ನವದೆಹಲಿ: ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮಾಜಿ ನಾಯಕ ಎಂ.ಎಸ್.ಧೋನಿ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಏಪ್ರಿಲ್ 2 ಮೈಲಿಗಲ್ಲು ಒಂದು ಅಚ್ಚಳಿಯದ ನೆನಪಾಗಿ ಉಳಿದಿದೆ. ಇದೇ ದಿನ ಭಾರತವು 28 ವರ್ಷಗಳ ನಂತರ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿತು. ಎಂ.ಎಸ್.ಧೋನಿ ಮತ್ತು ಗೌತಮ್ ಗಂಭೀರ್ ಅವರಿಬ್ಬರೂ 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗನ್ನು ಮಾಡಿ ತಂಡದ ಗೆಲುವಿಗೆ ತಮ್ಮ ತಮ್ಮ ಕೊಡುಗೆಯನ್ನು ನೀಡಿದ್ದರು. ಭಾರತ ದೇಶವು ಗುರುವಾರ ಐತಿಹಾಸಿಕ ದಿನದ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಭಾರತೀಯ ಕ್ರಿಕೆಟ್‍ನ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಅತ್ಯದ್ಭುತ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಯುವರಾಜ್ ಸಿಂಗ್ ಬದಲು ಐದನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಲು ಬಂದರು. ಮಹೇಂದ್ರ ಸಿಂಗ್ ಧೋನಿ ಆ ನಿರ್ಧಾರವನ್ನು ಇಂದಿಗೂ ಕೂಡ ಅನೇಕರು ಶ್ಲಾಘಿಸುತ್ತಾರೆ. ಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿ ಅವರು ಅಜೇಯ 91 ರನ್ ಗಳಿಸಿದ್ದರು. ಕೊನೆಗೆ ಸಿಕ್ಸ್ ಸಿಡಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ಇತ್ತ ಗೌತಮ್ ಗಂಭೀರ್ ಕೂಡ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಆರಂಭಿಕವಾಗಿ ಮೊದಲೇ ಔಟ್ ಆಗಿದ್ದರಿಂದ ನಂತರ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದರು. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು.
ಟೂರ್ನಿಯುದ್ದಕ್ಕೂ ಮತ್ತು ಫೈನಲ್ ಪಂದ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ನಿರ್ಣಾಯಕವಾಗಿದ್ದರೂ ಕೂಡ ಎಂ.ಎಸ್.ಧೋನಿ ಅವರ ಫಿನಿಶಿಂಗ್ ಸಿಕ್ಸ್ ಗೆ ಹೆಚ್ಚು ಮಹತ್ವವನ್ನು ನೀಡಲಾಗಿತ್ತು. ಇದೇ ವಿಚಾರವಾಗಿ ಗೌತಮ್ ಗಂಭೀರ್ ತುಂಬಾನೇ ಕೆಂಡಾಮಂಡಲವಾಗಿದ್ದಾರೆ.
ಇದರ ಕುರಿತಾಗಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ‘ಕೇವಲ ಒಂದು ಜ್ಞಾಪನೆ, ವಿಶ್ವಪಕ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಹಾಗೂ ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿಗಳು ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿಯೇ ಬರೆದು ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ದಾದಾ ಗಂಗೂಲಿ ಸಾರಥ್ಯದಲ್ಲಿ ಬಿಸಿಸಿಐ ಎಂಟ್ರಿ.
ಇಡೀ ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕಿನ ವ್ಯಾಪ್ತಿ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೊನಾ ವೈರಸ್ ಸೋಂಕು ತನ್ನ ಪ್ರಭಾವವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಕೇಂದ್ರಸರ್ಕಾರ ಭಾರತದಾದ್ಯಂತ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಿಸಿ ಈ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಇಳಿದಿದೆ.
ಇಡೀ ದೇಶಕ್ಕೆ ದೇಶವೇ ಸ್ಥಬ್ಧಗೊಂಡ ಈ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಆರ್ಥಿಕ ನೆರವಿನ ಅಗತ್ಯವಿದೆ. ಇದರ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೇಂದ್ರ ಸರ್ಕಾರಕ್ಕೆ ದೊಡ್ಡ ಮೊತ್ತದ ನೆರವನ್ನು ತನ್ನ ಕಡೆಯಿಂದ ಘೋಷಿಸಿದೆ.
ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ದಾದಾ ಗಂಗೂಲಿ ಸಾರಥ್ಯದಲ್ಲಿ ಬಿಸಿಸಿಐ ಎಂಟ್ರಿ.
ಬಿಸಿಸಿಐ ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತುಪರಿಸ್ಥಿತಿಗಳ ಪರಿಹಾರ ನಿಧಿಗೆ 51 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ಘೋಷಿಸಿದೆ. ಈ ಮೂಲಕ ವಿಶ್ವದಾದ್ಯಂತ ಶರವೇಗ ವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನ ಕೈಜೋಡಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಹಾಗೂ ಕಾರ್ಯದರ್ಶಿ ಜೈ ಶಾ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತೆಗೆದುಕೊಂಡಿರುವ ಈ ನಿಲುವಿಗೆ ದೇಶದ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳು ಟ್ವಿಟ್ಟರ್‌ನಲ್ಲಿ ಬಿಸಿಸಿಐನ ನಿರ್ಧಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ.
ಸೆಲ್ಫಿಗಾಗಿ ತನ್ನ ಬಳಿಗೆ ಬಂದವಳಿಗೆ ವಿರಾಟ್ ಪ್ರತಿಕ್ರಿಯೆ ಹೀಗಿತ್ತು.
ಭಾರತದಲ್ಲಿ ಈಗಾಗಲೇ ಕೋರೋಣ ವೈರಸ್ ಭೀತಿ ಹೆಚ್ಚಾಗಿದೆ ಅದರಿಂದ ತಪ್ಪಿಸಿಕೊಳ್ಳಲು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದಾರೆ ಇಂಥದೇ ಪರಿಸ್ಥಿತಿ ವಿರಾಟ್ ಕೊಹ್ಲಿಗೆ ಕೂಡ ಎದುರಾಯಿತು.
ಇಂದು ವಿರಾಟ್ ಕೊಹ್ಲಿ ದೆಹಲಿಯ ಏರ್ಪೋರ್ಟ್ ನಿಲ್ದಾಣದಿಂದ ಹೊರಗೆ ಬರುತ್ತಿದ್ದಾಗ ಒಬ್ಬಳು ವಿರಾಟ್ ಕೊಹ್ಲಿಯ ಜೊತೆ ಸೆಲ್ಫಿಗಾಗಿ ಅವನತ್ತ ಓಡಿಬಂದಳು ಆದರೆ ವಿರಾಟ್ ಕೊಹ್ಲಿ ಅದನ್ನು ಗಮನಿಸದೆ ತಮ್ಮಷ್ಟಕ್ಕೆ ತಾವು ಹೊರನಡೆದರು.ಹೇಳಬಹುದು ಈ ರೀತಿಯ ಮೂಲಕ ವಿರಾಟ್ ಕೊಹ್ಲಿ ಅವರು ಕೋರೋಣ ವೈರಸ್ ಭಯದಿಂದ ತಮ್ಮನ್ನು ತಾವು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಎಂದೇ ಹೇಳಬಹುದು.
ಬಳಿಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮಾಡಿ ವಿಡಿಯೋ ಮೂಲಕ ಸಾರ್ವಜನಿಕರಲ್ಲಿ ಕುರುವಿನ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರಯತ್ನಪಟ್ಟರು ಹಾಗೂ ಕೋರೋಣ ವಯಸ್ಸಿನಿಂದ ಸುರಕ್ಷಿತವಾಗಿರುವಂತೆ ಮನವಿ ಮಾಡಿಕೊಂಡರು
ಕುರುಣಾ ವೈರಸ್ ವಿರುದ್ಧ ಹೋರಾಡಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ನುಡಿದರು.
ಕುರುಡಮಲೆ ಇಂದು ಜಗತ್ತಿನಾದ್ಯಂತ ಹರಡಿದ್ದು ಇದರಿಂದಾಗಿ ಎಲ್ಲಾ ಕ್ರೀಡಾಕೂಟಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಇದರಲ್ಲಿ ಐಪಿಎಲ್ ಕೂಡ ಒಂದಾಗಿದ್ದು ಇದು ಅಭಿಮಾನಿಗಳಿಗೆ ಬಹಳ ಬೇಸರ ಉಂಟುಮಾಡಿದೆ.