ಕುಂದಾಪುರ, ಮೇ 28: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದೆ. ಪಿಎಂ ಮೋದಿಯವರ ದೊಡ್ಡ ಅಭಿಮಾನಿಯಾಗಿರುವ ತಾಲ್ಲೂಕಿನ ಆಟೋರಿಕ್ಷಾ ಚಾಲಕ ಸಾರ್ವಜನಿಕರಿಗೆ ಏಳು ದಿನಗಳವರೆಗೆ ಐದು ಕಿ.ಮೀ ಪ್ರಯಾಣಕ್ಕೆ ಕೇವಲ 1 ರೂ. ದರದಲ್ಲಿ ಒದಗಿಸುತ್ತಿದ್ದಾರೆ.
ಸತೀಶ್ ಪ್ರಭು ಆಟೋ ಡ್ರೈವರ್ ಆಗಿದ್ದು, ಪ್ರಧಾನಿ ಮೋದಿ ಅವರ ಮೇಲಿನ ಗೌರವ ಮತ್ತು ಪ್ರೀತಿಯಿಂದ ಇದನ್ನು ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರು ಕಡಿಮೆ ದರದ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದಾರೆ.
ಮೋದಿ ಆಳ್ವಿಕೆಯ ಮೊದಲ ವರ್ಷದಲ್ಲಿ ಸತೀಶ್ ಒಂದು ದಿನದ ಸವಾರಿಯಲ್ಲಿ ರಿಯಾಯಿತಿ ಸೇವೆಯನ್ನು ನೀಡಿದರು ಮತ್ತು ತರುವಾಯ ವರ್ಷಗಳು ಕಳೆದಂತೆ ಅದನ್ನು ಒಂದು ದಿನ ಹೆಚ್ಚಿಗೆ ಏರಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಳನೇ ವರ್ಷಕ್ಕೆ ಕಾಲಿಟ್ಟಿದ್ದರಿಂದ ಈ ವರ್ಷ ಅವರು ಏಳು ದಿನಗಳ ಕಾಲ ಈ ಸೇವೆಯನ್ನು ನೀಡುತ್ತಿದ್ದಾರೆ.
ಆರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ಏಳನೇ ವರ್ಷಕ್ಕೆ ಕಾಲಿಟ್ಟ ಮೋದಿ ಸರ್ಕಾರವು ಭ್ರಷ್ಟಾಚಾರ ರಹಿತ ಆಡಳಿತವನ್ನು ಸಾರ್ವಜನಿಕರಿಗೆ ನೀಡಿದೆ. ಅವರ ಅಭಿಮಾನಿಯಾಗಿ ಅವರಿಗೆ ನೀಡುವ ಸಣ್ಣ ಕಾಣಿಕೆ ಎಂದು ಹೇಳಿದ್ದಾರೆ.
ಕುಂದಾಪುರದ ಸ್ಥಳೀಯರು ಕೂಡ ಸತೀಶ್ ಪ್ರಭು ಅವರ ಕಡಿತ ದರ ಸೇವೆಯನ್ನು ಇಷ್ಟಪಟ್ಟು ಇಂತಹ ಜನ ಸ್ನೇಹಿ ವ್ಯಕ್ತಿಯನ್ನು ಆಡಳಿತವು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
Tags:
ಉಡುಪಿ ಜಿಲ್ಲಾ ಸುದ್ದಿಗಳು