ರರನ್ನು- ಶತ್ರುಗಳನ್ನು ಪಡೆಯುತ್ತೀರಿ. ಕೆಲವು ವ್ಯವಹಾರಗಳಲ್ಲಿ ಹಿನ್ನಡೆ ಆಗಬಹುದು. ಮುಖ್ಯವಾಗಿ ಕಾನೂನು ವ್ಯವಹಾರಗಳಿದ್ದಲ್ಲಿ ಸೂಕ್ತ ದಾಖಲೆ- ಪತ್ರಗಳನ್ನು ಹೊಂದಿಸಿಕೊಳ್ಳುವುದು ನಿಮಗೆ ಕಷ್ಟ ಆಗಬಹುದು.
Today astrology in kannada today horoscope in kannada
ಹೋಟೆಲ್ ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಹಣದ ಅಗತ್ಯ ವಿಪರೀತ ಹೆಚ್ಚಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ನಿರೀಕ್ಷಿತವಾದ ಬೆಂಬಲ ದೊರೆಯುವುದಿಲ್ಲ. ನೀವಾಗಿಯೇ ಹುಡುಕಿಕೊಂಡು ಕೆಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ. ಮುಖ್ಯವಾಗಿ ಬೇರೆಯವರ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ.




Today astrology in kannada today horoscope in kannada
ಕೂಡಿಟ್ಟ ಹಣವನ್ನೆಲ್ಲ ಒಗ್ಗೂಡಿಸಿಕೊಂಡು ಹೊಸ ವ್ಯಾಪಾರ- ವ್ಯವಹಾರ ನಡೆಸಲು ಸಿದ್ಧತೆ ಶುರು ಮಾಡುತ್ತೀರಿ. ಮುಖ್ಯವಾದ ವ್ಯಕ್ತಿಗಳ ಭೇಟಿಯಿಂದ ಹಲವು ಅಗತ್ಯಗಳು ನಿಮ್ಮ ಗಮನಕ್ಕೆ ಬರುತ್ತದೆ. ಆಲೋಚನಾ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಾಗುವಂಥ ಬೆಳವಣಿಗೆಗಳು ನಡೆಯುತ್ತವೆ.





Today astrology in kannada today horoscope in kannada
ಸಂಗೀತಗಾರರಿಗೆ ಮುಖ್ಯ ಒಪ್ಪಂದಗಳು ಏರ್ಪಡುವ ಸಾಧ್ಯತೆ ಇದೆ. ಆದರೆ ಈ ವಿಚಾರದಲ್ಲಿ ಸ್ಪಷ್ಟತೆ ಬಹಳ ಮುಖ್ಯ. ಗೊಂದಲಗಳು ಇದ್ದಲ್ಲಿ ಮುಂದುವರಿಯಬೇಡಿ. ಸಂಗಾತಿ ಹೇಳಿದ ಮಾತುಗಳಲ್ಲಿನ ಸಾಧ್ಯಾಸಾಧ್ಯತೆ ಬಗ್ಗೆ ಕೂಡ ಆಲೋಚನೆ ಮಾಡುವುದು ಉತ್ತಮ. ಯಾವುದೇ ಮುಖ್ಯ ಕೆಲಸ ಮಾಡುವ ಮುನ್ನ ವಿಷ್ಣುವಿನ ಸ್ಮರಣೆ ಮಾಡಿ.






Today astrology in kannada today horoscope in kannada
ಮನೆಯಲ್ಲಿ ಕೈಗೊಳ್ಳಬೇಕಿರುವ ಎಲೆಕ್ಟ್ರಿಕ್, ಮರ ಅಥವಾ ಪೇಂಟಿಂಗ್ ಕೆಲಸಗಳಿಗೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಇದರಿಂದ ಮನಸಿಗೆ ಸಮಾಧಾನ ದೊರೆಯಲಿದೆ. ತಂದೆ- ತಾಯಿ ನಿಮ್ಮ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲಿದ್ದಾರೆ. ಈ ಹಿಂದೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ನಿವಾರಣೆ ಆಗುತ್ತವೆ.





Today astrology in kannada today horoscope in kannada
ಆದಾಯ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ನಾನಾ ಬಗೆಯ ಪ್ರಯತ್ನಗಳನ್ನು ಮಾಡುತ್ತೀರಿ. ಸಂಬಂಧಿಕರು, ಸ್ನೇಹಿತರು ಹಣದ ನೆರವು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲದಂಥ ಕಾರಣಗಳನ್ನು ಅವರು ನೀಡಬಹುದು.






Today astrology in kannada today horoscope in kannada
ಸೋದರ- ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಈ ಹಿಂದೆ ಯಾವ ವಿಚಾರಕ್ಕೆ ಮನಸ್ತಾಪ ಆಗಿತ್ತೋ ಅದನ್ನು ಬಗೆಹರಿಸಿಕೊಂಡು, ಕುಟುಂಬದಲ್ಲಿ ಸಂತೋಷದ ವಾತಾವರಣಕ್ಕೆ ಸೂಕ್ತ ವೇದಿಕೆ ನಿರ್ಮಾಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮಿಂದ ಯಾವುದೋ ಸಂಗತಿ ಮುಚ್ಚಿಡುತ್ತಿದ್ದಾರೆ ಎಂಬ ಭಾವನೆ ಮೂಡಲಿದೆ.





Today astrology in kannada today horoscope in kannada
ಸ್ನೇಹಿತರು ಕೇಳುವ ಸಹಾಯಕ್ಕೆ ಇಲ್ಲ ಅಥವಾ ಹೌದು ಎಂದು ಹೇಳಲು ಸಾಧ್ಯವಿಲ್ಲದಂಥ ಸಂದಿಗ್ಧಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಮನೆಯಲ್ಲಿ ಸಂಗಾತಿ- ಮಕ್ಕಳ ಅಗತ್ಯಗಳನ್ನು ಪೂರೈಸುವ ಕಡೆಗೆ ಹೆಚ್ಚಿನ ಗಮನ ನೀಡಿ. ಜೀರ್ಣ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆ ಇರುವವರು ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.






Today astrology in kannada today horoscope in kannada
ಕುಟುಂಬದಲ್ಲಿ ನಿಮಗೆ ಮೊದಲಿನ ಗೌರವ ಸಿಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಊಟ- ತಿಂಡಿ ರುಚಿಸುವುದಿಲ್ಲ. ಸರಿಯಾಗಿ ನಿದ್ರೆಯೂ ಬಾರದೆ ದೇಹಾಲಸ್ಯ ಹೆಚ್ಚಾಗುತ್ತದೆ. ದುಡ್ಡಿನ ವಿಚಾರದಲ್ಲಿ ನೀವು ನಂಬಿದ ವ್ಯಕ್ತಿಗಳು ಏನೋ ಮುಚ್ಚಿಡುತ್ತಿದ್ದಾರೆ ಎಂದೆನಿಸಿ, ಬೇಸರ ಮೂಡುತ್ತದೆ.





Today astrology in kannada today horoscope in kannada
ಯಾರಿಗೂ ಬೇಡದ ಸಂಗತಿಗಳ ಕಡೆಗೆ ನೀವು ಸಹ ಹಾಗೇ ಇದ್ದು ಬಿಡುವುದು ಉತ್ತಮ. ಇಲ್ಲದಿದ್ದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅನಗತ್ಯ ಕುತೂಹಲ ತೋರಿಸಿದರೆ ಸಲ್ಲದ ಅನುಮಾನಕ್ಕೆ ಕಾರಣ ಆಗಬಹುದು. ಉದ್ಯೋಗ ವಿಚಾರದಲ್ಲಿ ಮೊದಲಿನ ಉತ್ಸಾಹ ಕಳೆದುಕೊಳ್ಳುವ ಅವಕಾಶ ಇದೆ. ಹಾಗೆ ಆಗದಂತೆ ನೋಡಿಕೊಳ್ಳಿ.





Today astrology in kannada today horoscope in kannada
ದೂರ ಪ್ರಯಾಣ ಮಾಡುವ ಯೋಗ ಇದೆ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯ ನೀಡಬೇಕಾಗುತ್ತದೆ. ಅಧಿಕಾರ ಕೇಂದ್ರದಲ್ಲಿ ಇರುವವರಿಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಸ್ವತಂತ್ರ ಆಲೋಚನೆ, ತೀರ್ಮಾನಗಳು ಹಾಗೂ ಗಟ್ಟಿ ನಿರ್ಧಾರದ ಮೂಲಕ ಇತರರ ಗಮನ ಸೆಳೆಯುತ್ತೀರಿ.






Today astrology in kannada today horoscope in kannada
ಸೋಷಿಯಲ್ ಮೀಡಿಯಾ ನಿರ್ವಹಣೆ ಮಾಡುತ್ತಿರುವವರಿಗೆ ವಿಪರೀತ ಒತ್ತಡದ ದಿನವಾಗಿರುತ್ತದೆ. ಖರ್ಚಿನ ಪ್ರಮಾಣ ಹೆಚ್ಚಾಗಿ, ಅದಕ್ಕೆ ತಕ್ಕಂತೆ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಾಡುತ್ತೀರಿ. ಹಳೆ ಗೆಳೆಯರ ಭೇಟಿಯಿಂದ ನಿರಾಳ ಭಾವ ಮೂಡುತ್ತದೆ. ಮನೆ ಬದಲಾವಣೆ ಬಗ್ಗೆ ಆಲೋಚನೆ ಬರುತ್ತದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement